ಕಳೆದ ಮೇ. 8ರಂದು ಹೈದರಾಬಾದಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ನೇತೃತ್ವದ ಲಕ್ನೋ ತಂಡ 10 ವಿಕೆಟ್‌ಗಳ ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತ್ತು.
ಎಲ್‌ಎಸ್‌ಜಿ ತಂಡ ನೀಡಿದ್ದ 165 ರನ್‌ಗಳ ಸವಾಲನ್ನು ಬೆನ್ನಟ್ಟಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡವು ಕೇವಲ 9.4 ಓವರ್‌ಗಳಲ್ಲಿ ಗುರಿಯನ್ನು ಮುಟ್ಟಿತ್ತು. ಆರಂಭಿಕ ಆಟಗಾರರಾದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಈ ಬೆಳವಣಿಗೆ ನಡೆದಿತ್ತು.
ಈ ಪಂದ್ಯ ಮುಗಿದ ಬಳಿಕ ಲಕ್ನೋ ಹೀನಾಯವಾಗಿ ಸೋತದ್ದರಿಂದ ಆಕ್ರೋಶಗೊಂಡಿದ್ದ ತಂಡದ ಮಾಲೀಕರಾದ ಸಂಜೀವ್ ಗೋಯಂಕಾ, ನಾಯಕ ಕೆ ಎಲ್ ರಾಹುಲ್ ವಿರುದ್ಧ ವಿಐಪಿ ಗ್ಯಾಲರಿಯಲ್ಲಿ ಆಕ್ರೋಶಭರಿತರಾಗಿ ಮಾತನಾಡುತ್ತಿದ್ದ ದೃಶ್ಯ ಎಲ್ಲೆಡೆ ವೈರಲ್ ಆಗಿತ್ತು. ಎಲ್ಲವನ್ನೂ ಸಮಾಧಾನ ಚಿತ್ತದಿಂದ ಕೇಳಿದ್ದ ಕೆ ಎಲ್ ರಾಹುಲ್ ಅವರ ತಾಳ್ಮೆಗೆ ಹಲವು ಮಂದಿ ಶ್ಲಾಘಿಸಿದ್ದರು.
After 2017 #Dhoni won three IPL trophies and Goenka is still trophyless, never mess with MS Dhoni.
Full support to #KL_Rahul ❤️ pic.twitter.com/Qyb1FFPGqo— Keshav Singh Bhadoriya (@KeshavSinghBh11) May 9, 2024
ಈ ಬೆಳವಣಿಗೆಯ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಲಕ್ನೋ ತಂಡದ ಮಾಲೀಕನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತಲ್ಲದೇ, ಕೆ ಎಲ್ ರಾಹುಲ್ ತಂಡದ ನಾಯಕತ್ವ ತೊರೆಯಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡಿತ್ತು. ಅಲ್ಲದೇ, ಈ ನಡುವೆ ಹಲವು ಮಂದಿ, ಲಕ್ನೋ ತಂಡ ತೊರೆದು ಆರ್‌ಸಿಬಿ ಸೇರಿ ಎಂಬಂತಹ ಸಲಹೆಗಳನ್ನು ನೀಡಿದ್ದರು.
ಈ ಎಲ್ಲ ಬೆಳವಣಿಗೆಯ ನಡುವೆಯೇ ಡ್ಯಾಮೇಜ್ ಕಂಟ್ರೋಲ‌್‌ಗೆ ಯತ್ನಿಸಿರುವ ಲಕ್ನೋ ಮಾಲೀಕ ಸಂಜಯ್ ಗೋಯೆಂಕಾ, ಕೆ ಎಲ್ ರಾಹುಲ್ ಅವರನ್ನು ಡಿನ್ನರ್‌ಗೆ ಆಹ್ವಾನಿಸಿ, ಪರಸ್ಪರ ತಬ್ಬಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
Lucknow Super Giants franchise co-owner Sanjiv Goenka hosted KL Rahul for a special dinner at his residence in New Delhi on May 13. The dinner meeting came a day before LSG's crucial IPL 2024 game against Delhi in the capital city. Sanjiv Goenka was seen embracing KL Rahul during… pic.twitter.com/fhsL7FP12R
— IndiaToday (@IndiaToday) May 14, 2024
ಕಳೆದ ರಾತ್ರಿ ಸಂಜೀವ್ ಗೋಯೆಂಕಾ ಅವರು ನಾಯಕ ಕೆ.ಎಲ್ ರಾಹುಲ್ ಅನ್ನು ತಮ್ಮ ಮನೆಯ ಡಿನ್ನರ್‌ಗೆ ಆಹ್ವಾನಿಸಿದ್ದಾರೆ. ಈ ವೇಳೆ ಒಬ್ಬರನ್ನೊಬ್ಬರು ತಬ್ಬಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆ ಮೂಲಕ ವಿವಾದಕ್ಕೆ ಸಂಬಂಧಿಸಿದಂತೆ ಪರಸ್ಪರ ತೆರೆ ಎಳೆದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಇಂದು (ಮೇ 14) ಸಂಜೆ 7.30ಕ್ಕೆ ನಡೆಯಲಿರುವ ಪಂದ್ಯಕ್ಕೂ ಮುನ್ನ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ನಾಯಕತ್ವ ತೊರೆಯಲಿದ್ದಾರೆ ಎಂಬ ಸುದ್ದಿಗೂ ಪೂರ್ಣ ವಿರಾಮ ಹಾಕಿದ್ದಾರೆ.
Sanjiv Goenka invited KL Rahul for a dinner ahead of the important clash against Delhi Capitals.
📸: India Today#IPL2024 pic.twitter.com/yDK840uSbv
— OneCricket (@OneCricketApp) May 14, 2024
“ಹೈದರಾಬಾದ್ ವಿರುದ್ಧ ಹೀನಾಯ ಸೋಲಿಗೆ ಆಕ್ರೋಶಗೊಂಡಿದ್ದ ಸಂಜೀವ್ ಗೋಯೆಂಕಾ ತಮ್ಮ ವಿರುದ್ಧದ ಟೀಕೆಗೆ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದಾರೆ” ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
