ಐಸಿಸಿಯ ಪ್ರಮುಖ ಟೂರ್ನಿಯ ಮಹತ್ವದ ಪಂದ್ಯಗಳಲ್ಲಿ ಸೋಲುವ ಮೂಲಕ ‘ಚೋಕರ್ಸ್’ ಹಣೆಪಟ್ಟಿ ತಲೆಗೆ ಕಟ್ಟಿಕೊಂಡಿದ್ದ ದಕ್ಷಿಣ ಆಫ್ರಿಕಾ ಕೊನೆಗೂ ಅದರಿಂದ ಮುಕ್ತಗೊಂಡಿದೆ. 2024ರ ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಮೊದಲ ಬಾರಿಗೆ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ಬರೆದಿದೆ.
ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಆಯೋಜನೆ ಆಗಿರುವ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನದ ಎದುರು 9 ವಿಕೆಟ್‌ಗಳ ಗೆಲುವು ಕಾಣುವ ಮೂಲಕ ಫೈನಲ್‌ಗೆ ಚೊಚ್ಚಲ ಪ್ರವೇಶ ಮಾಡಿದೆ.
🟡🟢 SEMI-FINAL RESULT | #SAVAFG
A tale of aspiration & inspiration continues✨
South Africa prevail in style and win by 9 wickets! 🇿🇦
See you in the Final 👊#WozaNawe #BePartOfIt#OutOfThisWorld #T20WorldCup pic.twitter.com/McA3knHhY5
— Proteas Men (@ProteasMenCSA) June 27, 2024
ಇದನ್ನು ಓದಿದ್ದೀರಾ? T20 ವಿಶ್ವಕಪ್ | ಅಫ್ಘಾನಿಸ್ತಾನ ಕೈ ಹಿಡಿದ ಅದೃಷ್ಟ: ಬಾಂಗ್ಲಾ ಮಣಿಸಿ ಸೆಮಿಫೈನಲ್‌ಗೆ ರಶೀದ್ ಖಾನ್ ಪಡೆ
ಅಫ್ಘಾನಿಸ್ತಾನ ತಂಡ ಮೊದಲು ಬ್ಯಾಟ್ ಮಾಡಿದ್ದು ದಕ್ಷಿಣ ಆಫ್ರಿಕಾ ಬೌಲರ್‌ಗಳ ದಾಳಿ ಎದುರಿಸುವಲ್ಲಿ ವಿಫಲವಾಗಿದ್ದು 11.5 ಓವರ್‌ಗಳಲ್ಲಿ 56 ರನ್‌ಗಳಿಗೆ ಆಲೌಟ್ ಆಗಿದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್ ಮತ್ತು ತಬ್ರೇಜ್ ಶಮ್ಸಿ ತಲಾ 3 ವಿಕೆಟ್ ಪಡೆದರು.
T20 WC: All-round South Africa overcome semifinal curse, end Afghanistan’s dream run with 9 wicket win to reach finals
Read @ANI Story | https://t.co/U6N9V8ADVg#SouthAfrica #ICCT20WorldCup #SAvsAFG #Afghanistan #cricket pic.twitter.com/tMdcfTSOnw
— ANI Digital (@ani_digital) June 27, 2024
ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 8.5 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಜಯ ಪಡೆದಿದೆ. ದಕ್ಷಿಣ ಆಫ್ರಿಕಾ ಪರ ರೆಜಾ ಹೆಂಡ್ರಿಕ್ಸ್ (ಅಜೇಯ 29) ಹಾಗೂ ಐಡೆನ್ ಮಾರ್ಕ್ರಾಮ್ (ಅಜೇಯ 23) ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ನೆರವಾಗಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ಯಾವುದೇ ಮಾದರಿಯ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿರುವುದು ಇದೇ ಮೊದಲು.
Not exactly the ending we hoped for in this #T20WorldCup, but hats off to #AfghanAtalan for an unforgettable performance throughout the event. 🙌
Congratulations to @ProteasMenCSA for securing their first-ever final berth in World Cup cricket. 👍#GloriousNationVictoriousTeam pic.twitter.com/ZiLnLudHlX
— Afghanistan Cricket Board (@ACBofficials) June 27, 2024