ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಇಂದು ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 18ನೇ ಪಂದ್ಯದಲ್ಲಿ ಅತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡವು, ಪ್ರವಾಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಭರ್ಜರಿ ಆರು ವಿಕೆಟ್‌ಗಳಿಂದ ಸೋಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶಿವಂ ದುಬೆ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್‌ಗಳನ್ನು ಕಲೆಹಾಕಿ, ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 166 ರನ್‌ಗಳ ಗುರಿ ನೀಡಿತ್ತು.
Nitish Reddy seals the win for @SunRisers with a MAXIMUM 💥#SRH 🧡 chase down the target with 11 balls to spare and get back to winning ways 🙌
Scorecard ▶️ https://t.co/O4Q3bQNgUP#TATAIPL | #SRHvCSK pic.twitter.com/lz3ffN5Bch
— IndianPremierLeague (@IPL) April 5, 2024
ಈ ಗುರಿಯನ್ನು ಬೆನ್ನತ್ತಿದ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಹೈದರಾಬಾದ್ ತಂಡವು 18.1 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಹೈದರಾಬಾದ್‌ನ ಯುವ ಬ್ಯಾಟರ್ ಅಭಿಷೇಕ್ ಶರ್ಮಾ, 12 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ 37 ರನ್ ಗಳಿಸಿ, ಚಾಹರ್‌ಗೆ ವಿಕೆಟ್ ಒಪ್ಪಿಸಿದರು. ಔಟಾಗುವುದಕ್ಕೂ ಮುನ್ನ ಮುಖೇಶ್ ಚೌಧರಿ ಎಸೆದ ಎರಡನೇ ಓವರ್‌ನಲ್ಲಿ ಮೂರು ಸಿಕ್ಸ್, ಎರಡು ಬೌಂಡರಿ ಇರುವ 27 ರನ್ ಬಾರಿಸಿದರು.
The 𝐀𝐛𝐡𝐢-𝐬𝐡𝐨𝐰 that set the stadium on fire in the 2️⃣nd over 😱🔥#PlayWithFire #SRHvCSK pic.twitter.com/ttralQ3aSZ
— SunRisers Hyderabad (@SunRisers) April 5, 2024
ಆ ಬಳಿಕ ಟ್ರಾವಿಸ್ ಹೆಡ್, ಚೆನ್ನೈ ಸ್ಪಿನ್ನರ್ ಮಹೇಶ್ ತೀಕ್ಷಣ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ, ವಿಕೆಟ್ ಒಪ್ಪಿಸಿದರು. ಉತ್ತಮವಾಗಿ ಆಡುತ್ತಿದ್ದ ಹೆಡ್, 24 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿ ಔಟಾದರು. ನಂತರ ಮಾರ್ಕರಮ್ ಹಾಗೂ ಶಹಬಾಝ್ ಜೋಡಿಯು ಉತ್ತಮ ಜೊತೆಯಾಟ ನಡೆಸಿದರು.
ಮಾರ್ಕರಮ್ 36 ಎಸೆತಗಳಲ್ಲಿ 50 ರನ್ ಗಳಿಸಿ ಮೊಯಿನ್ ಅಲಿ ಎಸೆತದಲ್ಲಿ ಎಲ್ ಬಿಡಬ್ಲ್ಯುಔಟ್ ಬಲೆಗೆ ಬಿದ್ದರು. ಶಹಬಾಝ್ 19 ಎಸೆತಗಳಲ್ಲಿ 18 ರನ್ ಗಳಿಸಿ, ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಕ್ಲಾಸೆನ್ 10 ರನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ 14 ರನ್ ಗಳಿಸಿ, ಔಟಾಗದೆ ಉಳಿದರು. ಹೈದರಾಬಾದ್ ತಂಡವು 18.1 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
Turning up when needed!🌪️#SRHvCSK #WhistlePodu pic.twitter.com/cmFWFlxtnG
— Chennai Super Kings (@ChennaiIPL) April 5, 2024
ಬೌಲಿಂಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಮೊಯೀನ್ ಅಲಿ 2, ಮಹೇಶ್ ತೀಕ್ಷಣ ಹಾಗೂ ದೀಪಕ್ ಚಾಹರ್ ತಲಾ ಒಂದೊಂದು ವಿಕೆಟ್ ಪಡೆದರು.
