ದಾಖಲೆಯ ಮೊತ್ತ ಪಡೆದು ಲಖನೌ ಸೂಪರ್‌ಜೈಂಟ್ಸ್ ತಂಡ ಸೇರಿದ್ದ ನಾಯಕ ರಿಷಭ್ ಪಂತ್ ನಿರ್ಣಾಯಕ ಪಂದ್ಯದಲ್ಲೂ ನಿರಾಶೆ ಮೂಡಿಸಿದರು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ, ರಿಷಭ್ ಪಂತ್ ಕೇವಲ 7 ರನ್ ಗಳಿಸಿ ಔಟಾದರು.
ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದ ಪಂತ್, ಎಹ್ಸಾನ್ ಮಾಲಿಂಗ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಪಂತ್ ವಿಕೆಟ್ ಪತನದ ನಂತರ ಲಖನೌ ಮೈದಾನದಲ್ಲಿ ಕಂಡುಬಂದ ದೃಶ್ಯ ಸ್ವಲ್ಪ ಆಶ್ಚರ್ಯಕರವಾಗಿತ್ತು. ಲಖನೌ ಸೂಪರ್‌ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ, ಪಂತ್ ಔಟಾದ ನಂತರ ಲಖನೌ ಕ್ರೀಡಾಂಗಣದ ಬಾಲ್ಕನಿಯಿಂದ ಬೇಸರದಿಂದ ತೆರಳಿದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಲಖನೌ ನಾಯಕ ಪಂತ್ ಔಟಾದ ತಕ್ಷಣ, ಬಾಲ್ಕನಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಸಂಜೀವ್ ಗೋಯೆಂಕಾ ಅಲ್ಲಿಂದ ಕೋಪದಿಂದ ಹೊರಟುಹೋಗಿದ್ದಾರೆಂದು ಹೇಳಲಾಗುತ್ತಿದೆ.
ಇದನ್ನು ಓದಿದ್ದೀರಾ? 90.23 ಮೀಟರ್ ದೂರ ಜಾವೆಲಿನ್ ಎಸೆದು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ
ರಿಷಭ್ ಪಂತ್ ವಿರುದ್ಧ ಸಂಜೀವ್ ಕೋಪ ಮಾಡಿಕೊಳ್ಳುವುದಕ್ಕೂ ಕಾರಣವಿದೆ. ಕೇವಲ ಒಂದು ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದನ್ನು ಹೊರತುಪಡಿಸಿ, ಪಂತ್ 9 ಇನಿಂಗ್ಸ್‌ಗಳಲ್ಲಿ ವಿಫಲರಾಗಿದ್ದಾರೆ. ಈ ಆವೃತ್ತಿಯಲ್ಲಿ ಪಂತ್ 11 ಇನಿಂಗ್ಸ್‌ಗಳಲ್ಲಿ 135 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ ಕೇವಲ 12.27 ಮತ್ತು ಸ್ಟ್ರೈಕ್ ರೇಟ್ ಕೂಡ ಕೇವಲ 100. ಪಂತ್ ಅವರ ಬ್ಯಾಟಿಂಗ್‌ಅನ್ನು ಬದಿಗಿಟ್ಟರೆ, ಅವರ ನಾಯಕತ್ವವೂ ತುಂಬಾ ಕಳಪೆಯಾಗಿದೆ. ಎಲ್‌ಎಸ್‌ಜಿ ತಂಡ ಪ್ಲೇಆಫ್‌ನಿಂದ ಹೊರಬಿದ್ದಿದೆ.
‘‘ಗಾಯಗಳಿಂದಾಗಿ ನಾವು ಕೆಲವು ನ್ಯೂನತೆಗಳನ್ನು ತುಂಬಬೇಕು ಎಂದು ನಮಗೆ ತಿಳಿದಿತ್ತು. ಒಂದು ತಂಡವಾಗಿ ನಾವು ಅದರ ಬಗ್ಗೆ ಮಾತನಾಡದಿರಲು ನಿರ್ಧರಿಸಿದ್ದೆವು. ಆದರೆ ಅದರ ಉದ್ದೇಶ ನ್ಯೂನತೆಗಳನ್ನು ನಿವಾರಿಸುವುದಾಗಿತ್ತು. ನಾವು ಹರಾಜಿನಲ್ಲಿ ಯೋಜಿಸಿದ ರೀತಿಯಲ್ಲಿಯೇ ಬೌಲಿಂಗ್ ದಾಳಿಯನ್ನು ಹೊಂದಿದ್ದರೆ, ಕಥೆ ಬೇರೆಯೇ ಆಗಿರುತ್ತಿತ್ತು. ಕೆಲವೊಮ್ಮೆ ವಿಷಯಗಳು ನಾವು ಅಂದುಕೊಂಡ ರೀತಿ ನಡೆಯುತ್ತೆ, ಕೆಲವೊಮ್ಮೆ ಹಾಗಾಗುವುದಿಲ್ಲ’’ ಎಂದಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಲ್ಪಟ್ಟ ನಂತರ ಲಖನೌ ತಂಡ 7 ವಿಕೆಟ್‌ಗೆ 205 ರನ್‌ಗಳ ಮೊತ್ತವನ್ನು ಗಳಿಸಿತು. ಆದರೆ ಹೈದರಾಬಾದ್ 18.2 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ಗುರಿಯನ್ನು ತಲುಪಿತು. ಈ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಗುರಿಯನ್ನು ಬೆನ್ನಟ್ಟಿದ ತಂಡ 200 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಗೆಲುವು ಸಾಧಿಸಿದೆ.
See how Sanjiv Goenka reacted after Rishabh Pant dismissal and trust me you will never see this behaviour from King SRK and KKR Ceo Venky Mysore at KKR ever.pic.twitter.com/Toda6iKnko
— कट्टर INDIA समर्थक 🦁🇮🇳 ™ (@KKRWeRule) May 19, 2025