ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ವಿಶ್ವಕಪ್ 2023ರ ಲೀಗ್ ಹಂತದಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ಕೊನೆಯ ಪಂದ್ಯವನ್ನಾಡುತ್ತಿರುವ ಟೀಮ್ ಇಂಡಿಯಾ, ಕೆ ಎಲ್ ರಾಹುಲ್-ಶ್ರೇಯಸ್ ಅಯ್ಯರ್ ಭರ್ಜರಿ ಶತಕದ ನೆರವಿನಿಂದ ಗೆಲುವಿಗೆ 411 ರನ್‌ಗಳ ಬೃಹತ್ ಗುರಿ ನೀಡಿದೆ.
ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಶ್ರೇಯಸ್ ಅಯ್ಯರ್ ಔಟಾಗದೆ 128 ರನ್ ಹಾಗೂ ಕೆ.ಎಲ್ ರಾಹುಲ್ 102 ರನ್ ಗಳಿಸಿದರು. ಈ ಜೋಡಿ 4ನೇ ವಿಕೆಟ್‌ಗೆ 208 ರನ್‌ಗಳ ಜೊತೆಯಾಟ ನಡೆಸಿದ ಪರಿಣಾಮ ನಿಗದಿತ 50 ಓವರ್‌ಗಳಲ್ಲಿ ಟೀಮ್ ಇಂಡಿಯಾ, 4 ವಿಕೆಟ್ ಕಳೆದುಕೊಂಡು 410 ರನ್ ಗಳಿಸಿತು. ಆ ಮೂಲಕ ಟೀಮ್ ಇಂಡಿಯಾ ಈ ವರ್ಷದ ವಿಶ್ವಕಪ್‌ನಲ್ಲಿ ಅತ್ಯಧಿಕ ಸ್ಕೋರ್ ದಾಖಲಿಸಿದೆ.
Iyer – 128* (94).
KL Rahul – 102 (64).
Rohit – 61 (54).
Gill – 51 (32).
Kohli – 51 (56).India post 410/4 – the highest ever World Cup score this year. What a batting effort led by KL and Iyer. pic.twitter.com/VADC4Q12mT
— Mufaddal Vohra (@mufaddal_vohra) November 12, 2023
ಏಕದಿನ ವಿಶ್ವಕಪ್‌ನ ಇತಿಹಾಸದಲ್ಲಿ ಟಾಪ್-5 ಆಟಗಾರರು ಒಂದು ತಂಡಕ್ಕೆ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದು ಇದೇ ಮೊದಲು. ರೋಹಿತ್ ಶರ್ಮಾ 61(54 ಎಸೆತ, 2 ಸಿಕ್ಸ್, 8 ಬೌಂಡರಿ) ಶುಭಮನ್ ಗಿಲ್ 51 (32 ಎಸೆತ, 4 ಸಿಕ್ಸ್, 3 ಬೌಂಡರಿ), ವಿರಾಟ್ ಕೊಹ್ಲಿ 51(56 ಎಸೆತ, 1 ಸಿಕ್ಸ್, 5 ಬೌಂಡರಿ), ಶ್ರೇಯಸ್ ಅಯ್ಯರ್ ಔಟಾಗದೆ 128*(94 ಎಸೆತ, 5 ಸಿಕ್ಸ್, 10 ಬೌಂಡರಿ) & ಕೆ ಎಲ್ ರಾಹುಲ್ 102(64 ಎಸೆತ, 4 ಸಿಕ್ಸ್, 11 ಬೌಂಡರಿ) ರನ್ ಗಳಿಸಿದರು. ಈ ಮೂಲಕ ಒಟ್ಟಾರೆ ವಿಶ್ವಕಪ್ ಟೂರ್ನಿಯಲ್ಲಿ ಟಾಪ್ 5 ಆಟಗಾರರ ಪೈಕಿ ಮೂವರು ಅರ್ಧಶತಕ ಗಳಿಸಿದರೆ, ಇಬ್ಬರು ಶತಕ ಗಳಿಸಿ ಇತಿಹಾಸ ನಿರ್ಮಿಸಿದರು.
📸📸 HUNDRED off just 62 deliveries 👏👏
A marvellous knock that from KL Rahul 🔝#TeamIndia | #CWC23 | #MenInBlue | #INDvNED pic.twitter.com/D6dwgfYE1n
— BCCI (@BCCI) November 12, 2023
ವಿಶ್ವಕಪ್‌ನಲ್ಲಿ ಮೊದಲ ಶತಕ ಬಾರಿಸಿದ ಶ್ರೇಯಸ್ ಅಯ್ಯರ್
ಇಂದಿನ ಪಂದ್ಯದಲ್ಲಿ 94 ಎಸೆತಗಳಲ್ಲಿ 5 ಸಿಕ್ಸ್, 10 ಬೌಂಡರಿಯ ನೆರವಿನೊಂದಿಗೆ ಔಟಾಗದೆ 128* ರನ್ ಗಳಿಸಿದ ಟೀಮ್ ಇಂಡಿಯಾದ ಬಲಗೈ ಬ್ಯಾಟರ್ ಶ್ರೇಯಸ್ ಅಯ್ಯರ್, ವಿಶ್ವಕಪ್‌ನಲ್ಲಿ ಮೊದಲ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಈ ಶತಕದ ಮೂಲಕ ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ನಾಲ್ಕನೇ ಶತಕ ಬಾರಿಸಿದರು.
HUNDRED BY SHREYAS IYER….!!!!
What an innings by Iyer – his maiden World Cup century. He’s in a great touch, a great news for India ahead of the all important clash. pic.twitter.com/oV2thCkwMB
— Mufaddal Vohra (@mufaddal_vohra) November 12, 2023