ಟೀಮ್ ಇಂಡಿಯಾ ವನಿತೆಯರು ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಭರವಸೆಯ ಆಟಗಾರ್ತಿಯರಾದ ಸ್ಮೃತಿ ಮಂದಾನಾ ಬಾರಿಸಿದ ಶತಕ ಹಾಗೂ ಶ್ರೀ ಚರಣಿ ಅವರ ಬಿಗುವಿನ ಬೌಲಿಂಗ್ ದಾಳಿಗೆ ಆತಿಥೇಯ ತಂಡ ಕಂಗಾಲಿದೆ. ಸ್ಮೃತಿ ಮಂದಾನಾ ಮುಂದಾಳತ್ವದ ಭಾರತ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೊತರೂ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 210 ರನ್ ಭಾರಿ ಮೊತ್ತ ಕಲೆ ಹಾಕಿತು. ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 14.5 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು.
ಟಾಸ್ ಸೋತರೂ ಮೊದಲ ಬ್ಯಾಟ್ ಮಾಡಿದ ಭಾರತದ ವನಿತೆಯರ ತಂಡ ಉತ್ತಮ ಆರಂಭವನ್ನು ಕಂಡಿತು. ಆರಂಭಿಕರಾದ ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನಾ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೊಡಿ ಮೊದಲ ವಿಕೆಟ್‌ಗೆ 77 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಶೆಫಾಲಿ ವರ್ಮಾ 20 ರನ್ ಬಾರಿಸಿ ಔಟ್ ಆದರು. ಇನ್ನು ಎರಡನೇ ವಿಕೆಟ್‌ಗೆ ಸ್ಮೃತಿ ಅವರನ್ನು ಸೇರಿಕೊಂಡ ಹರ್ಲಿನ್ ಡಿಯೋಲ್ ಜೋಡಿ ಸಹ ಉತ್ತಮ ಜೊತೆಯಾಟವನ್ನು ನೀಡಿತು.
ಇದನ್ನು ಓದಿದ್ದೀರಾ? ಭಾರತ vs ಐರ್ಲೆಂಡ್ | ವೇಗದ ಶತಕ ಬಾರಿಸಿ ದಾಖಲೆ ಬರೆದ ಸ್ಮೃತಿ ಮಂದಾನಾ
ಈ ಜೋಡಿ ಇಂಗ್ಲೆಂಡ್ ತಂಡದ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿತು. ಈ ಜೋಡಿಯ ಆಟಕ್ಕ ತಡೆ ಹಾಕುವಲ್ಲಿ ಇಂಗ್ಲೆಂಡ್ ಜೋಡಿ ವಿಫಲವಾಯಿತು. ಸ್ಮೃತಿ ಶತಕ ಎರಡನೇ ವಿಕೆಟ್‌ಗೆ ಸ್ಮೃತಿ ಹಾಗೂ ಹರ್ಲಿನ್ ಜೋಡಿ 45 ಎಸೆತಗಳಲ್ಲಿ 94 ರನ್ ಸಿಡಿಸಿತು. ಈ ವೇಳೆ 7 ಬೌಂಡರಿ ಸಹಾಯದಿಂದ 43 ರನ್ ಬಾರಿಸಿದ ಹರ್ಲಿನ್ ಔಟ್ ಆದರು. ನಂತರ ಬಂದ ಯಾವುದೇ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಲಿಲ್ಲ. ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಇವರು 62 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್ ಸಹಾಯದಿಂದ 112 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಸ್ಮೃತಿ ಮೂರಂಕಿ ಮುಟ್ಟಿ ಸಂಭ್ರಮಿಸಿದರು.
ಸವಾಲಿನ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಜೋಡಿ 9 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿತ್ತು. ಇಂಗ್ಲೆಂಡ್ ತಂಡದ ಪರ ಟ್ಯಾಮಿ ಬ್ಯೂಮಾಂಟ್, ಎಮ್ ಆರ್ಲಾಟ್ ಮಾತ್ರ ಟೀಮ್ ಇಂಡಿಯಾದ ಬೌಲರ್‌ಗಳನ್ನು ಕಾಡಿದರು. ಆದರೆ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಇಂಗ್ಲೆಂಡ್ ತಂಡದ ಪರ ನಾಟ್ ಸ್ಕಿವರ್ ಬ್ರಂಟ್ 10 ಬೌಂಡರಿ ನೆರವಿನಿಂದ 66 ರನ್ ಸಿಡಿಸಿ ಔಟ್ ಆದರು.
ಇಂಗ್ಲೆಂಡ್ ತಂಡದ ಪರ ನಾಟ್ ಸ್ಕಿವರ್ ಬ್ರಂಟ್ ಮಾತ್ರ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರಿಗೆ ಬೆರೊಬ್ಬ ಬ್ಯಾಟರ್ ಜೊತೆ ನೀಡಲಿಲ್ಲ. ಟೀಮ್ ಇಂಡಿಯಾ ಸಾಧನೆ ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ, ಇಂಗ್ಲೆಂಡ್ ತಂಡವು ಅತಿ ಹೆಚ್ಚು ಪಂದ್ಯಗಳನ್ನು ಆಡಿದೆ. ಈ ಮೂಲಕ ಟೀಮ್ ಇಂಡಿಯಾ 200ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಸಾಧನೆ ಮಾಡಿದೆ. ಇಂಗ್ಲೆಂಡ್ ತಂಡ 216, ಆಸ್ಟ್ರೇಲಿಯಾ 200, ಟೀಮ್ ಇಂಡಿಯಾ 200 ಪಂದ್ಯಗಳನ್ನು ಆಡಿದ ಸಾಧನೆ ಮಾಡಿದೆ. ಈ ಮೂಲಕ ವಿಶ್ವದಲ್ಲೇ 200ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಮೂರನೇ ತಂಡ ಎಂಬ ಹಿರಿಮೆ ತನ್ನದಾಗಿಸಿಕೊಂಡಿದೆ.
