ಭಾರತ ವಿರುದ್ಧ ನಡೆದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ರೋಚಕ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡ 28 ರನ್‌ಗಳ ಅಂತರದ ಗೆಲುವು ಸಾಧಿಸಿದೆ.
ಹೈದರಾಬಾದ್‌ನಲ್ಲಿ ನಡೆದ ಪಂದ್ಯದ 4ನೇ ದಿನದಲ್ಲಿ ಆಂಗ್ಲ ಪಡೆ ಎರಡನೇ ಇನಿಂಗ್ಸ್‌ನಲ್ಲಿ 420 ರನ್‌ಗಳೊಂದಿಗೆ ನೀಡಿದ 231 ರನ್‌ಗಳ ಸವಾಲನ್ನು ಬೆನ್ನಟ್ಟಿದ ಟೀಂ ಇಂಡಿಯಾ ತನ್ನ 2ನೇ ಇನಿಂಗ್ಸ್‌ನಲ್ಲಿ 202 ರನ್‌ಗಳಿಗೆ ತನ್ನ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಸೋಲನ್ನೊಪ್ಪಿಕೊಂಡಿತು.
ಭಾರತದ ಪರವಾಗಿ ನಾಯಕ ರೋಹಿತ್ ಶರ್ಮಾ 39, ಶ್ರೀಕರ್ ಭರತ್ 28, ಆರ್ ಅಶ್ವಿನ್ 28 ಹಾಗೂ ಕೆ ಎಲ್ ರಾಹುಲ್ 22 ರನ್ ಗಳಿಸಿದ್ದನ್ನು ಬಿಟ್ಟರೆ ಉಳಿದವರು 20ರ ಗಡಿ ದಾಟಲಿಲ್ಲ.
ಟೀಂ ಇಂಡಿಯಾ ಬ್ಯಾಟರ್‌ಗಳನ್ನು ಪೆವಿಲಿಯನ್ ಪಡೆ ದಾರಿ ತೋರಿಸಿದ ಸ್ಪಿನ್ನರ್ ಟಾಮ್ ಹಾರ್ಟ್ಲಿ 7 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. 26.2 ಓವರ್‌ಗಳನ್ನು ಮಾಡಿದ ಟಾಮ್ ಹಾರ್ಟ್ಲಿ 62 ರನ್‌ಗಳಿಗೆ 7 ವಿಕೆಟ್ ಕಬಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂವರು ಮಾನಗೆಟ್ಟ ನಾಯಕರು ಮತ್ತು ರಾಮ ರಾಜಕಾರಣ
ಎರಡನೇ ಇನಿಂಗ್ಸ್‌ನಲ್ಲಿ 316/6 ವಿಕೆಟ್‌ನೊಂದಿಗೆ ನಾಲ್ಕನೇ ದಿನವನ್ನು ಆರಂಭಿಸಿದ ಆಂಗ್ಲರ ಪಡೆ ಓಲಿ ಪೋಪ್ ಅವರ 196 ರನ್‌ಗಳ ನೆರವಿನಿಂದ 102 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 420 ರನ್ ಗಳಿಸಿ ಭಾರತಕ್ಕೆ 231 ರನ್ ಗುರಿ ನೀಡಿತು. 278 ಚೆಂಡುಗಳಲ್ಲಿ 21 ಬೌಂಡರಿಯೊಂದಿಗೆ 196 ರನ್ ಗಳಿಸಿದ ಪೋಪ್ ಕೇವಲ 4 ರನ್‌ಗಳಿಂದ ದ್ವಿಶತಕ ವಂಚಿತರಾದರು.
2ನೇ ಇನಿಂಗ್ಸ್‌ನಲ್ಲಿ ಭಾರತದ ಪರ ಬುಮ್ರಾ 41/4, ಆರ್ ಅಶ್ವಿನ್ 126/3, ರವೀಂದ್ರ ಜಡೇಜಾ 131/2 ವಿಕೆಟ್ ಕಿತ್ತು ಇಂಗ್ಲೆಂಡ್ ಪತನಕ್ಕೆ ಕಾರಣರಾದರು.
ಇದಕ್ಕೂ ಮೊದಲು ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 246 ರನ್ ಗಳಿಸಿದರೆ, ಇದಕ್ಕುತ್ತರವಾಗಿ ಟಿಂ ಇಂಡಿಯಾ 436 ರನ್ ಕಲೆ ಹಾಕಿತ್ತು.
ಈ ಗೆಲುವಿನಿಂದ ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಮಾ.2ರಿಂದ ವಿಶಾಖಪಟ್ಟಣಂನಲ್ಲಿ ಆರಂಭವಾಗಲಿದೆ.
A special spell from Tom Hartley leads England to an extraordinary win in the opening Test against India 👏#WTC25 | 📝 #INDvENG: https://t.co/E53vcqjfHE pic.twitter.com/qoJl3biFfu
— ICC (@ICC) January 28, 2024