10 ವರ್ಷಗಳ ಹಿಂದಿನ ಟ್ವೀಟ್‌ಗೆ ಸಂಬಂಧಿಸಿ, ಕ್ರಿಕೆಟ್ ವಿಶ್ವಕಪ್‌ಗಾಗಿ ಕೆಲ ದಿನಗಳ ಹಿಂದೆ ಪಾಕಿಸ್ತಾನದಿಂದ ಬಂದಿದ್ದ ಕ್ರೀಡಾ ನಿರೂಪಕಿ ಜೈನಾಬ್ ಅಬ್ಬಾಸ್ ಅವರು ಭಾರತ ತೊರೆದಿರುವ ಘಟನೆ ವರದಿಯಾಗಿದೆ.
‘ಪಾಕಿಸ್ತಾನದ ಕ್ರೀಡಾ ನಿರೂಪಕಿ ಜೈನಾಬ್ ಅಬ್ಬಾಸ್ ಅವರನ್ನು ವಿವಾದಿತ ಪ್ರಕರಣದಲ್ಲಿ ಭಾರತದಿಂದ ಗಡಿಪಾರು ಮಾಡಲಾಗಿದೆ’ ಎಂದು ಸೋಮವಾರ ಮಧ್ಯಾಹ್ನ ಪಾಕಿಸ್ತಾನಿ ಟಿವಿ ನ್ಯೂಸ್ ಚಾನೆಲ್ ‘ಸಮಾ’ ಹೇಳಿಕೊಂಡಿತ್ತು. ಆ ಬಳಿಕ ವಿವಾದಾತ್ಮಕ ಟ್ವೀಟ್‌ಗಳ ಕಾರಣಕ್ಕೆ ಭದ್ರತೆಯ ದೃಷ್ಟಿಯಿಂದ ಭಾರತ ತೊರೆದಿದ್ದಾರೆ ಎಂದು ತಿಳಿಸಿದೆ.
ಪಾಕಿಸ್ತಾನದ ಕ್ರೀಡಾ ನಿರೂಪಕಿ ಜೈನಾಬ್ ಅಬ್ಬಾಸ್, 2023ರ ಕ್ರಿಕೆಟ್ ಏಕದಿನ ವಿಶ್ವಕಪ್ ಟೂರ್ನಿಯ ನಿರೂಪಣೆಗಾಗಿ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು.
Pakistani sports presenter Zainab Abbas has safely exited India over “safety concerns”
She is currently in Dubai; allegations involve #cybercrime and old anti-India tweets #ICCWorldCup2023 #IndiaPakistan #WorldCup2023 pic.twitter.com/DRWKMZs0qS
— SAMAA TV (@SAMAATV) October 9, 2023
10 ವರ್ಷಗಳ ಹಿಂದೆ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ಭಾರತ ಮತ್ತು ಹಿಂದೂ ಧರ್ಮವನ್ನು ಟೀಕಿಸಿ ಮಾಡಿದ್ದ ಟ್ವೀಟ್‌ಗಳೇ ಇದಕ್ಕೆ ಕಾರಣ ಎಂದು ವರದಿಯಾಗಿದೆ.
‘ನಾವು ಅತಿಥಿ ದೇವೋಭವ ಎಂದು ಎಲ್ಲ ಅತಿಥಿಗಳನ್ನು ಸ್ವಾಗತಿಸುತ್ತೇವೆ. ಆದರೆ ಕೆಲವೊಂದು ಅತಿಥಿಗಳು ಅದಕ್ಕೆ ಅರ್ಹರಲ್ಲ. ನಮ್ಮ ದೇಶ ಮತ್ತು ಹಿಂದೂ ಧರ್ಮವನ್ನು ಗೌರವಿಸುವವರಿಗೆ ನಾವೂ ಗೌರವ ನೀಡುತ್ತೇವೆ. ಆದರೆ ನಮ್ಮ ಭೂಮಿಯಲ್ಲಿ ಭಾರತೀಯ ವಿರೋಧಿಗಳಿಗೆ ಸ್ವಾಗತವಿಲ್ಲ. ಪಾಕಿಸ್ತಾನದ ಕ್ರೀಡಾ ನಿರೂಪಕಿ ಜೈನಾಬ್ ಅಬ್ಬಾಸ್ ಅವರು ಈ ಹಿಂದೆ ಭಾರತ ವಿರೋಧಿ ಹಾಗೂ ಹಿಂದೂ ಧರ್ಮದ ವಿರುದ್ಧವಾಗಿ ಟ್ವೀಟ್ ಮಾಡಿ ಅವಮಾನಿಸಿದ್ದಾರೆ. ಹಾಗಾಗಿ, ಅವರಿಗೂ ಸ್ವಾಗತವಿಲ್ಲ. 2023ರ ವಿಶ್ವಕಪ್ ನಿರೂಪಣೆಯಿಂದ ಅವರನ್ನು ತೆಗೆದು ಹಾಕಬೇಕು’ ಎಂದು ಹಳೆಯ ವಿವಾದಾತ್ಮಕ ಟ್ವೀಟ್‌ಗಳನ್ನು ಉಲ್ಲೇಖಿಸಿ ವಿನೀತ್ ಜಿಂದಾಲ್ ಎಂಬ ವಕೀಲ ಬಿಸಿಸಿಐಗೆ ದೂರು ಸಲ್ಲಿಸಿದ್ದರು.
ಆ ಬಳಿಕ ಈ ಕುರಿತಾಗಿ ದೆಹಲಿಯ ಸೈಬರ್ ಕ್ರೈಮ್ ಪೊಲೀಸರಿಗೂ ವಿನೀತ್ ಜಿಂದಾಲ್ ದೂರು ನೀಡಿದ ಹಿನ್ನೆಲೆಯಲ್ಲಿ ಅವರು ಭಾರತ ತೊರೆದಿದ್ದಾರೆ ಎಂದು ತಿಳಿದುಬಂದಿದೆ.
Update on Zainab Abbas Matter:- Complaint letter sent by @vineetJindal19 to @BCCI and @HMOIndia seeking removal of Zainab Abbas @ZAbbasOfficial as the presenter at the ICC World Cup 2023 for her derogatory and provocative posts against Bharat and Hindu Dharma.
“Athiti devo… pic.twitter.com/tiHCCRtYW3— Adv.Vineet Jindal (@vineetJindal19) October 7, 2023
35 ವರ್ಷದ ಕ್ರೀಡಾ ನಿರೂಪಕಿ ಜೈನಾಬ್ ಅಬ್ಬಾಸ್ ಅವರ ವಿರುದ್ಧ ಈ ದೂರು ಬಂದ ಬೆನ್ನಲ್ಲೇ, ಸುರಕ್ಷತೆಯ ದೃಷ್ಟಿಯಿಂದ ಭಾರತ ಬಿಟ್ಟು ತೆರಳುವಂತೆ ಬಿಸಿಸಿಐ ಸೂಚಿಸಿರುವುದಾಗಿ ತಿಳಿದುಬಂದಿದೆ.
ಮೊದಲು ಗಡಿಪಾರು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದ ಪಾಕಿಸ್ತಾನದ ಸಮಾ ಟಿವಿ ಆ ಬಳಿಕ ಮತ್ತೊಂದು ಟ್ವೀಟ್ ಮಾಡಿದ್ದು, ಭದ್ರತೆಯ ದೃಷ್ಟಿಯಿಂದ ಜೈನಬ್ ಭಾರತವನ್ನು ತೊರೆದಿದ್ದಾರೆ. ಪ್ರಸ್ತುತ ಅವರು ದುಬೈನಲ್ಲಿದ್ದಾರೆ’ ಎಂದು ವರದಿ ಮಾಡಿದೆ.
वकील और सामाजिक कार्यकर्ता @vineetJindal19 द्वारा पाकिस्तानी प्रज़ेंटर @ZAbbasOfficial के खिलाफ साइबर सेल दिल्ली पुलिस में शिकायत दर्ज की गई है। हिंदू आस्था और विश्वास के लिए अपमानजनक टिप्पणी करने और भारत विरोधी बयानों के लिए धारा 153A,295,506,121 IPC और धारा 67 IT अधिनियम के तहत… pic.twitter.com/I16raHtJEu
— Adv.Vineet Jindal (@vineetJindal19) October 6, 2023
ವಿಶ್ವಕಪ್‌ಗಾಗಿ ಭಾರತಕ್ಕೆ ಆಗಮಿಸುವ ಮೊದಲು ಟ್ವೀಟ್ ಮಾಡಿದ್ದ ಜೈನಾಬ್ ಅಬ್ಬಾಸ್, ‘ಎರಡೂ ದೇಶಗಳ ವ್ಯತಿರಿಕ್ತ ನಂಬಿಕೆಗಳ ಹೊರತಾಗಿಯೂ ಭಾರತದ ಸಂಸ್ಕೃತಿಯನ್ನು ಅನ್ವೇಷಿಸಲು ಉತ್ಸುಕನಾಗಿದ್ದೇನೆ. ಮುಂದಿನ ಆರು ವಾರಗಳ ಕಾಲ ಅದಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದರು. ಈ ನಡುವೆಯೇ ಈ ರೀತಿಯ ಬೆಳವಣಿಗೆ ನಡೆದಿದೆ.