ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಇಂದಿನಿಂದ ಆರಂಭಗೊಂಡಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಬಲಗೈ ಬ್ಯಾಟರ್ ಸರ್ಫರಾಝ್ ಖಾನ್, ವೇಗದ ಅರ್ಧಶತಕ ಗಳಿಸುವ ಮೂಲಕ ಮಿಂಚಿದ್ದಾರೆ.
In No Time!
5⃣0⃣ on Test debut for Sarfaraz Khan 👏 👏
Follow the match ▶️ https://t.co/FM0hVG5pje#TeamIndia | #INDvENG | @IDFCFIRSTBank pic.twitter.com/F5yTN44efL
— BCCI (@BCCI) February 15, 2024
ಕೇವಲ 48 ಎಸೆತಗಳಲ್ಲಿ ಈ ಸಾಧನೆ ಮಾಡಿದ ಎರಡನೇ ಟೀಮ್ ಇಂಡಿಯಾದ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅರ್ಧಶತಕ ದಾಖಲಿಸಲು ಬಳಸಿಕೊಂಡ 48 ಎಸೆತಗಳಲ್ಲಿ ಏಳು ಆಕರ್ಷಕ ಬೌಂಡರಿ ಹಾಗೂ ಒಂದು ಸಿಕ್ಸ್ ಒಳಗೊಂಡಿತ್ತು. ಸರ್ಫರಾಝ್ ಖಾನ್ ಈ ಸಾಧನೆಗೆ ಸ್ಟ್ಯಾಂಡ್‌ನಲ್ಲಿದ್ದ ತಂದೆ ನೌಶಾದ್ ಖಾನ್ ಮತ್ತು ಅವರ ಪತ್ನಿ ರೊಮಾನ ಝಹೂರ್ ಸಾಕ್ಷಿಯಾದರು.
TAKE A BOW, SARFARAZ KHAN…!!! 🫡
62 (66) with 9 fours and a six – a quality show by Sarfaraz. He was all set for a century, but sadly got run out. Well done, Sarfaraz. 👌 pic.twitter.com/sM5XKEArE3
— Mufaddal Vohra (@mufaddal_vohra) February 15, 2024
ಸದ್ಯ ಟೀಮ್ ಇಂಡಿಯಾ 314 ರನ್ ಗಳಿಸಿದ್ದು, 5 ವಿಕೆಟ್ ಕಳೆದುಕೊಂಡಿದೆ. ರವೀಂದ್ರ ಜಡೇಜಾ ಶತಕ ಬಾರಿಸಲೆಂದು ಒಂದು ರನ್ ಕದಿಯಲೆತ್ನಿಸಿದಾಗ ರನ್‌ಔಟ್‌ಗೆ ಸರ್ಫರಾಝ್ ಖಾನ್ ಬಲಿಯಾದರು. 66 ಎಸೆತಗಳನ್ನು ಎದುರಿಸಿದ ಸರ್ಫರಾಝ್ ಖಾನ್, 1 ಸಿಕ್ಸ್ ಹಾಗೂ 9 ಬೌಂಡರಿಗಳ ನೆರವಿನಿಂದ 62 ರನ್ ಗಳಿಸಿ, ಔಟಾದರು.
The happiness on Sarfaraz Khan’s father and wife face. ❤️ pic.twitter.com/rJJB6Oa96d
— Mufaddal Vohra (@mufaddal_vohra) February 15, 2024