ಶನಿವಾರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಶತಕ ಬಾರಿಸಿದ್ದಾರೆ. ಈ ಶತಕದೊಂದಿಗೆ, ಪಂತ್ ಎಂಎಸ್ ಧೋನಿ ಮತ್ತು ವೃದ್ಧಿಮಾನ್ ಸಹಾ ಅವರಂತಹ ಭಾರತೀಯ ವಿಕೆಟ್ಕೀಪರ್ಗಳ ದಾಖಲೆಯನ್ನು ಮುರಿದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟದ ವಿರಾಮದ ವೇಳೆಗೆ ಭಾರತ 454 ರನ್ಗಳನ್ನು ಪೇರಿಸಿದೆ. ರಿಷಭ್ ಪಂತ್ ಮತ್ತು ಶುಭಮನ್ ಗಿಲ್ ಅಧಿಕ ರನ್ಗಳನ್ನು ಬಾರಿಸಿದ್ದಾರೆ. ಗಿಲ್ ಮತ್ತು ಪಂತ್ 4ನೇ ವಿಕೆಟ್ಗೆ 209 ರನ್ಗಳ ಜೊತೆಯಾಟವಾಡಿದ್ದಾರೆ.
ಇದನ್ನು ಓದಿದ್ದೀರಾ? ಪಂತ್ ಸತತ ವೈಫಲ್ಯಕ್ಕೆ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ ಮಾಲೀಕ ಸಂಜೀವ್ ಗೋಯೆಂಕಾ
ರಿಷಭ್ ಪಂತ್ 178 ಎಸೆತಗಳಲ್ಲಿ 134 ರನ್ ಗಳಿಸಿದ್ದು ಇನ್ನಿಂಗ್ಸ್ನಲ್ಲಿ 12 ಬೌಂಡರಿ ಮತ್ತು ಆರು ಸಿಕ್ಸ್ಗಳನ್ನು ಬಾರಿಸಿದ್ದಾರೆ. ಎಂಎಸ್ ಧೋನಿ ಮತ್ತು ವೃದ್ಧಿಮಾನ್ ಸಹಾ ಅವರ ದಾಖಲೆಯನ್ನು ಮೀರಿಸಿದ್ದಾರೆ. ಧೋನಿ ಆರು ಬಾರಿ ಶತಕ ಗಳಿಸಿದ್ದರೆ, ಪಂತ್ ಏಳು ಶತಕಗಳನ್ನು ಗಳಿಸಿದ್ದಾರೆ. ವೃದ್ಧಿಮಾನ್ ಸಹಾ ಮೂರು ಬಾರಿ ಶತಕ ಗಳಿಸಿದ್ದಾರೆ.
pic.twitter.com/9tRta3SeuF
— Kaushik Pandit (@kaushikpandit06) June 21, 2025
Sunil Gavaskar on Rishabh Pant
"Superb, superb, Superb"#RishabhPant #INDvsENG
ಜೊತೆಗೆ ಒಂದೇ ಟೆಸ್ಟ್ ಇನ್ನಿಂಗ್ಸ್ನಲ್ಲಿ ಮೂರು ಭಾರತೀಯ ಬ್ಯಾಟ್ಸ್ಮನ್ಗಳು ಶತಕ ಗಳಿಸಿರುವುದು ಇದು ನಾಲ್ಕನೇ ಬಾರಿ. 1986ರಲ್ಲಿ ಸುನಿಲ್ ಗವಾಸ್ಕರ್, ಕ್ರಿಸ್ ಶ್ರೀಕಾಂತ್ ಮತ್ತು ಮೊಹಿಂದರ್ ಅಮರ್ನಾಥ್ ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿ ಶತಕ ಗಳಿಸಿದ್ದರು.
ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಅಜೇಯ 118 ರನ್ ಗಳಿಸಿದ ನಂತರ ಪಂತ್ ಅವರ ಸತತ ಎರಡನೇ ಶತಕ ಇದಾಗಿದೆ. ಪಂತ್ ಟೆಸ್ಟ್ ಕ್ರಿಕೆಟ್ನಲ್ಲಿ ಸಿಕ್ಸ್ ಬಾರಿಸಿ ಶತಕ ಪೂರೈಸಿದ್ದು ಇದು ಮೂರನೇ ಬಾರಿ.
