ಚಂಡೀಗಢದ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 27ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ವಿರೋಚಿತವಾಗಿ ಸೋಲನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡ ಯಾವುದೇ ಬ್ಯಾಟರ್‌ಗಳ ಅರ್ಧಶತಕವಿಲ್ಲದೇ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್‌ಗಳ ಸಾಧಾರಣ ಮೊತ್ತ ಗಳಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 148 ರನ್‌ಗಳ ಗುರಿ ನೀಡಿತ್ತು.
RAJASTHAN ROYALS DEFEATED PUNJAB KINGS IN MULLANPUR. 🤯
– Another RR Vs PBKS blockbuster. 💥 pic.twitter.com/lh73By8B7V
— Mufaddal Vohra (@mufaddal_vohra) April 13, 2024
ಈ ಗುರಿಯನ್ನು ಬೆನ್ನತ್ತಿದ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡವು, 19.5 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡರೂ ಕೂಡ, ಗುರಿ ಮುಟ್ಟುವಲ್ಲಿ ಯಶಸ್ವಿಯಾಯಿತು.
ಕೊನೆಯ ಓವರ್‌ನಲ್ಲಿ ಗೆಲುವಿಗೆ 10 ರನ್‌ಗಳ ಅವಶ್ಯಕತೆ ಇದ್ದಾಗ ಶಿಮ್ರಾನ್ ಹೆಟ್ಮಾಯರ್ ಎರಡು ಸಿಕ್ಸರ್ ಬಾರಿಸುವ ಮೂಲಕ ರೋಚಕ ಗೆಲುವಿಗೆ ಕಾರಣರಾದರು. ಶಿಮ್ರಾನ್ ಹೆಟ್ಮಾಯರ್ ಕೇವಲ 10 ಎಸೆತಗಳಲ್ಲಿ ಅಮೂಲ್ಯ 27 ರನ್‌ಗಳನ್ನು ಬಾರಿಸುವ ಮೂಲಕ ಮಿಂಚಿದರು.
ಪಂಜಾಬ್ ನೀಡಿದ್ದ ಗುರಿ ಸಾಧಾರಣವಾಗಿದ್ದರೂ ಕೂಡ ರಾಜಸ್ಥಾನ್‌ನ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು. ಕೊನೆಯ ಮೂರು ಓವರ್‌ಗಳಲ್ಲಿ ಪಂಜಾಬ್ ಬಿಗು ಬೌಲಿಂಗ್ ನಡೆಸಿದ ಹಿನ್ನೆಲೆಯಲ್ಲಿ ಪಂದ್ಯವು ರೋಚಕತೆಯ ಕಡೆಗೆ ಸಾಗಿತಾದರೂ, ಕೊನೆಯಲ್ಲಿ ಗೆಲುವು ರಾಜಸ್ಥಾನದ್ದಾಯಿತು.
Super Hetmyer 🔥🔥🔥
He shows his power with a 10-ball 27 as Rajasthan Royals hand Punjab Kings another close loss
👉 https://t.co/11THFeFG8i pic.twitter.com/H4eklHMtZX
— ESPNcricinfo (@ESPNcricinfo) April 13, 2024
ರಾಜಸ್ಥಾನ ಪರ ಬ್ಯಾಟಿಂಗ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ 39 ರನ್, ತನುಷ್ ಕೋಟ್ಯಾನ್ 24, ರಿಯಾನ್ ಪರಾಗ್ 23, ಸಂಜು ಸ್ಯಾಮ್ಸನ್ 18, ರೋವ್‌ಮನ್ ಪೊವೆಲ್ 11 ಹಾಗೂ ಧ್ರುವ್ ಜುರೆಲ್ 6 ರನ್ ಗಳಿಸಿದರು.
ಪಂಜಾಬ್ ಪರ ಬೌಲಿಂಗ್‌ನಲ್ಲಿ ರಬಾಡಾ ಹಾಗೂ ಸ್ಯಾಮ್ ಕರನ್ 2 ವಿಕೆಟ್ ಪಡೆದರೆ, ಅರ್ಷ್‌ದೀಪ್ ಸಿಂಗ್, ಲಿವಿಂಗ್‌ಸ್ಟನ್, ಹರ್ಷಲ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
ರಾಜಸ್ಥಾನ್ ರಾಯಲ್ಸ್ ತಂಡವು ಈವರೆಗೆ ಆಡಿರುವ ಆರು ಪಂದ್ಯಗಳ ಪೈಕಿ ಒಂದು ಸೋಲು ಹಾಗೂ ಐದು ಗೆಲುವಿನೊಂದಿಗೆ 10 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
