ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ, ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ದಿನದ ಆಟ ಆರಂಭವಾಗುವ ಮೊದಲೇ ದೊಡ್ಡ ತಪ್ಪನ್ನು ಎಸಗಿದ್ದಾರೆ.
ಈ ಟೆಸ್ಟ್ ಪಂದ್ಯದಲ್ಲಿ ಜಡೇಜಾ 89 ರನ್ ಗಳಿಸಿ ತಂಡಕ್ಕೆ ನರವಾದರೂ, ಅವರು ಬಿಸಿಸಿಐ ನಿಯಮವನ್ನು ಮುರಿದಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ನಂತರ, ಬಿಸಿಸಿಐ ಎಲ್ಲ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಕೆಲವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಳಲಾಗಿತ್ತು. ಆದಾಗ್ಯೂ, ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಎರಡನೇ ದಿನದ ಆಟ ಪ್ರಾರಂಭವಾಗುವ ಮೊದಲು, ಜಡೇಜಾ ಒಂದು ದೊಡ್ಡ ನಿಯಮವನ್ನು ಮುರಿದರು, ಇದಕ್ಕಾಗಿ ಮಂಡಳಿಯಿಂದ ಶಿಕ್ಷೆಯಾಗುತ್ತದೆಯೇ ಎಂಬುದರ ಮೇಲೆ ಎಲ್ಲರ ಕುತೂಹಲ ಮೂಡಿದೆ.
ಎರಡನೇ ದಿನದ ಆಟ ಶುರು ಆಗುವುದಕ್ಕೂ ಮುನ್ನ, ಟಮ ಇಂಡಿಯಾ ತಮ್ಮ ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ಬರುತ್ತಿದ್ದಾಗ, ಜಡೇಜಾ ಬಿಸಿಸಿಐ ಮಾಡಿದ ನಿಯಮವನ್ನು ನಿರ್ಲಕ್ಷಿಸಿದರು. ಭಾರತದ 2024-25 ಆಸ್ಟ್ರೇಲಿಯಾ ಪ್ರವಾಸದ ನಂತರ ಜಾರಿಗೆ ತರಲಾದ ಬಿಸಿಸಿಐ ಶಿಷ್ಟಾಚಾರವನ್ನು ರವೀಂದ್ರ ಜಡೇಜಾ ಉಲ್ಲಂಘಿಸಿದರು.
ಇದನ್ನು ಓದಿದ್ದೀರಾ? IND -ENG 2ND Test: ಮೊದಲ ದಿನ ಭಾರತ ಶುಭಾರಂಭ; ಗಿಲ್ ಶತಕ, ಜೈಸ್ವಾಲ್ ಅರ್ಧ ಶತಕ
ಈ ಶಿಷ್ಟಾಚಾರದ ಪ್ರಕಾರ, ಎಲ್ಲ ಆಟಗಾರರು ತಂಡದ ಬಸ್‌ನಲ್ಲಿ ಒಟ್ಟಿಗೆ ಮೈದಾನಕ್ಕೆ ಮತ್ತು ಹೊರಗೆ ಪ್ರಯಾಣಿಸಬೇಕಾಗುತ್ತದೆ, ಇದರಲ್ಲಿ ಯಾವುದೇ ವೈಯಕ್ತಿಕ ಚಲನೆಗೆ ಅವಕಾಶವಿಲ್ಲ, ಆದರೆ ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯದ ಎರಡನೇ ದಿನದಂದು, ಜಡೇಜಾ ತಂಡದ ಬಸ್‌ನಲ್ಲಿ ಕ್ರೀಡಾಂಗಣವನ್ನು ತಲುಪಲಿಲ್ಲ. ಅವರು ಇಲ್ಲಿಗೆ ಒಬ್ಬಂಟಿಯಾಗಿ ಬಂದು ಎಸ್‌ಒಪಿಯನ್ನು ಉಲ್ಲಂಘಿಸಿದರು. ಉಳಿದ ಆಟಗಾರರು ಬರುವ ಮೊದಲು ಅವರು ಎಡ್ಜ್‌ಬಾಸ್ಟನ್ ತಲುಪಿದ್ದರು. ಆದರೆ, ತಂಡದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಜಡೇಜಾ ಈ ನಿಯಮವನ್ನು ಮುರಿದಿದ್ದಾರೆ ಎನ್ನಲಾಗಿದೆ.
ಎರಡನೇ ದಿನದಾಟದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ರವಿಂದ್ರ ಜಡೇಜಾ 89 ರನ್ ಗಳಿಸುವ ಮೂಲಕ ಟೀಂ ಇಂಡಿಯಾ 500 ರನ್ ದಾಟಲು ಕೊಡುಗೆ ನೀಡಿದರು. 7 ವಿಕೆಟ್ ಜೊತೆಯಾಟದಲ್ಲಿ ನಾಯಕ ಶುಭಮನ್ ಗಿಲ್ ಅವರೊಂದಿಗೆ 203 ರನ್ ಪೇರಿಸಿದರು.