ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ T20 ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್, ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಭಾರೀ ಸಿಕ್ಸ್ ಬಾರಿಸಿದ್ದಾರೆ. ಆ ಚೆಂಡು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಮಹಿಳಾ ಅಭಿಮಾನಿಯೊಬ್ಬರನ್ನು ಮುಖಕ್ಕೆ ಬಿದ್ದಿದ್ದು, ಯುವತಿ ಕಣ್ಣೀರು ಹಾಕಿದ್ದಾರೆ. ಆಕೆಗೆ ಚೆಂಡು ತಗುಲಿದ್ದಕ್ಕಾಗಿ ಆಕೆಯ ಬಳಿ ಸಂಜು ಕ್ಷಮೆ ಕೇಳಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಕೇವಲ 56 ಎಸೆತಗಳಲ್ಲಿ 9 ಸಿಕ್ಸರ್‌ಗಳೊಂದಿಗೆ 109 ರನ್ ಪೇರಿಸಿದ ಸಂಜು, ಅಜೇಯರಾಗಿ ಉಳಿದು, ಅದ್ಭುತ ಪ್ರದರ್ಶನ ನೀಡಿದ್ದಾರೆ. ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಂಜು ಸ್ಯಾಮ್ಸನ್ ಅವರು ಟ್ರಿಸ್ಟಾನ್ ಸ್ಟಬ್ಸ್ ಅವರ ಬೌಲಿಂಗ್‌ಗೆ ದೊಡ್ಡ ಹೊಡೆತದ ಮೂಲಕ ಸಿಕ್ಸರ್ ಬಾರಿಸಿದರು. ಈ ವೇಳೆ, ನೇರವಾಗಿ ಪ್ರೇಕ್ಷಕರ ಗ್ಯಾಲರಿಗೆ ಬಿದ್ದ ಚೆಂಡು, ಮೈದಾನದಲ್ಲಿ ಕುಳಿತಿದ್ದ ಯುವತಿಯ ಮುಖಕ್ಕೆ ಬಡಿದಿದೆ.
ಆಕೆಯ ಕೆನ್ನೆಗೆ ಭಾರೀ ಪೆಟ್ಟು ಬಿದ್ದಿದ್ದು, ಗಾಯದ ಮೇಲೆ ಲೇಪಿಸಲು ಮಂಜುಗಡ್ಡೆಯನ್ನು ನೀಡಲಾಗಿತ್ತು. ಬಳಿಕ, ಆಕೆ ಚೇತರಿಸಿಕೊಂಡರು. ಆಕೆಗೆ ಚೆಂಡು ತಗುಲಿದ ದೃಶ್ಯವುಳ್ಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಕೆಯ ಬಳಿ ಸಂಜು ಕೂಡ ಕ್ಷಮೆಯಾಚಿಸಿದ್ದಾರೆ.
🚨 SANJU SAMSON SIX HITTING A FAN IN THE STADIUM…!!! 🚨pic.twitter.com/VmKyPf39dw
— Mufaddal Vohra (@mufaddal_vohra) November 15, 2024
4ನೇ ಟಿ20 ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 135 ರನ್‌ಗಳಿಂದ ಸೋಲಿಸಿದೆ. ಅದರೊಂದಿಗೆ 3-1ರ ಅಂತರದಲ್ಲಿ ಸರಣಿಯನ್ನು ಗೆದ್ದಿದೆ.
ಸ್ಯಾಮ್ಸನ್ 56 ಎಸೆತಗಳಲ್ಲಿ ಔಟಾಗದೆ 109 ರನ್ ಗಳಿಸಿರೆ, ತಿಲಕ್ ವರ್ಮಾ ಅವರು ಕೇವಲ 47 ಎಸೆತಗಳಲ್ಲಿ ಔಟಾಗದೆ 120 ರನ್ ಗಳಿಸಿದ್ದರು. ಭಾರತ ತಂಡವು 20 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 283 ರನ್ ಗಳಿಸಿತ್ತು. ಬೃಹತ್ ಮೊತ್ತದ ರನ್ ಬೆನ್ನತ್ತಿದ ದಕ್ಷಿಣ ಆಫ್ರಿಕಾ, 18.2 ಓವರ್‌ಗಳಲ್ಲಿ 148 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿತ್ತು.