ಇಂದು (ಜೂನ್ 24) ಸೇಂಟ್ ಲೂಸಿಯಾದ ಡೇರೆನ್ ಸಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20 ವಿಶ್ವಕಪ್ 2024ರ ಸೂಪರ್ 8ರ ಘಟ್ಟದ ಪಂದ್ಯದಲ್ಲಿ ‘ಹಿಟ್ಮ್ಯಾನ್’ ಖ್ಯಾತಿಯ ರೋಹಿತ್ ಶರ್ಮಾ ವಿಶೇಷ ದಾಖಲೆ ಬರೆದಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 200 ಸಿಕ್ಸರ್ಗಳನ್ನು ಬಾರಿಸಿದ ‘ಮೊದಲ ಆಟಗಾರ’ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ನಾಯಕ ಪಾತ್ರರಾಗಿದ್ದಾರೆ.
ಒಬ್ಬ ಆಟಗಾರ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿರುವ ಪಟ್ಟಿಯಲ್ಲಿ ತನ್ನ ಮೊದಲ ಸ್ಥಾನವನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ನಂತರದ ಎರಡನೇ ಸ್ಥಾನದಲ್ಲಿ 173 ಸಿಕ್ಸರ್ ಬಾರಿಸಿರುವ ನ್ಯೂಝಿಲ್ಯಾಂಡ್ನ ಮಾರ್ಟಿನ್ ಗಪ್ಟಿಲ್ ಇದ್ದಾರೆ.
Milestone 🔓
Captain Rohit Sharma reaches 2️⃣0️⃣0️⃣ sixes in T20 Internationals 👏
Follow The Match ▶️ https://t.co/L78hMho6Te#T20WorldCup | #TeamIndia | #AUSvIND | @ImRo45 pic.twitter.com/6LW6SJIky4
— BCCI (@BCCI) June 24, 2024
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಇಂದಿನ ಮಹತ್ವದ ಪಂದ್ಯದಲ್ಲಿ 41 ಎಸೆತಗಳನ್ನು ಎದುರಿಸಿದ ನಾಯಕ ರೋಹಿತ್ ಶರ್ಮಾ ಭರ್ಜರಿ 8 ಸಿಕ್ಸರ್ ಹಾಗೂ 7 ಬೌಂಡರಿಯ ನೆರವಿನಿಂದ 92 ರನ್ ಗಳಿಸಿದ್ದಾಗ, ಮಿಚೆಲ್ ಸ್ಟಾರ್ಕ್ ಓವರ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಆ ಮೂಲಕ 8 ರನ್ಗಳಿಂದ ಶತಕ ವಂಚಿತರಾದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 600 ಸಿಕ್ಸರ್
ರೋಹಿತ್ ಶರ್ಮಾ ಈವರೆಗೆ ಆಡಿರುವ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 600ಕ್ಕೂ ಹೆಚ್ಚು ಸಿಕ್ಸರ್ಗಳನ್ನು ಹೊಡೆದಿದ್ದಾರೆ. ಜೂನ್ ತಿಂಗಳ ಆರಂಭದಲ್ಲಿ ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 600 ಸಿಕ್ಸರ್ಗಳನ್ನು ಪೂರೈಸಿದ್ದರು. 37ರ ಹರೆಯದ ಹಿಟ್ಮ್ಯಾನ್, ನ್ಯೂಯಾರ್ಕ್ನಲ್ಲಿ ಐರ್ಲೆಂಡ್ ವಿರುದ್ಧ 52 ರನ್ ಗಳಿಸಿ ಈ ಸಾಧನೆ ಮಾಡಿದ್ದರು. ರೋಹಿತ್ ಎಲ್ಲ ಮಾದರಿಗಳಲ್ಲಿ 600 ಸಿಕ್ಸರ್ಗಳನ್ನು ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 19 ಸಾವಿರ ರನ್ ಪೂರೈಸಿಕೊಂಡಿದ್ದಾರೆ.
Rohit Sharma has completed 19,000 runs in international cricket.
– One of the greatest of our game! 💯 pic.twitter.com/gbbavkLUoD
— Mufaddal Vohra (@mufaddal_vohra) June 24, 2024
2021ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದ ವೆಸ್ಟ್ಇಂಡೀಸ್ನ ಕ್ರಿಸ್ ಗೇಲ್, ಎಲ್ಲ ಮಾದರಿಯಲ್ಲಿ 553 ಸಿಕ್ಸರ್ ಬಾರಿಸಿದ್ದ ಏಕೈಕ ಆಟಗಾರನಾಗಿದ್ದರು.
ಟಿ20 ಕ್ರಿಕೆಟ್: ಅತಿ ಹೆಚ್ಚು ಸಿಕ್ಸರ್ಗಳು
- ರೋಹಿತ್ ಶರ್ಮಾ(ಟೀಮ್ ಇಂಡಿಯಾ) – 150 ಇನ್ನಿಂಗ್ಸ್ಗಳಲ್ಲಿ 203*
- ಮಾರ್ಟಿನ್ ಗಪ್ಟಿಲ್(ನ್ಯೂಝಿಲ್ಯಾಂಡ್) – 118 ಇನ್ನಿಂಗ್ಸ್ಗಳಲ್ಲಿ 173
- ಜೋಸ್ ಬಟ್ಲರ್(ಇಂಗ್ಲೆಂಡ್) – 113 ಇನ್ನಿಂಗ್ಸ್ಗಳಲ್ಲಿ 137
- ಗ್ಲೆನ್ ಮ್ಯಾಕ್ಸ್ವೆಲ್(ಆಸ್ಟ್ರೇಲಿಯಾ) – 103 ಇನ್ನಿಂಗ್ಸ್ಗಳಲ್ಲಿ 133
- ನಿಕೋಲಸ್ ಪೂರನ್(ವೆಸ್ಟ್ ಇಂಡೀಸ್) – 87 ಇನ್ನಿಂಗ್ಸ್ಗಳಲ್ಲಿ 132
6️⃣,6️⃣,4️⃣: The Hitman takes the aerial route 🔥
2️⃣9️⃣ off that #MitchellStarc over and #RohitSharma takes #TeamIndia off to a flyer! 💪🏻
𝐒𝐔𝐏𝐄𝐑 𝟖 👉 #AUSvIND | LIVE NOW | #T20WorldCupOnStar pic.twitter.com/3mYubPm6jU
— Star Sports (@StarSportsIndia) June 24, 2024
