ದಕ್ಷಿಣ ಆಫ್ರಿಕಾ ನೀಡಿದ್ದ 429 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ, ಸಮರ್ಥವಾದ ಹೋರಾಟ ನೀಡಿದ ಹೊರತಾಗಿಯೂ 102 ರನ್‌ಗಳಿಂದ ಸೋಲನುಭವಿಸಿದೆ.
ಬೃಹತ್ ಗುರಿಯನ್ನು ಬೆನ್ನಟ್ಟಿದ ಲಂಕನ್ನರು 44.5 ಓವರ್‌ಗಳಲ್ಲಿ 326 ರನ್ ಗಳಿಸಿ ಆಲೌಟಾಗುವುದರೊಂದಿಗೆ 102 ರನ್‌ಗಳಿಂದ ಸೋಲನುಭವಿಸಿದರು. ವಿಶ್ವಕಪ್‌ನ ಇಂದಿನ ಪಂದ್ಯದಲ್ಲಿ ರನ್‌ಗಳ ಸುರಿಮಳೆಯಾಗಿದ್ದು, ಇದಕ್ಕೆ ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣವು ಸಾಕ್ಷಿಯಾಯಿತು.
ಶ್ರೀಲಂಕಾ ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದ ನಿಸ್ಸಾಂಕ ಹಾಗೂ ಕುಸಾಲ್ ಪೆರೇರಾ ಜೋಡಿ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಎರಡನೇ ಇನ್ನಿಂಗ್ಸ್‌ನ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ನಿಸ್ಸಾಂಕ ಕ್ಲೀನ್ ಬೌಲ್ದ್ ಆಗುವ ಮೂಲಕ ಜಾನ್‌ಸೆನ್‌ಗೆ ವಿಕೆಟ್ ಒಪ್ಪಿಸಿದರು.
Dasun Shanaka put up a valiant fight, scoring 68 runs off 62 balls! Unfortunately, he was dismissed by Maharaj. #LankanLions #CWC23 #SLvSA pic.twitter.com/w7emxF6DWL
— Sri Lanka Cricket 🇱🇰 (@OfficialSLC) October 7, 2023
ಆ ಬಳಿಕ ಕ್ರೀಸ್‌ಗೆ ಬಂದ ಕುಸಾಲ್ ಮೆಂಡಿಸ್ ಭರ್ಜರಿ ಸಿಕ್ಸ್, ಬೌಂಡರಿಗಳ ಮೂಲಕ ದಕ್ಷಿಣ ಆಫ್ರಿಕಾ ಬೌಲರ್‌ಗಳ ಬೆವರಿಳಿಸಿದರು. ಕೊನೆಗೆ 42 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 8 ಸಿಕ್ಸ್‌ನ ನೆರವಿನಿಂದ 76 ರನ್ ಗಳಿಸಿ ಔಟಾದರು. ಆ ಬಳಿಕ ಚರಿತ್ ಅಸಲಂಕ 79, ನಾಯಕ ದಾಸುನ್ ಶಾನಕ 68 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಆ ಮೂಲಕ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಹೀನಾಯ ಸೋಲಿನಿಂದ ತಪ್ಪಿಸಿಕೊಂಡರು.
ಕೊನೆಯಲ್ಲಿ ಶ್ರೀಲಂಕಾ 44.5 ಓವರ್‌ಗಳಲ್ಲಿ 326 ರನ್‌ಗಳಿಗೆ ಆಲೌಟಾಯಿತು.
A stellar batting performance helps South Africa to a massive win in their #CWC23 clash against Sri Lanka 💪#SAvSL 📝: https://t.co/4jtdv0GMD8 pic.twitter.com/iwUmFw6Sg9
— ICC (@ICC) October 7, 2023
ದಕ್ಷಿಣ ಆಫ್ರಿಕಾ 428 ರನ್ ಹಾಗೂ ಶ್ರೀಲಂಕಾದ 326 ರನ್ ಒಟ್ಟು 754 ರನ್ ದಾಖಲಾಗಿದ್ದು, ಇದು ವಿಶ್ವಕಪ್‌ನ ಒಂದೇ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ.