ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 39ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ ಬೃಹತ್ ಮೊತ್ತವನ್ನು ತಲುಪುವಲ್ಲಿ ಯಶಸ್ವಿಯಾದ ಕನ್ನಡಿಗ ಕೆ ಎಲ್ ರಾಹುಲ್ ನೇತೃತ್ವದ ಲಕ್ನೋ ತಂಡ, ಕೊನೆಯ ಓವರ್‌ನಲ್ಲಿ ರೋಚಕವಾಗಿ ಗೆದ್ದಿದೆ.
Have a look at those emotions 🥳
The Lucknow Super Giants make it 2/2 this season against #CSK 👏👏
Scorecard ▶️ https://t.co/MWcsF5FGoc#TATAIPL | #CSKvLSG | @LucknowIPL pic.twitter.com/khDHwXXJoF
— IndianPremierLeague (@IPL) April 23, 2024
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಯಕ ರುತುರಾಜ್ ಗಾಯಕ್ವಾಡ್ ಅವರ ಭರ್ಜರಿ ಶತಕ ಮತ್ತು ಶಿವಂ ದುಬೆ ಅವರ ಸ್ಫೋಟಕ ಅರ್ಧಶತಕ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿ, ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 211 ರನ್‌ಗಳ ಸವಾಲಿನ ಗುರಿ ನೀಡಿತ್ತು.
The highest successful chase at Chepauk!
Fortress breached by LSG! 💥#CSKvLSG #IPL2024 pic.twitter.com/KlsWklauSQ
— ESPNcricinfo (@ESPNcricinfo) April 23, 2024
ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಫೋಟಕ ಬ್ಯಾಟರ್ ಮಾರ್ಕಸ್ ಸ್ಟೋಯ್ನಿಸ್ ಅವರ ಚೊಚ್ಚಲ ಐಪಿಎಲ್ ಶತಕದ ನೆರವಿನಿಂದ 19.3 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಕಳೆದುಕೊಂಡು, 213 ರನ್ ದಾಖಲಿಸಿತು.
ಟಿ20 ಇನ್ನಿಂಗ್ಸ್‌ನ ಎರಡನೇ ಹಾಗೂ ಐಪಿಎಲ್‌ನಲ್ಲಿ ಮೊದಲ ಶತಕ ಬಾರಿಸಿದ ಆಸೀಸ್‌ನ ಸ್ಫೋಟಕ ಬ್ಯಾಟರ್ ಸ್ಟೋಯ್ನಿಸ್, ಕೊನೆಯ ಓವರ್‌ನಲ್ಲಿ ಲಕ್ನೋಗೆ ಗೆಲ್ಲಲು 17 ರನ್‌ಗಳ ಅವಶ್ಯಕತೆ ಇತ್ತು. ಮುಸ್ತಫಿಝ್ ರಹ್ಮಾನ್ ಎಸೆದ ಮೊದಲ ಬಾಲ್ ಅನ್ನು ಸಿಕ್ಸರ್‌ಗೆ ಹಾಗೂ ಆ ಬಳಿಕ ಮೂರು ಎಸೆತಗಳಲ್ಲಿ ಭರ್ಜರಿ ಮೂರು ಬೌಂಡರಿಗಳನ್ನು ಬಾರಿಸುವ ಮೂಲಕ ಲಕ್ನೋಗೆ ರೋಚಕ ಜಯ ತಂದುಕೊಟ್ಟರು. ಇದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಅತ್ಯಂತ ಯಶಸ್ವಿ ಚೇಸ್ ಆಗಿದೆ.
MARCUS STOINIS…. YOU FREAKING MONSTER…!!! 🤯
LSG needed 17 in 6 balls – 6,4,4,4 to finish it for LSG. 124* (63) in the run chase, what a knock. 👏💥 pic.twitter.com/acucw63RQZ
— Mufaddal Vohra (@mufaddal_vohra) April 23, 2024
63 ಎಸೆತಗಳನ್ನು ಎದುರಿಸಿದ್ದ ಮಾರ್ಕಸ್ ಸ್ಟೋಯ್ನಿಸ್, 13 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸ್‌ನ ನೆರವಿನಿಂದ 124 ರನ್ ಗಳಿಸುವ ಮೂಲಕ, ಔಟಾಗದೆ ಉಳಿದರು. ಇವರಿಗೆ ಸಾಥ್ ನೀಡಿದ ನಿಕೋಲಸ್ ಪೂರನ್ ಕೇವಲ 15 ಬಾಲ್ನಲ್ಲಿ 2 ಸಿಕ್ಸರ್, 3 ಫೋರ್ ಸಮೇತ 34 ರನ್ ಬಾರಿಸಿದರು. ಆ ಬಳಿಕ ಪತಿರಾನ್ನಗೆ ವಿಕೆಟ್ ಒಪ್ಪಿಸಿದರು.
ಕೊನೆಯಲ್ಲಿ ದೀಪಕ್ ಹೂಡ 6 ಎಸೆತಗಳಲ್ಲಿ 17 ರನ್ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ತಮ್ಮದೇ ಆದ ಕೊಡುಗೆ ನೀಡಿದರು. ಲಕ್ನೋ ತಂಡ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಶೂನ್ಯಕ್ಕೆ ಔಟಾದರೆ, ನಾಯಕ ಕೆ ಎಲ್ ರಾಹುಲ್ 16 ಹಾಗೂ ತಂಡದ ಇನ್ನೋರ್ವ ಕನ್ನಡಿಗ ದೇವದತ್ತ್ ಪಡಿಕ್ಕಲ್ ಕೇವಲ 13 ರನ್ ಗಳಿಸಲಷ್ಟೇ ಶಕ್ತವಾದರು.
ಚೆನ್ನೈ ತಂಡದ ಪರ ಬೌಲಿಂಗ್‌ನಲ್ಲಿ ಮಹೇಶ್ ಪತಿರಾನ್ನ 2 ವಿಕೆಟ್ ಪಡೆದರೆ, ಮುಸ್ತಫಿಝ್ ರಹ್ಮಾನ್ ಹಾಗೂ ದೀಪಕ್ ಚಾಹರ್ ತಲಾ ಒಂದೊಂದು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದರು.
That match-winning ROAR 🔥🔥
Highest successful IPL run-chase of all time in Chennai 🙌
Scorecard ▶️ https://t.co/MWcsF5FGoc#TATAIPL | #CSKvLSG pic.twitter.com/YS1Xvv3iW1
— IndianPremierLeague (@IPL) April 23, 2024
