ಸರ್ವಾಂಗೀಣ ಪ್ರದರ್ಶನ ನೀಡುವ ಮೂಲಕ ಆರ್‌ಸಿಬಿ ಪ್ಲೇ-ಆಫ್‌ಗೆ ಪ್ರವೇಶಿಸಿದೆ. ಕೊನೆಯವರೆಗೂ ಹೋರಾಟ ನಡೆಸಿದರೂ ಕೂಡ ಚೆನ್ನೈ ಸೂಪರ್ ಕಿಂಗ್ಸ್ ಮನೆಗೆ ಹೋಗಿದೆ. ಆ ಮೂಲಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಇತಿಹಾಸ ಬರೆದಿದೆ. ಕೇವಲ 0.07 ರನ್‌ರೇಟ್ ಅಂತರದಲ್ಲಿ ಫೀನಿಕ್ಸ್‌ನಂತೆ ಎದ್ದು ಬರುವ ಮೂಲಕ ಪ್ಲೇ-ಆಫ್ ಪ್ರವೇಶಿಸಿದ್ದಲ್ಲದೇ, ಹೊಸ ಅಧ್ಯಾಯ ಬರೆದಿದೆ.
ಐಪಿಎಲ್‌ನ ಬಾಕಿ ಇರುವ ಒಂದು ಪ್ಲೇ-ಆಫ್ ಸ್ಥಾನಕ್ಕಾಗಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಆರ್‌ಸಿಬಿ ತಂಡವು ಚೆನ್ನೈಗೆ 219 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಪಂದ್ಯವನ್ನು ಆರ್‌ಸಿಬಿ ಗೆಲ್ಲಬೇಕಿತ್ತಲ್ಲದೇ, ಚೆನ್ನೈ ತಂಡವನ್ನು 200 ರನ್ ಗಡಿ ದಾಟದಂತೆ ನೋಡಿಕೊಳ್ಳಬೇಕಿತ್ತು. ಅದನ್ನು ಕೊನೆಗೂ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಅಭಿಮಾನಿಗಳ ಬೃಹತ್ ದಂಡೇ ಹೊತ್ತುಕೊಂಡಿರುವ ಆರ್‌ಸಿಬಿಯು, ರನ್‌ರೇಟ್ ಆಧಾರದಲ್ಲಿ ಪ್ಲೇ-ಆಫ್ ಪ್ರವೇಶಿಸಿದೆ. ಸತತ 6ನೇ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇಆಫ್ ಸುತ್ತಿಗೆ ಲಗ್ಗೆ ಇಡುವ ಮೂಲಕ, ಯಾರೂ ಕೂಡ ನಿರೀಕ್ಷಿಸದ್ದನ್ನು ಅಕ್ಷರಶಃ ಸಾಧಿಸಿ ತೋರಿಸಿದೆ.
Nail-biting overs like these 📈
Describe your final over emotions with an emoji 🔽
Recap the match on @StarSportsIndia and @JioCinema 💻📱#TATAIPL | #RCBvCSK pic.twitter.com/XYVYvXfton
— IndianPremierLeague (@IPL) May 18, 2024
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊನೆಯ ಓವರ್‌ನಲ್ಲಿ ಪ್ಲೇ-ಆಫ್ ಪ್ರವೇಶಿಸಲು ಕೇವಲ 17 ರನ್ ಬೇಕಿತ್ತು. ಈ ವೇಳೆ ಆರ್‌ಸಿಬಿ ಬೌಲರ್ ಯಶ್ ದಯಾಳ್ ಬೌಲಿಂಗ್ ದಾಳಿಗಿಳಿದರು. ಕ್ರೀಸ್‌ನಲ್ಲಿದ್ದ ಮಹೇಂದ್ರ ಸಿಂಗ್ ಧೋನಿ, ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ಆರ್‌ಸಿಬಿ ಕನಸಿಗೆ ತಣ್ಣೀರೆರಚಿದರು. ಮುಂದಿನ ಎಸೆತದಲ್ಲಿ ಧೋನಿ ವಿಕೆಟ್ ಪಡೆಯುವಲ್ಲಿ ಯಶ್ ದಯಾಳ್ ಯಶಸ್ವಿಯಾದರು.
ಬಳಿಕದ ನಾಲ್ಕು ಎಸೆತದಲ್ಲಿ ಕೇವಲ 7 ರನ್ ನೀಡಿ ಸಿಎಸ್‌ಕೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಪ್ರಮುಖ ಫಿನಿಶರ್ ಎನಿಸಿಕೊಂಡಿದ್ದ ಧೋನಿ ಅವರ ವಿಕೆಟ್ ಅನ್ನು ಪಡೆದುಕೊಂಡಿದ್ದು, ಪಂದ್ಯದಲ್ಲಿ ಪ್ರಮುಖ ತಿರುವು ಪಡೆಯಿತು.
YASH DAYAL DESERVES EVERYTHING! 🥹
Imagine going up against one of the greatest finishers. You held your nerve, you beauty! 🫶#PlayBold #ನಮ್ಮRCB #IPL2024 #RCBvCSK pic.twitter.com/d9oV1WkHuh
— Royal Challengers Bengaluru (@RCBTweets) May 18, 2024
ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 191 ರನ್ ಗಳಿಸಲು ಶಕ್ತವಾಯಿತಲ್ಲದೇ, 27 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಪಂದ್ಯ ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಫಾಫ್ ಡು ಪ್ಲೆಸಿ ಅತ್ಯದ್ಭುತ ಕ್ಯಾಚ್
𝐖𝐇𝐀𝐓. 𝐓𝐇𝐄. 𝐅𝐀𝐅. 🤯#TATAIPL #RCBvCSK #IPLonJioCinema pic.twitter.com/GWuERdGUCL
— JioCinema (@JioCinema) May 18, 2024
15ನೇ ಓವರ್ ಎಸೆದ ಮೊಹಮ್ಮದ್ ಸಿರಾಜ್ ಅವರ ಕೊನೆಯ ಎಸೆತದಲ್ಲಿ ಮಿಚೆಲ್ ಸ್ಯಾಂಟ್ನರ್ ಬೌಂಡರಿ ಕಡೆಗೆ ಬಾರಿಸಿದ್ದ ಬಾಲನ್ನು ಅತ್ಯದ್ಭುತ ಕ್ಯಾಚ್ ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾದ ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿ, ಪಂದ್ಯದಲ್ಲಿ ಪ್ರಮುಖ ತಿರುವಿಗೆ ಕಾರಣವಾದರು.
ಆರ್‌ಸಿಬಿ ನೀಡಿದ್ದ 219 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್, ಎರಡನೇ ಇನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲಿ ನಾಯಕ ಋತುರಾಜ್ ಗಾಯಕ್ವಾಡ್ ವಿಕೆಟನ್ನು ಕಳೆದುಕೊಂಡು ಆಘಾತಕಾರಿ ಆರಂಭ ಪಡೆದಿತ್ತು. ಆರ್‌ಸಿಬಿ ಪರ ಮೊದಲ ಓವರ್ ಅನ್ನು ಆಲರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಎಸೆದಿದ್ದರು.
ಆ ಬಳಿಕ ರಚಿನ್ ರವೀಂದ್ರ(61 ರನ್, 37 ಎಸೆತ, 5 ಬೌಂಡರಿ, 3 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು.
This was not meant to happen,
this could not happen.This is happening, THIS HAS HAPPENED! 🥹#PlayBold #ನಮ್ಮRCB #IPL2024 #RCBvCSK pic.twitter.com/sKDBQD3GaN
— Royal Challengers Bengaluru (@RCBTweets) May 18, 2024
ರವೀಂದ್ರ ಜಡೇಜ ಔಟಾಗದೆ 42 ರನ್, (22 ಎಸೆತ, 3 ಬೌಂಡರಿ, 3 ಸಿಕ್ಸರ್), ಅಜಿಂಕ್ಯ ರಹಾನೆ 33 ರನ್, ಹಾಗೂ ಧೋನಿ 25 ರನ್ ಗಳಿಸುವ ಮೂಲಕ ಎರಡಂಕೆಯ ಸ್ಕೋರ್ ಗಳಿಸಿದರು.
ಆರ್‌ಸಿಬಿ ಪರವಾಗಿ ಬೌಲಿಂಗ್‌ನಲ್ಲಿ ಯಶ್ ದಯಾಳ್ 2 ವಿಕೆಟ್, ಕ್ಯಾಮರೂನ್ ಗ್ರೀನ್, ಫರ್ಗೂಸನ್, ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಗಳಿಸಿದರು.
ಮೊದಲ ಎಸೆತದಿಂದ ಕೊನೆಯ ಎಸೆತದಿಂದ ಕೊನೆಯ ಎಸೆತದವರೆಗೂ ಬಹಳ ಕುತೂಹಲದಿಂದ ಕೂಡಿದ್ದ ಈ ನಾಕೌಟ್ ಪಂದ್ಯದಲ್ಲಿ, ರೋಚಕವಾಗಿ ಗೆದ್ದ ಆರ್‌ಸಿಬಿ ತಂಡ ಪ್ಲೇ-ಆಫ್ ಪ್ರವೇಶಿಸಿದರೆ, ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸೋಲಿನೊಂದಿಗೆ 2024ರ ಐಪಿಎಲ್ ಅಭಿಯಾನವನ್ನು ಕೊನೆಗೊಳಿಸಿತು.
ಚೆನ್ನೈಯ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ, ಈ ಬಾರಿ ಕೊನೆಯದಾಗಿ ಆಡುತ್ತಿರುವುದಾಗಿ ಹೇಳಲಾಗುತ್ತಿದೆಯಾದರೂ, ಈ ಬಗ್ಗೆ ಧೋನಿಯವರು ಅಧಿಕೃತವಾಗಿ ಎಲ್ಲೂ ಹೇಳಿಕೆ ನೀಡಿಲ್ಲ. ಕಾದುನೋಡಬೇಕಿದೆ.
