ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಇಂದಿನಿಂದ ಆರಂಭಗೊಂಡಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿತ್ತು. ಆರಂಭದಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತಾದರೂ, ರೋಹಿತ್, ಜಡೇಜಾ ಶತಕ ಹಾಗೂ ಸರ್ಫರಾಝ್ ಖಾನ್ ಅವರ ಅರ್ಧಶತಕದ ನೆರವಿನಿಂದ ಮೊದಲ ದಿನದಾಟದ ಮುಕ್ತಾಯದ ವೇಳೆ ಉತ್ತಮ ಮೊತ್ತ ದಾಖಲಿಸುವಲ್ಲಿ ಸಫಲವಾಗಿದೆ.
ದಿನದಾಟದ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ 326 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ, ಆಲ್‌ರೌಂಡರ್ ರವೀಂದ್ರ ಜಡೇಜಾ ಶತಕ ಸಿಡಿಸಿ ಮಿಂಚಿದರೆ, ಪದಾರ್ಪಣೆ ಪಂದ್ಯದಲ್ಲೇ ಯುವ ಬ್ಯಾಟರ್ ಸರ್ಫರಾಜ್ ಖಾನ್ ಅರ್ಧ ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದರು.
Centuries from Jadeja (110*) and Rohit Sharma (131) guide #TeamIndia to 326/5 at Stumps on Day 1 of the 3rd Test.
Scorecard – https://t.co/eYpzVPnUf8 #INDvENG@IDFCFIRSTBank pic.twitter.com/KVSDlNKmQG
— BCCI (@BCCI) February 15, 2024
ರೋಹಿತ್ ಶರ್ಮಾ ಅವರ 11ನೇ ಶತಕವಾಗಿದೆ. ಅವರು 131 ರನ್‌ಗಳಿಸಿ ಮಾರ್ಕ್ ವುಡ್‌ಗೆ ಔಟಾದರು. ಸರ್ಫರಾಜ್ ಖಾನ್ 62 ರನ್‌ಗಳಲ್ಲಿ ಆಡುತ್ತಿದ್ದಾಗ, ಜಡೇಜಾ ಅವರ ತಪ್ಪಿನಿಂದಾಗಿ ರನೌಟ್‌ಗೆ ಬಲಿಯಾದರು. 110 ರನ್ ಗಳಿಸಿರುವ ರವೀಂದ್ರ ಜಡೇಜಾ, ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇಂಗ್ಲೆಂಡ್ ಪರ ವೇಗಿ ಮಾರ್ಕ್ ವುಡ್ ಮೂರು ವಿಕೆಟ್ ಪಡೆದುಕೊಂಡರೆ, ಸ್ಪಿನ್ನರ್ ಹ್ಯಾಟ್ಲಿಗೆ ಒಂದು ವಿಕೆಟ್ ಗಳಿಸಿದ್ದಾರೆ.
𝙎𝙖𝙧𝙛𝙖𝙧𝙖𝙯 – Apna time a̶y̶e̶g̶a̶ aa gaya! 🗣️
He brings up a 48-balls half century on Test debut 💪🔥#INDvENG #BazBowled #JioCinemaSports #TeamIndia #IDFCFirstBankTestSeries pic.twitter.com/kyJYhVkGFv
— JioCinema (@JioCinema) February 15, 2024
ಆರಂಭಿಕ ಆಘಾತ ಅನುಭವಿಸಿದ್ದ ಟೀಮ್ ಇಂಡಿಯಾ
ರಾಜ್‌ಕೋಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಕಳೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ತಂಡದ ಗೆಲುವಿಗೆ ಸಹಕರಿಸಿದ್ದ ಯಶಸ್ವಿ ಜೈಸ್ವಾಲ್ (10), ಶುಭಮನ್ ಗಿಲ್ (0) ಬೇಗನೆ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ಬಂದ ರಜತ್ ಪಾಟೀದಾರ್ 5 ರನ್ ಗಳಿಸಿರುವಾಗಲೇ ಕ್ಯಾಚಿತ್ತು ನಿರ್ಗಮಿಸಿದರು.
202 ರನ್‌ಗಳ ಜೊತೆಯಾಟ ನಡೆಸಿದ ರೋಹಿತ್-ಜಡೇಜಾ
ರಜತ್ ಪಾಟೀದಾರ್ ಔಟಾದ ಬಳಿಕ ಕ್ರೀಸ್‌ನಲ್ಲಿದ್ದ ನಾಯಕ ರೋಹಿತ್ ಶರ್ಮಾರೊಂದಿಗೆ ಜೊತೆಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ರಕ್ಷಣಾತ್ಮಕ ಆಟವಾಡಿದರು. ಈ ಜೋಡಿಯು ನಾಲ್ಕನೇ ವಿಕೆಟ್‌ಗೆ 202 ರನ್‌ಗಳ ಜೊತೆಯಾಟ ನಡೆಸುವ ಮೂಲಕ, ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ಸಫಲರಾದರು. ರೋಹಿತ್ ಶರ್ಮಾ 131 ರನ್ ಗಳಿಸಿ, ಔಟ್ ಆದರು.
What happened actually today#IndvsEng pic.twitter.com/OLgg4p41jD
— Rajabets 🇮🇳👑 (@smileagainraja) February 15, 2024
ಜಡೇಜಾರ ಎಡವಟ್ಟಿನಿಂದ ಸರ್ಫರಾಝ್ ಖಾನ್ ರನೌಟ್: ಕ್ಯಾಪ್ ಬಿಸಾಕಿ ನಾಯಕ ರೋಹಿತ್ ಆಕ್ರೋಶ
ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ ಪದಾರ್ಪಣೆ ಪಂದ್ಯದಲ್ಲಿಯೇ ಅರ್ಧಶತಕ ಸಿಡಿಸಿ ಆಡುತ್ತಿದ್ದ ಸರ್ಫರಾಝ್ ಖಾನ್ ಅವರು ಸ್ಟ್ರೈಕ್‌ನಲ್ಲಿದ್ದ ರವೀಂದ್ರ ಜಡೇಜಾ ಮಾಡಿದ ಎಡವಟ್ಟಿನಿಂದ ರನ್‌ಔಟ್ ಆಗಬೇಕಾಯಿತು. ಆ ಮೂಲಕ ಚೊಚ್ಚಲ ಶತಕ ಸಿಡಿಸಬೇಕೆಂದು ಅಂದುಕೊಂಡಿದ್ದ ಯುವ ಬ್ಯಾಟ್ಸ್‌ಮನ್‌ಗೆ ಭಾರೀ ನಿರಾಶೆಯಾಯಿತು.
Tuk Tuk agent Jadeja got the debutant Sarfaraz Khan runout.
Sarfaraz was batting well for Dinda Academy and was having a ball pic.twitter.com/OH7rfF3Gku
— Dinda Academy (@academy_dinda) February 15, 2024
ಜಡೇಜಾರ ಎಡವಟ್ಟಿನಿಂದ ಸರ್ಫರಾಝ್ ಖಾನ್ ರನೌಟ್ ಆದದ್ದಕ್ಕೆ ಡ್ರೆಸ್ಸಿಂಗ್ ರೂಮಿನಲ್ಲಿದ್ದ ನಾಯಕ ರೋಹಿತ್ ಶರ್ಮಾ, ಜಡೇಜಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಯಿತು.
Rohit Sharma threw his cap in frustration after Sarfaraz Khan got run out. pic.twitter.com/FQ3efmv5Fn
— Mufaddal Vohra (@mufaddal_vohra) February 15, 2024
ಮತ್ತೊಂದೆಡೆ ತಮ್ಮ ಪುತ್ರನ ಪದಾರ್ಪಣೆ ಟೆಸ್ಟ್ ನೋಡಲು ಬಂದಿದ್ದ ಸರ್ಫರಾಝ್ ಖಾನ್ ತಂದೆ ನೌಶಾದ್ ಖಾನ್ ಹಾಗೂ ಪತ್ನಿ ಪತ್ನಿ ರೊಮಾನ ಝಹೂರ್ ಈ ವೇಳೆ ಬೇಸರ ವ್ಯಕ್ತಪಡಿಸಿದರು.