ಟಾಟಾ ಐಪಿಎಲ್ 2024ರ ಆರಂಭಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಹೊಸ ಮುಖಕ್ಕೆ ಹಸ್ತಾಂತರಿಸಿರುವುದಾಗಿ ಚೆನ್ನೈ ತಂಡ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಆ ಮೂಲಕ ಅಭಿಮಾನಿಗಳಿಗೆ ಐಪಿಎಲ್ ಆರಂಭಕ್ಕೆ ಕೆಲವೇ ಕ್ಷಣಗಳಿರುವಾಗ ಆಘಾತ ನೀಡಿದೆ.
ನಾಳೆ(ಮಾ.22)ಯಿಂದ ಐಪಿಎಲ್ ಆರಂಭವಾಗಲಿದೆ. ಚೆನ್ನೈ ಹಾಗೂ ಆರ್‌ಸಿಬಿ ನಡುವೆ ಚೆನ್ನೈನ ಚಪಾಕ್ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ಕೂಡ ನಡೆಯಲಿದೆ.
OFFICIAL STATEMENT: MS Dhoni hands over captaincy to Ruturaj Gaikwad. #WhistlePodu #Yellove
— Chennai Super Kings (@ChennaiIPL) March 21, 2024
ರುತುರಾಜ್ ಗಾಯಕ್‌ವಾಡ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಿಳಿಸಿದೆ. ರುತುರಾಜ್ 2019ರಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ಅವಿಭಾಜ್ಯ ಅಂಗವಾಗಿದ್ದು, ಈ ಅವಧಿಯಲ್ಲಿ ಐಪಿಎಲ್‌ನಲ್ಲಿ 52 ಪಂದ್ಯಗಳನ್ನು ಆಡಿದ್ದಾರೆ. ಮುಂಬರುವ ಋತುವಿನಲ್ಲಿ ತಂಡವು ಅವರ ನೇತೃತ್ವದಲ್ಲಿ ಮುನ್ನಡೆಯಲಿದೆ ಎಂದು ತಿಳಿಸಿದೆ.
Most successful IPL captains:
MS Dhoni – 133 wins.
Rohit Sharma – 87 wins.
Gautam Gambhir – 71 wins.
Virat Kohli – 66 wins.– the only one with more than 100 wins …..!!! 🏆 pic.twitter.com/wyKKi0MSt0
— Mufaddal Vohra (@mufaddal_vohra) March 21, 2024
ಈ ಪ್ರಕಟಣೆ ಚೆನ್ನೈ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದ್ದು, ಏನೆಲ್ಲ ಬೆಳವಣಿಗೆಗಳು ನಡೆಯಲಿದೆ ಎಂದು ಕಾದು ನೋಡಬೇಕಿದೆ.
The 🔟 Captains are READY! 😎
The Goal is SET 🏆
Let the #TATAIPL 2024 begin 😍 pic.twitter.com/f8cdv5Zfqh
— IndianPremierLeague (@IPL) March 21, 2024
ಮುಂಬೈ ಇಂಡಿಯನ್ಸ್ ತಂಡವು ಈಗಾಗಲೇ ತಂಡದ ನಾಯಕತ್ವವನ್ನು ಬದಲಾಯಿಸಿ, ಹಾರ್ದಿಕ್ ಪಾಂಡ್ಯಾಗೆ ನೀಡಿತ್ತು. ಆ ಮೂಲಕ 2024ರ ಐಪಿಎಲ್‌ನಲ್ಲಿ ಎರಡು ತಂಡಗಳು ತಂಡದ ನಾಯಕತ್ವವನ್ನು ಬದಲಾಯಿಸಿದೆ.
IPL 2024 TEAM’S CAPTAINS PHOTOSHOOT…!!!! 📸 pic.twitter.com/UNSUNs9xFL
— Mufaddal Vohra (@mufaddal_vohra) March 21, 2024
