ಶ್ರೀಲಂಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 110 ರನ್‌ಗಳ ಭಾರಿ ಅಂತರದಲ್ಲಿ ಸೋಲು ಅನುಭವಿಸಿದೆ. ಲಂಕಾ ನೀಡಿದ 249 ರನ್‌ಗಳ ಸವಾಲನ್ನು ಬೆನ್ನಟ್ಟಿದ ಟೀಂ ಇಂಡಿಯಾ 26.1 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಶ್ರೀಲಂಕಾ ತಂಡ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 2-0 ಗೆಲುವು ಸಾಧಿಸಿತು.
ಶ್ರೀಲಂಕಾ ಪರ ದುನಿತ್ ವೆಲ್ಲಗೆ 27/5, ಮಹೀಶ್ ತೀಕ್ಷಣ 45/2 ಹಾಗೂ ಜೆಫ್ರಿ ವಾಂಡರ್ಸೆ 34/2 ಮಾರಕ ಬೌಲಿಂಗ್‌ಗೆ ಟೀಂ ಇಂಡಿಯಾ ಬ್ಯಾಟರ್‌ಗಳು ಬೇಗನೆ ಪೆವಿಲಿಯನ್ ದಾರಿಯಿಡಿದರು. ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಭಾರತದ ಮೊದಲ ಸೋಲಾಗಿದೆ.
ಇದನ್ನು ಓದಿದ್ದೀರಾ? ಇತಿಹಾಸ ಸೃಷ್ಟಿಸಿದ ವಿನೇಶ್ ಫೋಗಟ್; ಒಲಿಂಪಿಕ್ ಕುಸ್ತಿಯಲ್ಲಿ ಫೈನಲ್‌ಗೆ
ರೋಹಿತ್ ಶರ್ಮಾ 35, ವಾಷಿಂಗ್ಟನ್ ಸುಂದರ್ 30, ವಿರಾಟ್ ಕೊಹ್ಲಿ 20 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳ್ಯಾರು ಇಪ್ಪತ್ತರ ಗಡಿ ದಾಟಲಿಲ್ಲ.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಅವಿಷ್ಕಾ ಫರ್ನಾಂಡೊ 96, ಕುಸಾಲ್ ಮೆಂಡಿಸ್ 59 ಹಾಗೂ ಪತುಂ ನಿಸಂಕಾ 45 ರನ್‌ಗಳ ಆಟದಿಂದಾಗಿ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 248 ರನ್ ಕಲೆ ಹಾಕಿತ್ತು. ಭಾರತದ ಪರ ರಿಯಾನ್ ಪರಾಗ್ 3, ಸಿರಾಜ್, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್ ಹಾಗೂ ಕುಲ್‌ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
