ಬೆಂಗಳೂರು : ಐಪಿಎಲ್‌ನ 16ನೇ ಆವೃತ್ತಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಅನುಭವಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಪ್ಲೇ ಆಫ್ ಕನಸು, ಕನಸಾಗಿಯೇ ಉಳಿದಿದೆ.
ಆರ್‌ಸಿಬಿ ಅಭಿಮಾನಿಗಳ ಪ್ಲೇ ಆಫ್ ಕನಸಿಗೆ ಗುಜರಾತ್ ಟೈಟಾನ್ಸ್‌ನ ಬ್ಯಾಟರ್ ಶುಭಮನ್ ಗಿಲ್ ತಣ್ಣೀರೆರಚಿದ್ದಾರೆ. ಗೆಲುವಿಗೆ 198 ರನ್‌ಗಳ ಗುರಿ ಪಡೆದಿದ್ದ ಗುಜರಾತ್ ಟೈಟಾನ್ಸ್, 19.1 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ ಗೆಲುವು ದಾಖಲಿಸಿತು.
ಆರ್‌ಸಿಬಿಯ ಸೋಲಿನಿಂದಾಗಿ ಈ ಬಾರಿಯ ಐಪಿಎಲ್‌ನಲ್ಲಿ ನಾಲ್ಕನೇ ತಂಡವಾಗಿ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಶಿಸಿತು.
ಗುಜರಾತ್ ಟೈಟಾನ್ಸ್‌ನ ಆರಂಭಿಕ ಆಟಗಾರ ಶುಭಮನ್ ಗಿಲ್, ಔಟಾಗದೆ 104 ರನ್ ದಾಖಲಿಸಿದರು.