ಏಕದಿನ ವಿಶ್ವಕಪ್ 2023 | ಜಯ್ ಶಾ ಪ್ರತಿಷ್ಠೆಯಿಂದ ಪ್ರೇಕ್ಷಕರಿಲ್ಲದ ಕ್ರೀಡಾಂಗಣಗಳು, ಕಳೆಗುಂದಿದ ಕ್ರಿಕೆಟ್

Date:

Advertisements

14ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್‌ 2023 ಟೂರ್ನಿ ಶುರುವಾಗಿ ಒಂದು ವಾರ ಕಳೆದಿದೆ. ಭಾರತೀಯ ಕ್ರೀಡಾಸಕ್ತರು ಅತ್ಯಂತ ಹೆಚ್ಚು ಪ್ರೀತಿ, ಉತ್ಸಾಹ ತೋರುತ್ತಿದ್ದ ವಿಶ್ವಕಪ್ ಟೂರ್ನಿಗೆ ಈ ಬಾರಿ ಜನರ ಆಸಕ್ತಿ ಕಡಿಮೆಯಾಯಿತೆ ಎನ್ನುವುದಕ್ಕೆ ಕಳೆದ ಒಂದು ವಾರ ನಡೆದ ಘಟನೆಗಳು ಸಾಕ್ಷಿಯಾಗಿವೆ.

ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ತಂಡಗಳು  ತಂಡಗಳು ಹಲವು ಲೀಗ್‌ಗಳಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದು ಆಯ್ಕೆಯಾಗಬೇಕಾಗುತ್ತದೆ. ಇದು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ನಡೆಸುವ ನಿರಂತರ ಪ್ರಕ್ರಿಯೆ.

ಈ ಮೊದಲು ಐಸಿಸಿ ಸಾರಥ್ಯದೊಂದಿಗೆ ವಿಶ್ವಕಪ್‌ ಏಕದಿನ ಟೂರ್ನಿಯನ್ನು ಅದ್ದೂರಿಯಾಗಿ ಆಯೋಜನೆ ಮಾಡಲಾಗುತ್ತಿತ್ತು. ಈ ಬಾರಿ ಇತರ ಕ್ರೀಡೆಗಳಿಗಿಂತ ಕ್ರಿಕೆಟನ್ನು ಹೆಚ್ಚಾಗಿ ಆರಾಧಿಸುವ ಭಾರತದಲ್ಲಿ ವಿಶ್ವಕಪ್‌ ಆಯೋಜನೆಗೊಂಡಿದೆ.

Advertisements

ವಿಶ್ವದಲ್ಲಿಯೇ ಬಿಸಿಸಿಐ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದು. ಮುಂಬರುವ ವರ್ಷಗಳಲ್ಲಿ ಒಲಿಂಪಿಕ್ಸ್‌ನಲ್ಲಿಯೂ ಕ್ರಿಕೆಟನ್ನು ಸೇರಿಸಲು ಐಒಸಿ(ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ) ಹೆಚ್ಚು ಒತ್ತಡ ಹಾಕುತ್ತಿರುವುದು ಕೂಡ ಬಿಸಿಸಿಐ. ಮುಂದಿನ ಒಲಿಂಪಿಕ್ಸ್‌ನಲ್ಲಿಯೇ ಕ್ರಿಕೆಟ್‌ ಆಟ ಸೇರ್ಪಡೆಗೊಂಡರೆ ಅಚ್ಚರಿಯಿಲ್ಲ(ಟಿ20 ಮಾತ್ರ). ಬಿಸಿಸಿಐ ಆಯೋಜಿಸುವ ಐಪಿಎಲ್ (ಇಂಡಿಯನ್‌ ಪ್ರೀಮಿಯರ್‌ ಲೀಗ್‌)ನಲ್ಲಿ ಹಣದ ಥೈಲಿ ಹಿಡಿದು ನಾಮುಂದು ತಾಮುಂದು ಎಂದು ವಿಶ್ವದ ದೊಡ್ಡ ದೊಡ್ಡ ಕಂಪನಿಗಳು, ಜಾಹೀರಾತು ಸಂಸ್ಥೆಗಳು ಮುಗಿ ಬೀಳುತ್ತವೆ. ಹಣದ ಹೊಳೆಯೇ ಹರಿಯುತ್ತದೆ.

ಒಂದೆರಡು ದಶಕದ ಹಿಂದೆ ಸಾವಿರ, ಲಕ್ಷ ನೋಡುತ್ತಿದ್ದ ಆಟಗಾರರು ಕೂಡ ಐಪಿಎಲ್‌ ಬಂದ ನಂತರ ಕೋಟಿಗಟ್ಟಲೆ ಹಣ ಮಾಡಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದಿದ್ದರೂ ಪರವಾಗಿಲ್ಲ ಐಪಿಎಲ್‌ನಲ್ಲಿ ಪಾಲ್ಗೊಂಡರೆ ಸಾಕು ಎನ್ನುವ ಮಟ್ಟಕ್ಕೆ ಹಲವು ಕ್ರಿಕೆಟಿಗರು ಬಂದುಬಿಟ್ಟಿದ್ದಾರೆ. ಇದಕ್ಕೆ ಭಾರತದವರ ಜೊತೆ ವಿದೇಶಿ ಆಟಗಾರರು ಹೊರತಾಗಿಲ್ಲ. ಐಪಿಎಲ್‌ನಂಥ ಹಣದ ರಾಶಿ ಬರುವ ಟೂರ್ನಿಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದರಿಂದಲೇ ಎರಡು ಬಾರಿ ಏಕದಿನ ವಿಶ್ವಕಪ್‌ ಗೆದ್ದ ಬಲಿಷ್ಠ ತಂಡ ವೆಸ್ಟ್‌ ಇಂಡೀಸ್ ಈ ಬಾರಿಯ ವಿಶ್ವಕಪ್‌ನಲ್ಲಿ ಅರ್ಹತೆಯನ್ನೇ ಪಡೆಯಲಿಲ್ಲ.

ಈ ಬಾರಿಯ ಏಕದಿನ ವಿಶ್ವಕಪ್ ಕೇವಲ ಭಾರತದ ಜೊತೆ ಆಡುವ ಪಂದ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದ್ದು, ಬೇರೆ ಪಂದ್ಯಗಳಿಗೆ ನಿರ್ಲಕ್ಷ್ಯ ತೋರಲಾಗುತ್ತಿದೆ. ಬಿಸಿಸಿಐ ಬಳಿ ಸಾವಿರಾರು ಕೋಟಿ ದುಡ್ಡಿದ್ದರೂ ಈ ಬಾರಿ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ನಡುವೆ ನಡೆದ ಉದ್ಘಾಟನೆ ಪಂದ್ಯವನ್ನು ಅದ್ದೂರಿಯಾಗಿ ಆಯೋಜಿಸಲಿಲ್ಲ. ನಾಮಕಾವಾಸ್ಥೆಯಂತೆ ಟೀಂ ಇಂಡಿಯಾದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌ ಟ್ರೋಫಿಯನ್ನು ಅನಾವರಣಗೊಳಿಸಿದರು.

ಭಣಗುಡುತ್ತಿರುವ ಕ್ರೀಡಾಂಗಣಗಳು

ಅಕ್ಟೋಬರ್‌ 12ರ ತನಕ ಒಟ್ಟು ಭಾರತದ ಎರಡು ಪಂದ್ಯಗಳು ಸೇರಿದಂತೆ ಒಟ್ಟು 9 ಪಂದ್ಯಗಳು ನಡೆದಿವೆ. ಟೀಂ ಇಂಡಿಯಾದ ಪಂದ್ಯಗಳು ಬಿಟ್ಟರೆ ಉಳಿದ 7 ಪಂದ್ಯಗಳು ಪ್ರೇಕ್ಷಕರಿಲ್ಲದೆ ಭಣಗುಡುತ್ತಿದ್ದವು. 1.32 ಲಕ್ಷ ಸಾಮರ್ಥ್ಯವಿರುವ ವಿಶ್ವದ ಅತೀ ದೊಡ್ಡ ಕ್ರೀಡಾಂಗಣ ಎಂದು ಹೇಳುವ ಗುಜರಾತ್‌ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಉದ್ಘಾಟನಾ ಪಂದ್ಯದಲ್ಲಿ ಪ್ರೇಕ್ಷಕರು ಆರಂಭದಲ್ಲಿ ಸೇರಿದ್ದು 10 ಸಾವಿರ. ಪಂದ್ಯ ಮುಗಿದಾಗ ಇಲ್ಲಿದ್ದ ಪ್ರೇಕ್ಷಕರ ಸಂಖ್ಯೆ 47,518. ಹಾಜರಾಗಿದ್ದ ಬಹುತೇಕರನ್ನು ಕರೆದುಕೊಂಡು ಬಂದಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದವು.

ಪಾಕಿಸ್ತಾನ – ನೆದರ್‌ಲ್ಯಾಂಡ್ಸ್‌ ಆಡಿದ ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಸಾಮರ್ಥ್ಯ 55 ಸಾವಿರ ಇದ್ದರೆ, ಪ್ರೇಕ್ಷಕರು ಸೇರಿದ್ದು ಮಾತ್ರ 9,503. 45 ಸಾವಿರಕ್ಕೂ ಹೆಚ್ಚು ಕುರ್ಚಿಗಳು ಖಾಲಿಯಿದ್ದವು. ಇದೇ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಮತ್ತು ನೆದರ್‌ಲ್ಯಾಂಡ್ಸ್‌ ವಿರುದ್ಧದ ಪಂದ್ಯದಲ್ಲಿ 44,982 ಕುರ್ಚಿಗಳು ಕೂಡ ಖಾಲಿಯಿದ್ದವು. ಶ್ರೀಲಂಕಾ ಪಾಕಿಸ್ತಾನ ನಡುವೆ ನಡೆದ ಮೂರನೇ ಪಂದ್ಯದಲ್ಲಿ 30,889 ಕುರ್ಚಿಗಳು ಖಾಲಿ ಇದ್ದವು. ಹಾಜರಾತಿ ಸಂಖ್ಯೆ 24,111 ಮಾತ್ರವಾಗಿತ್ತು.

ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ ಕ್ರಿಕೆಟ್ ಹಬ್ಬ ಶುರು: ದಿಗ್ಗಜರ ಆಟದ ರಸದೌತಣಕ್ಕೆ ಸಿದ್ಧರಾಗಿ…

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಅಫ್ಘಾನಿಸ್ತಾನ – ಬಾಂಗ್ಲಾದೇಶ ಪಂದ್ಯದಲ್ಲಿ 7,849 ಪ್ರೇಕ್ಷಕರು ಮಾತ್ರ ಹಾಜರಿದ್ದರು. 15,151 ಕುರ್ಚಿಗಳು ಖಾಲಿ ಇದ್ದವು. ಇಂಗ್ಲೆಂಡ್‌ – ಬಾಂಗ್ಲಾದೇಶ ನಡುವೆ ಇಲ್ಲಿಯೇ ನಡೆದ ಇನ್ನೊಂದು ಪಂದ್ಯದಲ್ಲಿ 10,423 ಖಾಲಿ ಕುರ್ಚಿಗಳಿದ್ದವು.

ನವದೆಹಲಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ನಡುವೆ ನಡೆದ ಪಂದ್ಯದಲ್ಲಿ 41,842 ಸಾಮರ್ಥ್ಯಕ್ಕೆ ಪ್ರೇಕ್ಷಕರು ಇದ್ದಿದ್ದು 17,044. ಖಾಲಿ ಕುರ್ಚಿಗಳು 24,798.

ಭಾರತದ ಪಂದ್ಯಗಳು ಇದಕ್ಕೆ ತದ್ವಿರುದ್ಧವಾಗಿವೆ. ಚೆನ್ನೈನಲ್ಲಿ ನಡೆದ ಭಾರತ – ಆಸ್ಟ್ರೇಲಿಯಾ ಪಂದ್ಯದಲ್ಲಿ 37 ಸಾವಿರ ಸಾಮರ್ಥ್ಯದ ಕ್ರೀಡಾಂಗಣದಲ್ಲಿ 3,810 ಕುರ್ಚಿಗಳು ಖಾಲಿಯಿದ್ದವು. ನವದೆಹಲಿಯಲ್ಲಿ ಭಾರತ ಆಡಿದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 2,700 ಕುರ್ಚಿ ಖಾಲಿಯಿದ್ದವು. 37,500 ಪ್ರೇಕ್ಷಕರು ಹಾಜರಾಗಿದ್ದರು.

ಇವೆಲ್ಲವನ್ನು ಗಮನಿಸಿದರೆ ಬಿಸಿಸಿಐ ಭಾರತದ ಪಂದ್ಯಗಳಿಗೆ ಮಾತ್ರ ಆಸಕ್ತಿ ತೋರುವಂತೆ ಕಾಣುತ್ತಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಹಂಚಿಕೆ ಶುರು ಮಾಡಿದಾಗ ಕೆಲವೇ ನಿಮಿಷಗಳಲ್ಲಿ ಟಿಕೆಟ್ ಮಾರಾಟವಾಗಿ ಬಿಟ್ಟಿದ್ದವು. ಅಕ್ಟೋಬರ್‌ 14ರಂದು ಭಾರತ – ಪಾಕಿಸ್ತಾನ ಪಂದ್ಯದ 1.32 ಲಕ್ಷ ಟಿಕೆಟ್‌ಗಳು 15 ನಿಮಿಷದಲ್ಲಿ ಮಾರಾಟವಾಗಿಬಿಟ್ಟಿತ್ತು.

ಆದರೆ ಈಗ ನೋಡಿದರೆ ಕ್ರೀಡಾಂಗಣಗಳು ಭಣಗುಡುತ್ತಿವೆ. ಬಿಸಿಸಿಐನ ಚುಕ್ಕಾಣಿ ಹಿಡಿದಿರುವ ಅಲ್ಲಿನ ಕಾರ್ಯದರ್ಶಿ ಜಯ್‌ ಶಾ ಎಲ್ಲ ಅವ್ಯವಸ್ಥೆಗೂ ಪ್ರಮುಖ ಕಾರಣರಾಗಿದ್ದಾರೆ ಎನ್ನುವುದು ಹೆಸರೇಳಲು ಇಚ್ಛಿಸದ ಹಲವು ಹಿರಿಯ ಆಟಗಾರರ ಅಭಿಪ್ರಾಯವಾಗಿದೆ. ಬಿಸಿಸಿಐ ಅಧ್ಯಕ್ಷ ಕರ್ನಾಟಕ ಮೂಲದ ರೋಜರ್‌ ಬಿನ್ನಿ ನೆಪಮಾತ್ರಕ್ಕೆ ಪದವಿಯಲ್ಲಿದ್ದಾರೆ. ಎಲ್ಲ ಆಡಳಿತ, ಅಧಿಕಾರ ಜಯ್‌ ಶಾ ಪಾರುಪತ್ಯದಲ್ಲಿ ನಡೆಯುತ್ತಿದೆ. ಇನ್ನು ನ.19ರವರೆಗೂ, ಒಂದು ತಿಂಗಳ ಕಾಲ ವಿಶ್ವಕಪ್‌ ನಡೆಯಬೇಕಿದೆ. ಮುಂದಿನ ಪಂದ್ಯಗಳ ವ್ಯವಸ್ಥೆಗಳು ಏನಾಗಲಿದೆ ಕಾದುನೋಡಬೇಕಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X