ಸಚಿನ್ ದಾಸ್: ತೆಂಡೂಲ್ಕರ್, ವಿರಾಟ್ ಸ್ಥಾನ ತುಂಬುವ ಹಾದಿಯಲ್ಲಿ ಉದಯೋನ್ಮುಖ ಪ್ರತಿಭೆ!

Date:

Advertisements

19 ವರ್ಷದೊಳಗಿನ ಏಕದಿನ ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತ ತಂಡ ಆರಂಭದಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ನಾಯಕ ಉದಯ್‌ ಸಹಾರನ್‌ ಜೊತೆಗೂಡಿ ಅಮೋಘ 96 ರನ್‌ ಬಾರಿಸಿ ಫೈನಲ್‌ ತಲುಪಲು ಪ್ರಮುಖ ಕಾರಣರಾದವರು ಉದಯೋನ್ಮುಖ ಆಟಗಾರ ಸಚಿನ್ ದಾಸ್.

ಫೆ.6 ರಂದು ನಡೆದ ಪಂದ್ಯದಲ್ಲಿ ಸಚಿನ್‌ ದಾಸ್‌ ಆಟಕ್ಕೆ ಮನಸೋಲದವರೇ ಇಲ್ಲ. 12 ಓವರ್‌ಗಳಲ್ಲಿ ಪ್ರಮುಖ ನಾಲ್ವರು ಬ್ಯಾಟರ್‌ಗಳು ಔಟಾಗಿದ್ದಾಗ ಆಪತ್ಬಾಂಧವರಂತೆ ಬಂದು ಬಿರುಸಿನ ಹೊಡೆತಗಳ ಮೂಲಕ ಇನಿಂಗ್ಸ್ ಕಟ್ಟಿದ ಪ್ರತಿಭೆ ಸಚಿನ್‌. ಶತಕಕ್ಕೆ ನಾಲ್ಕು ರನ್‌ಗಳಿಂದ ವಂಚಿತರಾದರೂ ಶತಕಕ್ಕಿಂತ ಶ್ರೇಷ್ಠಮಟ್ಟದ ಆಟ ಅದಾಗಿತ್ತು.

ಟೀಂ ಇಂಡಿಯಾ ಸ್ಪೋಟಕ ಆಟಗಾರ ಸಚಿನ್ ತೆಂಡೂಲ್ಕರ್‌ ಅವರಂತೆ ಸಚಿನ್ ದಾಸ್ ಕೂಡ ಮಹಾರಾಷ್ಟ್ರದವರು. ಮುಂಬೈನಿಂದ 400 ಕಿ.ಮೀ ದೂರದಲ್ಲಿರುವ ಮಧ್ಯ ಮಹಾರಾಷ್ಟ್ರದ ಬೀಡಿ ಜಿಲ್ಲೆಯ ಸಣ್ಣ ಗ್ರಾಮದಲ್ಲಿ ಫೆ.3, 2005ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು.

Advertisements

ತಾಯಿ ಸುರೇಖಾ ಪೊಲೀಸ್ ಅಧಿಕಾರಿಯಾದರೆ, ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ತಂದೆ ಸಂಜಯ್ ದಾಸ್ ಕೂಡ ಕ್ರಿಕೆಟ್ ಪ್ರೇಮಿ. ಸಣ್ಣ ವಯಸ್ಸಿನಲ್ಲಿ ತಾವು ಮಹಾರಾಷ್ಟ್ರ ತಂಡದ ಕ್ರಿಕೆಟ್ ಆಟಗಾರನಾಗಬೇಕು ಎಂಬ ಕನಸು ಕಂಡವರು. ಆದರೆ ಕಾರಣಾಂತರಗಳಿಂದ ರಾಜ್ಯ ಕ್ರಿಕೆಟ್ ಪ್ರತಿನಿಧಿಸುವ ಆಸೆ ಕೈಗೂಡಲಿಲ್ಲ. ಆದರೆ ಮಗನ ಕ್ರಿಕೆಟ್ ಆಸೆಗೆ ನೀರೆರೆದು ಪೋಷಿಸುತ್ತಿದ್ದಾರೆ. ಮಗ ಸಚಿನ್‌ ತೆಂಡೂಲ್ಕರ್‌ರಂತೆಯೇ ಆಗಲೆಂದು ಸಚಿನ್‌ ಎಂದು ತಂದೆ ಸಂಜಯ್‌ ದಾಸ್‌ ಹೆಸರಿಟ್ಟಿದ್ದಾರೆ. ಸಚಿನ್ ದಾಸ್ ಕೂಡ ತಂದೆಯ ನಂಬಿಕೆ ಉಳಿಸಿಕೊಳ್ಳುವ ಹಾದಿಯಲ್ಲಿ ಸಾಗುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 96 ರನ್‌ ಗಳಿಸಿದ ಸಚಿನ್‌ ದಾಸ್‌ ಆಟವನ್ನು ನೋಡಿದ ವೆಸ್ಟ್‌ ಇಂಡೀಸಿನ ಮಾಜಿ ವೇಗಿ ಇಯಾನ್ ಬಿಷಪ್, ವೀಕ್ಷಕ ವಿವರಣೆಯ ಸಂದರ್ಭದಲ್ಲಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಉದಯೋನ್ಮುಖ ಪ್ರತಿಭೆಯ ಬ್ಯಾಟಿಂಗ್ ಶೈಲಿ ಟೀಂ ಇಂಡಿಯಾದ ಆಟಗಾರ ಶುಭಮನ್‌ ಗಿಲ್‌ಗೆ ಹೋಲುತ್ತದೆ. ಸಚಿನ್‌ ದಾಸ್‌ ಅವರ ಶಾರ್ಟ್‌ ಟರ್ಮ್‌ ಹೊಡೆತಗಳು ಶುಭಮನ್ ಗಿಲ್‌ ಅವರಿಗಿಂತ ಆಕರ್ಷಕವಾಗಿವೆ ಎಂದು ಇಯಾನ್ ಬಿಷಪ್ ಹೇಳಿದ್ದರು.

ಶುಭಮನ್‌ ಗಿಲ್‌ ಅವರು ಆರಂಭದ ವರ್ಷದಲ್ಲಿ ತಮ್ಮ ಆಟವನ್ನು ಸಿಮೆಂಟ್ ಪಿಚ್‌ನಲ್ಲಿ ಆಡಿ ಅಭ್ಯಾಸ ಮಾಡಿಕೊಂಡಿದ್ದರು. ಆದರೆ ಸಚಿನ್‌ ದಾಸ್ ಅವರು ಬೌಲರ್‌ ಎಸೆತಗಳನ್ನು ಬ್ಯಾಕ್ ಫುಟ್ ಶೈಲಿ ಹಾಗೂ ನೇರವಾಗಿ ಎದರಿಸುತ್ತಾರೆ. ಬೌನ್ಸ್‌ರ್‌ ಎಸೆತಗಳನ್ನು ಕೂಡ ಲೀಲಾಜಾಲವಾಗಿ ಬಾರಿಸುತ್ತಾರೆ. ಇವೆಲ್ಲ ಬಗೆಗಳನ್ನು ತಮ್ಮ ಕೋಚ್ ಶೇಕ್ ಅಜರ್‌ ಹಾಗೂ ತಂದೆ ಸಂಜಯ್‌ ದಾಸ್‌ ಅವರಿಂದ ಕರಗತ ಮಾಡಿಕೊಂಡಿದ್ದಾರೆ. ಇನ್ನು ವಿಶೇಷವೇನೆಂದರೆ ಸಚಿನ್‌ ಕ್ರಿಕೆಟ್ ಕಲಿತಿದ್ದು, 11 ಯಾರ್ಡ್‌ ಪಿಚ್‌ಗಳಲ್ಲಿ ಅಂದರೆ ಅರ್ಧ ಪಿಚ್‌. ಆದರೆ ಈಗ ರನ್‌ಗಳನ್ನು ಬಾರಿಸುತ್ತಿರುವುದು 22 ಯಾರ್ಡ್‌ ಮೈದಾನದಲ್ಲಿ.

ಸಚಿನ್‌ ದಾಸ್‌ ಅಂಡರ್‌ 19 ವಿಶ್ವಕಪ್‌ಗೆ ಸ್ಥಾನ ಸಿಗಲು ಕಾರಣವಾಗಿದ್ದು ಮಹಾರಾಷ್ಟ್ರ ಪ್ರೀಮಿಯರ್‌ ಲೀಗ್ ವೇದಿಕೆ. ಅಲ್ಲಿ ತೋರಿದ ಉತ್ತಮ ಪ್ರದರ್ಶನವೇ ಕಿರಿಯರ ವಿಶ್ವಕಪ್‌ಗೆ ಸ್ಥಾನ ಲಭಿಸಲು ಕಾರಣವಾಯಿತು.

ಸಾಧನೆಯ ಹಿಂದೆ ಕೋಚ್‌, ತಂದೆ ಶ್ರಮ

”ವೇಗಿಗಳು ಹಾಗೂ ಸ್ಪಿನರ್‌ಗಳ ಬೌಲಿಂಗ್‌ನಲ್ಲೂ ಸಚಿನ್‌ ಉತ್ತಮವಾಗಿ ಆಡುತ್ತಾರೆ. ಈತನಿಗೆ ಸಾಮರ್ಥ್ಯವಿದೆಯೇ ಎಂದು ಪರಿಶೀಲಿಸುವುದಕ್ಕೆ ಬೌನ್ಸರ್‌ ಬಾಲ್‌ ಹಾಕುವ ಮೂಲಕ ನಾವು ಪರಿಶೀಲಿಸುತ್ತೇವೆ. ಕೋಚ್ ಶೇಖ್ ಅಜರ್ ಕೂಡ ಗುಡ್‌ ಲೆಂಥ್ ಪ್ರದೇಶದಲ್ಲಿ ಮೂರು ಅಡಿ ಉದ್ದದ ಹಾಗೂ ನಾಲ್ಕು ಅಡಿ ವೈಡ್‌ ಬಾಲ್‌ಗಳನ್ನು ಹಾಕುವ ಮೂಲಕ ತರಬೇತಿ ನೀಡುತ್ತಿದ್ದಾರೆ. ಆರಂಭದಲ್ಲಿ ಎತ್ತರಕ್ಕೆ ಹೋಗುವ ಬಾಲ್‌ಗಳನ್ನು ಎದುರಿಸಲು ಸಚಿನ್‌ ಕಷ್ಟಪಡುತ್ತಿದ್ದ. ಆದರೆ ಅಭ್ಯಾಸವಾದಂತೆ ಉತ್ತಮವಾಗಿ ಆಡುತ್ತಿದ್ದಾನೆ. ಇಡೀ ಟೂರ್ನಮೆಂಟ್‌ನಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ಅತ್ಯುತ್ತಮವಾಗಿತ್ತು. ನಾಯಕ ಉದಯ್‌ ಸಹಾರನ್‌ ಅವರ ಜೊತೆ ಆಕರ್ಷಕ ಹೊಡೆತಗಳ ಮೂಲಕ ಆಡಿದ ಆಟ ಸೊಗಸಾಗಿತ್ತು” ಎಂದು ತಂದೆ ಸಂಜಯ್‌ ದಾಸ್ ಹೇಳುತ್ತಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೇಸಿಗೆ ಬೇಗ ಬಂದಿದೆ; ಜೀವಜಲಕ್ಕೆ ತತ್ವಾರ ತಂದಿದೆ

”ಆರನೇ ಕ್ರಮಾಂಕದ ಆಟಗಾರನಾಗಿರುವ ಕಾರಣ ಸಚಿನ್‌ಗೆ ಈ ಅಂಡರ್‌ 19 ವಿಶ್ವಕಪ್‌ ಟೂರ್ನಮೆಂಟ್‌ನಲ್ಲಿ ಹೆಚ್ಚಿನ ಚೆಂಡುಗಳನ್ನು ಎದುರಿಸುವ ಅವಕಾಶ ಸಿಗಲಿಲ್ಲ. ಅಲ್ಲಿಯವರೆಗೂ ಪ್ರತಿ ಪಂದ್ಯದಲ್ಲಿ 20ಕ್ಕಿಂತ ಅಧಿಕ ಬಾಲ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. ಆದರೆ, ದಕ್ಷಿಣ ಅಫ್ರಿಕಾ ಹಾಗೂ ನೇಪಾಳದ ವಿರುದ್ಧದ ಪಂದ್ಯಗಳಲ್ಲಿ ಹೆಚ್ಚಿನ ಅವಕಾಶ ದೊರಕಿತು. ಈ ಕಾರಣದಿಂದಾಗಿಯೇ ಎರಡೂ ಪಂದ್ಯಗಳಲ್ಲಿ 96 ಹಾಗೂ 116 ರನ್‌ ಬಾರಿಸಿ ಉತ್ತಮ ಆಟ ಪ್ರದರ್ಶಿಸಿ ತನ್ನ ಸಾಮರ್ಥ್ಯ ತೋರಿಸಲು ಸಾಧ್ಯವಾಯಿತು” ಎಂದು ಕೋಚ್ ಶೇಖ್ ಅಜರ್ ಹೇಳುತ್ತಾರೆ.

”ಸಚಿನ್‌ ಯಾವಾಗಲು ಆರನೇ ಕ್ರಮಾಂಕದ ಆಟಗಾರನಾಗಿದ್ದಾನೆ. ಆದರೆ ತಂಡದಲ್ಲಿ ಈತ ವಿಭಿನ್ನ ಪಾತ್ರ ತೋರುತ್ತಾನೆ. ಆರಂಭದ ಕೆಲವು ಪಂದ್ಯಗಳಲ್ಲಿ ಕೊಂಚ ನಿರಾಶೆಗೊಂಡರೂ ನೇಪಾಳ ವಿರುದ್ಧದ ಪಂದ್ಯದ ನಂತರ ಈತನ ಆಟದ ಲಯ ಸುಗಮವಾಗಿದೆ. ಮಧ್ಯಮ ಕ್ರಮಾಂಕದ ಆಟಗಾರನಾಗಿರುವ ಕಾರಣ ಸಂಕಷ್ಟದ ಸಂದರ್ಭದಲ್ಲಿ ತಂಡವನ್ನು ಕಷ್ಟದಿಂದ ಪಾರು ಮಾಡಲು ಸಾಧ್ಯವಾಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ನಂತರ ರನ್‌ ಬಾರಿಸಲು ಸುಲಭವಾಗುತ್ತಿದೆ ಎಂದು ಪಂದ್ಯದ ನಂತರ ಸಚಿನ್‌ ದಾಸ್ ನನಗೆ ಹೇಳಿರುವುದು ಖುಷಿ ತಂದಿದೆ” ಎಂದು ಕೋಚ್ ಅಜರ್‌ ತಮ್ಮ ಶಿಷ್ಯನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.

ಸಚಿನ್ ದಾಸ್ ಆರನೇ ಕ್ರಮಾಂಕದ ಆಟಗಾರನಾಗಿದ್ದರೂ 2024ನೇ ಸಾಲಿನ ಅಂಡರ್‌ 19 ವಿಶ್ವಕಪ್‌ನಲ್ಲಿ 6 ಪಂದ್ಯಗಳಿಂದ ಒಂದು ಶತಕ ಹಾಗೂ ಒಂದು ಅರ್ಧ ಶತಕದೊಂದಿಗೆ 294 ರನ್ ಪೇರಿಸಿದ್ದು, ಟೂರ್ನಿಯಲ್ಲಿ ಮೂರನೇ ಅತ್ಯಂತ ಹೆಚ್ಚಿನ ರನ್‌ ಆಗಿದೆ. ಅತಿ ಹೆಚ್ಚು ರನ್ ಸ್ಕೋರ್‌ ಮಾಡಿದ ಮೊದಲ ಎರಡು ಸ್ಥಾನದಲ್ಲಿ ಭಾರತದವರೆ ಇದ್ದಾರೆ. ನಾಯಕ ಉದಯ್ ಸಹಾರನ್ (389) ರನ್‌ ಗಳಿಸಿದ್ದರೆ, ಮುಶೀರ್ ಖಾನ್ (338) ರನ್ ಬಾರಿಸಿದ್ದಾರೆ.

ತಂದೆ ಸಂಜಯ್ ದಾಸ್ ರೊಂದಿಗೆ ಸಚಿನ್
ತಂದೆ ಸಂಜಯ್ ದಾಸ್ ರೊಂದಿಗೆ ಸಚಿನ್

ಟೀಂ ಇಂಡಿಯಾ ಟ್ರೋಫಿ ಮುಡಿಗೇರಿಸಿಕೊಳ್ಳಲು ಫೈನಲ್‌ ಪಂದ್ಯ ಮಾತ್ರ ಬಾಕಿಯುಳಿದಿದೆ. ಕಳೆದ ಬಾರಿಯ ಚಾಂಪಿಯನ್‌ ಪಟ್ಟ ಸೇರಿದಂತೆ ಟೀಂ ಇಂಡಿಯಾ ಒಟ್ಟು ಐದು ಬಾರಿ ಅಂಡರ್‌ 19 ಟ್ರೋಫಿ ಮುಡಿಗೇರಿಸಿಕೊಂಡಿದೆ. ಫೆ.11 ರಂದು ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆಯುವ ಪಂದ್ಯದಲ್ಲಿ ರಾತ್ರಿಯ ವೇಳೆಗೆ ಫಲಿತಾಂಶ ಹೊರಬೀಳಲಿದ್ದು, ವಿಜೇತರು ಯಾರು ಎಂಬುದು ನಿರ್ಧಾರವಾಗಲಿದೆ. ಈ ಪಂದ್ಯ ಕೂಡ ಸಚಿನ್‌ ದಾಸ್‌ ಪಾಲಿಗೆ ಮಹತ್ವದ ಪಂದ್ಯವಾಗುವುದು ಖಂಡಿತ.

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ರವೀಂದ್ರ ಜಡೇಜಾ ಮುಂತಾದ ದಿಗ್ಗಜ ಆಟಗಾರರು ಕೂಡ ಅಂಡರ್‌ 19 ವಿಶ್ವಕಪ್‌ನಿಂದಲೇ ಹೊರಹೊಮ್ಮಿದವರು. ಈ ಸಾಲಿಗೆ ಸಚಿನ್‌ ದಾಸ್‌ ಕೂಡ ಸೇರ್ಪಡೆಯಾಗಿ ಟೀಂ ಇಂಡಿಯಾದಲ್ಲಿ ತಮ್ಮ ಛಾಪು ಮೂಡಿಸುತ್ತಾರಾ? ಮುಂದಿನ ಪಂದ್ಯಗಳ ಪ್ರದರ್ಶನವೇ ಉತ್ತರ ಹೇಳಲಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X