ಐಸಿಸಿ ವಿಶ್ವಕಪ್ ಟೂರ್ನಿಯ 26ನೇ ಪಂದ್ಯದ ರೋಚಕ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಒಂದು ವಿಕೆಟ್ ಅಂತರದಿಂದ ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸಿದೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 271 ರನ್‌ಗಳ ಸವಾಲನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 47.2 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಭರ್ಜರಿ ಆಟವಾಡಿದ ಏಡನ್ ಮಾರ್ಕ್ರಮ್ 41ನೇ ಓವರ್‌ನಲ್ಲಿ (250/7) ಉಸ್ಮಾ ಮಿರ್ ಬೌಲಿಂಗ್‌ನಲ್ಲಿ ಔಟಾದ ನಂತರ ಪಂದ್ಯದ ಗತಿ ಬದಲಾಯಿತು. ನಂತರದ ಓವರ್‌ಗಳಲ್ಲಿ ಶಾಹೀನ್ ಶಾ ಆಫ್ರಿದಿ 45/3 ಹಾಗೂ ಹಾರಿಸ್ ರೌಫ್ 62/2 ಮಿಂಚಿದರಾದರು 47ನೇ ಓವರ್‌ನಲ್ಲಿ ಕೇಶವ ಮಹಾರಾಜ್ ಬೌಂಡರಿ ಹೊಡೆಯುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಜಯವನ್ನು ತನ್ನದಾಗಿಸಿಕೊಂಡಿತು.
Shadab Khan 🔄 Usama Mir
Pakistan make first-ever Cricket World Cup concussion sub 👇#PAKvSA #CWC23https://t.co/CXGhWQ4Jik
— ICC Cricket World Cup (@cricketworldcup) October 27, 2023
ಸೆಮಿಫೈನಲ್ ಅರ್ಹತೆಗಾಗಿ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ ಸತತ ನಾಲ್ಕನೇ ಸೋಲಿನೊಂದಿಗೆ ಟೂರ್ನಿಯಿಂದ ಬಹುತೇಕ ನಿರ್ಗಮಿಸಿದೆ.
ಉತ್ತಮ ಆಟವಾಡಿದ ಮಧ್ಯಮ ಕ್ರಮಾಂಕದ ಆಟಗಾರ ಏಡನ್ ಮಾರ್ಕ್ರಮ್ 93 ಚೆಂಡುಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್‌ನೊಂದಿಗೆ 91 ರನ್ ಬಾರಿಸಿ ಗೆಲುವಿನ ರೂವಾರಿಯಾದರು.
Markram is a palindrome!
Score banana ho ya chase karna, dono same 🏏😎#AidenMarkram#CWC23 #PAKvSA pic.twitter.com/dAIFoJ5gRV— Disney+ Hotstar (@DisneyPlusHS) October 27, 2023
ಆರಂಭಿಕರಾದ ಕ್ವಿಂಟನ್ ಡಿ ಕಾಕ್ (24) ಹಾಗೂ ನಾಯಕ ಟೆಂಬಾ ಬವುಮಾ ಔಟಾದ ನಂತರ ಏಡನ್ ಮಾರ್ಕ್ರಮ್‌ಗೆ ಡೇವಿಡ್ ಮಿಲ್ಲರ್ (29),ಮಾರ್ಕೊ ಜಾನ್ಸೆನ್ (20), ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ (21) ಉತ್ತಮ ಜೊತೆಯಾಟ ನೀಡಿದರು.
ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 5 ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ಉತ್ತಮ ರನ್ ಸರಾಸರಿಯೊಂದಿಗೆ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ.
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ಆರಂಭಿಕ ಆಘಾತಕ್ಕೆ ಒಳಗಾಯಿತು. ಇಮಾಮ್ ಉಲ್ ಹಕ್ (12) ಮತ್ತು ಅಬ್ದುಲ್ಲಾ ಶಫೀಕ್ (9) ಅವರು ಮಾರ್ಕೋ ಜಾನ್ಸನ್ ಬೌಲಿಂಗ್‌ನಲ್ಲಿ ಬೇಗನೇ ಔಟಾದರು.
A stern effort with the ball from Proteas to bowl out Pakistan for 2️⃣7️⃣0️⃣. Shamo led the attack as he notched 4 wickets while Jansen took 3
🇿🇦 need 2️⃣7️⃣1️⃣ runs to win #CWC23 #BePartOfIt pic.twitter.com/PwoKBpbW8y
— Proteas Men (@ProteasMenCSA) October 27, 2023
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಬಾಬರ್ ಅಜಮ್ (50 ರನ್) ತಂಡಕ್ಕೆ ಆಸರೆಯಾಗಿ ಅರ್ಧಶತಕ ಗಳಿಸಿದರು. ಮಹತ್ವದ 50 ರನ್ ಸಿಡಿಸಿದ ಬಾಬರ್, ರಿಜ್ವಾನ್(31) ಜೊತೆಗೂಡಿ 3ನೇ ವಿಕೆಟ್ಗೆ 48 ರನ್ ಪೇರಿಸಿದರು. ಇದಲ್ಲದೆ, 4ನೇ ವಿಕೆಟ್ಗೆ ಇಫ್ತಿಕಾರ್ ಅಹ್ಮದ್(21) ಜೊತೆಗೂಡಿ 43 ರನ್ ಕಲೆ ಹಾಕುವಲ್ಲಿ ಯಶಸ್ವಿಯಾದರು.
ಈ ಸುದ್ದಿ ಓದಿದ್ದೀರಾ? ವಿಶ್ವಕಪ್ 2023 | ಶ್ರೀಲಂಕಾ ದಾಳಿಗೆ ಚಾಂಪಿಯನ್ ಇಂಗ್ಲೆಂಡ್ ಧೂಳೀಪಟ; ಲಂಕನ್ನರಿಗೆ ಭಾರಿ ಗೆಲುವು
ರಿಜ್ವಾನ್ ಹಾಗೂ ಇಫ್ತಿಕಾರ್ ಔಟಾಗಿ 141ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನಕ್ಕೆ ಸೌದ್ ಶಕೀಲ್ ಮತ್ತು ಶಾದಾಬ್ ಖಾನ್ ಅದ್ಭುತ ಜೊತೆಯಾಟವಾಡಿ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯದಂತೆ ಪಾರು ಮಾಡಿದರು.
ಇವರಿಬ್ಬರ ಜೋಡಿ 6ನೇ ವಿಕೆಟ್ಗೆ 71 ಎಸೆತಗಳಲ್ಲಿ 84 ರನ್ ಬಾರಿಸಿತು. ಈ ವೇಳೆ ಶಕೀಲ್(52) ಅರ್ಧಶತಕ ಸಿಡಿಸಿದರೆ, ಶಾದಾಬ್ 43 ರನ್ ಸಿಡಿಸಿ ಔಟಾದರು. ಉಳಿದಂತೆ ಮೊಹಮ್ಮದ್ ನವಾಜ್ ಕೊನೆಯಲ್ಲಿ ಅಬ್ಬರಿಸಲು ಯತ್ನಿಸಿದರಾದರೂ 24 ರನ್ ಗಳಿಗೆ ಆಟ ಮುಗಿಸಿದರು. ಅಂತಿಮವಾಗಿ ಪಾಕ್ ತಂಡ 46.4 ಓವರ್‌ಗಳಲ್ಲಿ 270 ರನ್ಗಳಿಗೆ ಸರ್ವಪತನ ಕಂಡಿತು.
ದಕ್ಷಿಣ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ತಬ್ರೈಜ್ ಶಂಸಿ 60/4, ಜಾನ್ಸನ್ 43/3, ಜೆರಾಲ್ಡ್ ಕೊಯೆಟ್ಜಿ 42/2 ವಿಕೆಟ್ ಕಬಳಿಸಿದರು.