ಶ್ರೇಯಸ್ ಅಯ್ಯರ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆವೃತ್ತಿಯ ಪಂಜಾಬ್ ಕಿಂಗ್ಸ್ ತಂಡದ ನಾಯಕರನ್ನಾಗಿ ಅಧಿಕೃತವಾಗಿ ನೇಮಿಸಲಾಗಿದೆ.
ಅಯ್ಯರ್ ಮತ್ತು ಪಿಬಿಕೆಎಸ್ ಕೋಚ್ ರಿಕಿ ಪಾಂಟಿಂಗ್ ಐಪಿಎಲ್ ಫ್ರಾಂಚೈಸಿಗೆ ನಾಯಕತ್ವದ ಜೋಡಿಯಾಗಿ ಮತ್ತೆ ಒಂದಾಗಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಜೊತೆಯಾಗಿದ್ದ ಈ ಜೋಡಿ 2020 ರಲ್ಲಿ ತಂಡವನ್ನು ಮೊದಲ ಐಪಿಎಲ್ ಫೈನಲ್‌ಗೆ ಮುನ್ನಡೆಸಿದ್ದರು.
ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಪಂಜಾಬ್ ಫ್ರಾಂಚೈಸಿಯು 26.75 ಕೋಟಿ ರೂ.ಗೆ ಅಯ್ಯರ್ ಅವರನ್ನು ಖರೀದಿಸಿತ್ತು. ಐಪಿಎಲ್ ಇತಿಹಾಸದಲ್ಲಿ ಅಯ್ಯರ್ ಎರಡನೇ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ.
ಶ್ರೇಯಸ್ ಅಯ್ಯರ್ 2024 ರ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ತಮ್ಮ ಮೂರನೇ ಐಪಿಎಲ್
ಟ್ರೋಫಿಗೆ ಮುನ್ನಡೆಸಿದ್ದರು. ಆದರೆ ಐಪಿಎಲ್ 2025 ರ ಹರಾಜಿಗೆ ಮುಂಚಿತವಾಗಿ ಫ್ರಾಂಚೈಸಿಯಿಂದ ಬಿಡುಗಡೆ ಮಾಡಲಾಯಿತು.
2025 ರ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸುವ ಮೂಲಕ ಅಯ್ಯರ್ ಇತಿಹಾಸ ಸೃಷ್ಟಿಸಲು
ಸಜ್ಜಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕ್ರಿಕೆಟ್ | ಟೀಂ ಇಂಡಿಯಾ ನಿದ್ದೆಗೆಡಿಸಿದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್!
ಮೂರು ವಿಭಿನ್ನ ಐಪಿಎಲ್ ತಂಡಗಳನ್ನು ಮುನ್ನಡೆಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ
ಪಾತ್ರರಾಗಿದ್ದಾರೆ. 2024 ರ ಐಪಿಎಲ್ ವಿಜೇತ ನಾಯಕ ಈ ಹಿಂದೆ ಡಿಸಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)
ತಂಡಗಳನ್ನು ಮುನ್ನಡೆಸಿದ್ದಾರೆ.
ಐಪಿಎಲ್ 18ನೇ ಆವೃತ್ತಿ ಮಾರ್ಚ್ 21ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಂಡಾಂಗಣದಲ್ಲಿ ಕೆಕೆಆರ್ ಮತ್ತು ಎಸ್‌ಆರ್‌ಎಚ್ ತಂಡಗಳು ಮೊದಲ ಪಂದ್ಯ ಆಡುವುದರೊಂದಿಗೆ ಆರಂಭವಾಗಲಿದೆ. ಫೈನಲ್ ಪಂದ್ಯ ಮೇ 25ರಂದು ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ.
2024ರಲ್ಲಿ ಕೆಕೆಆರ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರೆ, ಎಸ್‌ಆರ್‌ಎಚ್ ರನ್ನರ್ಸ್ ಅಪ್ ಸ್ಥಾನ ಪಡೆದಿತ್ತು.
