ಪ್ರಬಲ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023ರ ಟೂರ್ನಿಯಲ್ಲಿ ತನ್ನ ವಿಜಯದ ಯಾತ್ರೆಯನ್ನು ಮುಂದುವರೆಸಿದೆ. ಆರಂಭದ ಪಂದ್ಯಗಳಲ್ಲಿ ಗೆಲುವು ಸಾಧಿಸುತ್ತ ಬಂದ ನ್ಯೂಜಿಲೆಂಡ್ ತಂಡವನ್ನು 190 ರನ್ನುಗಳ ಭಾರಿ ಅಂತರದಿಂದ ಮಣಿಸಿ ಸೆಮಿಫೈನಲ್ ದಾರಿಯನ್ನು ಸುಗಮಗೊಳಿಸಿಕೊಂಡಿದೆ.
ಆಸ್ಟ್ರೇಲಿಯಾ ವಿರುದ್ಧದ ಕಳೆದ ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಿ ಸನಿಹದಲ್ಲಿ ಸೋತಿದ್ದ ನ್ಯೂಜಿಲೆಂಡ್ ಇಂದು ಪುಣೆಯಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 358 ರನ್ನುಗಳ ಭಾರಿ ಸವಾಲನ್ನು ಬೆನ್ನಟ್ಟಿ 35.3 ಓವರ್‌ಗಳಲ್ಲಿ ಕೇವಲ 167 ರನ್‌ಗಳಿಗೆ ಆಲೌಟ್ ಆಗಿ ಸೋಲಿಗೆ ಶರಣಾಯಿತು.
ಕೊನೆಯಲ್ಲಿ ಉತ್ತಮ ಆಟವಾಡಿದ ಗ್ಲೆನ್ ಫೆಲಿಪ್ಸ್ (60), ವಿಲ್ ಯಂಗ್ (33) ಹಾಗೂ ಡೇರಿಲ್ ಮಿಚಲ್(24) ಅವರ ಸಣ್ಣ ಮೊತ್ತವನ್ನು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳ್ಯಾರು ಒಂದಂಕಿಯ ಮೊತ್ತವನ್ನು ಗಳಿಸಲಿಲ್ಲ.
ಕರಾರುವಕ್ ಬೌಲಿಂಗ್ ನಡೆಸಿದ ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ 46/4, ಮಾರ್ಕೊ ಜಾನ್‌ಸೆನ್ 31/3 ಹಾಗೂ ಜೆರಾಲ್ಡ್ ಕೋಟ್ಜಿ 41/2 ವಿಕೆಟ್ ಕಬಳಿಸಿ ಗೆಲುವಿನ ರೂವಾರಿಯಾದರು.
ಸತತ ಮೂರು ಪಂದ್ಯಗಳನ್ನು ಸೋತಿರುವ ನ್ಯೂಜಿಲೆಂಡ್ ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ಲೀಗ್‌ನ ಉಳಿದ ಎರಡೂ ಪಂದ್ಯಗಳನ್ನು ಉತ್ತಮ ರನ್‌ರೇಟ್‌ನಲ್ಲಿ ಗೆಲ್ಲಬೇಕಿದೆ.
South Africa have scored over 300 in their last eight ODI innings when batting first 🔥#NZvSA #CWC23 pic.twitter.com/LvQEhh5Nj0
— ESPNcricinfo (@ESPNcricinfo) November 1, 2023
ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್ ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಟೆಂಬಾ ಬವುಮಾ ಹಾಗೂ ಸ್ಪೋಟಕ ಆಟಗಾರ ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭ ನೀಡಿದರು.
ಆದರೆ 9 ನೇ ಓವರ್‌ನಲ್ಲಿ ಬೋಲ್ಟ್ ಬೌಲಿಂಗ್‌ನಲ್ಲಿ ಕೆಟ್ಟ ಹೊಡೆತಕ್ಕೆ ಮುಂದಾದ ನಾಯಕ ಟೆಂಬಾ ಬವುಮಾ (24) ಮಿಚೆಲ್‌ಗೆ ಕ್ಯಾಚಿತ್ತು ಔಟಾದರು.
ನಂತರ ಶುರುವಾದದ್ದು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ಕ್ವಿಂಟನ್ ಡಿ ಕಾಕ್ ಸೊಗಸಾದ ಆಟ. ಆಗಾಗ ಸಿಕ್ಸರ್, ಬೌಂಡರಿಗಳನ್ನು ಬಾರಿಸುತ್ತ ಉಳಿದ ಸಮಯದಲ್ಲಿ ರಕ್ಷಣಾತ್ಮಕವಾಗಿ ಆಡಿದ ಡಸ್ಸೆನ್ ಹಾಗೂ ಡಿ ಕಾಕ್ ಜೋಡಿ ಎರಡನೇ ವಿಕೆಟ್ ನಷ್ಟಕ್ಕೆ ಅದ್ಭುತ 200 ರನ್‌ಗಳ ಜೊತೆಯಾಟವಾಡಿದರು.
ವಿಶ್ವಕಪ್‌ನಲ್ಲಿ ಡಿ ಕಾಕ್ 4ನೇ ಶತಕ
ಶತಕ ಬಾರಿಸಿದ ನಂತರ 40 ನೇ ಓವರ್‌ನಲ್ಲಿ ತಂಡದ ಮೊತ್ತ 238 ರನ್ ಇದ್ದಾಗ 114(116 ಚೆಂಡು) ರನ್ ಗಳಿಸಿದ್ದ ಕ್ವಿಂಟನ್ ಡಿ ಕಾಕ್ ಸೌಥಿ ಬೌಲಿಂಗ್‌ನಲ್ಲಿ ಫಿಲಿಪ್ಸ್‌ಗೆ ಕ್ಯಾಚಿತ್ತು ಔಟಾದರು. ಅವರ ಅದ್ಭುತ ಆಟದಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿದ್ದವು.
ಡಿ ಕಾಕ್ 2023ರ ವಿಶ್ವಕಪ್ ಟೂರ್ನಿಯಲ್ಲಿ 4ನೇ ಶತಕವಾಗಿದೆ. ರೋಹಿತ್ ಶರ್ಮಾ ಅವರ ಒಂದೇ ವಿಶ್ವಕಪ್‌ನಲ್ಲಿ ಪೇರಿಸಿರುವ 5 ಶತಕ ಸರಿಗಟ್ಟಲು ಒಂದು ಶತಕ ಬಾಕಿಯಿದೆ. ಅಲ್ಲದೆ ಈ ಟೂರ್ನಿಯಲ್ಲಿ 545 ರನ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೋಚ್ ದ್ರಾವಿಡ್ ಕಾಣ್ಕೆ ಕಾಣುತ್ತಿಲ್ಲವೇಕೆ?
They lost the toss, but South Africa go past 350 once again in the World Cup after batting first!
New Zealand need 358 to win in Pune 🎯 https://t.co/mrENWOl73e #NZvSA #CWC23 pic.twitter.com/lpcSku1zbL
— ESPNcricinfo (@ESPNcricinfo) November 1, 2023
ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಉತ್ತಮ ಬ್ಯಾಟಿಂಗ್
ಡಿ ಕಾಕ್‌ಗೆ ಉತ್ತಮ ಜೊತೆ ನೀಡಿದ ಡೆರ್ ಡಸ್ಸೆನ್ 48ನೇ ಓವರ್‌ಗಳವರೆಗೂ ಉತ್ತಮ ಆಟವಾಡಿ ಶತಕವನ್ನು ಬಾರಿಸಿದರು. 118 ಚೆಂಡುಗಳಲ್ಲಿ 133 ರನ್ ಗಳಿಸಿದ ಡಸ್ಸೆನ್ ಅಟದಲ್ಲಿ 9 ಬೌಂಡರಿ, 5 ಭರ್ಜರಿ ಸಿಕ್ಸರ್‌ಗಳಿದ್ದವು. ಡೆರ್ ಡಸ್ಸೆನ್ ಕೂಡ ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಶತಕ ಬಾರಿಸಿದರು.
ಡಸ್ಸೆನ್ ಔಟಾದ ನಂತರ ಮಿಲ್ಲರ್ ತಮ್ಮ ಸ್ಫೋಟಕ ಆಟವನ್ನು ಮುಂದುವರೆಸಿ 30 ಚೆಂಡುಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ 53 ರನ್ ಬಾರಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 357 ರನ್‌ಗಳ ಭರ್ಜರಿ ಮೊತ್ತ ಪೇರಿಸಿತು.
ದಕ್ಷಿಣ ಈ ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಲ್ಲ ಪಂದ್ಯಗಳಲ್ಲಿಯೂ 300 ಮೇಲ್ಪಟ್ಟು ರನ್ ಪೇರಿಸಿರುವುದು ದಾಖಲೆಯೇ ಸರಿ.
✅ Century against Sri Lanka
✅ Century against New ZealandRassie van der Dussen gets into the act 👉 https://t.co/mrENWOl73e #NZvSA #CWC23 pic.twitter.com/RIGMZifuPD
— ESPNcricinfo (@ESPNcricinfo) November 1, 2023