ಇಂದು (ಜೂನ್ 24) ಸೇಂಟ್ ಲೂಸಿಯಾದ ಡೇರೆನ್ ಸಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20 ವಿಶ್ವಕಪ್ 2024ರ ಸೂಪರ್ 8ರ ಘಟ್ಟದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರ ಭರ್ಜರಿ ಅರ್ಧಶತಕದ ನೆರವಿನಿಂದ 206 ರನ್ಗಳ ಬೃಹತ್ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ 92 ರನ್ಗಳ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಈ ಮೊತ್ತವು ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ದಾಖಲಿಸಿದ ಬೃಹತ್ ಮೊತ್ತವಾಗಿದೆ.
Innings Break!
Captain Rohit Sharma led from the front as #TeamIndia post a total of 205/5 🙌
Over to our bowlers now! 👍
Scorecard ▶️ https://t.co/L78hMho6Te#T20WorldCup | #AUSvIND pic.twitter.com/djk7WWCvI6
— BCCI (@BCCI) June 24, 2024
41 ಎಸೆತಗಳನ್ನು ಎದುರಿಸಿದ ನಾಯಕ ರೋಹಿತ್ ಶರ್ಮಾ ಅವರು, ಭರ್ಜರಿ 8 ಸಿಕ್ಸರ್ ಹಾಗೂ 7 ಬೌಂಡರಿಯ ನೆರವಿನಿಂದ 92 ರನ್ ಗಳಿಸಿದ್ದಾಗ, ಮಿಚೆಲ್ ಸ್ಟಾರ್ಕ್ ಓವರ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಆ ಮೂಲಕ 8 ರನ್ಗಳಿಂದ ಶತಕ ವಂಚಿತರಾದರು.
ನಾಯಕನ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಮತ್ತೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಕೊಹ್ಲಿಯವರ ಬ್ಯಾಟ್ನಿಂದ ರನ್ಗಳೇ ಹರಿದು ಬರುತ್ತಿಲ್ಲ.
The most sixes hit in a match by India at the men’s T20 World Cup 🔥 #INDvAUS | #T20WorldCup pic.twitter.com/2tTF6eFw1B
— ESPNcricinfo (@ESPNcricinfo) June 24, 2024
ರೋಹಿತ್ ಶರ್ಮಾ ಬಿಟ್ಟರೆ ಉಳಿದಂತೆ ಸೂರ್ಯ ಕುಮಾರ್ ಯಾದವ್ 31 ರನ್ (16 ಎಸೆತ), ಶಿವಂ ದುಬೆ 28 ರನ್ (22 ಎಸೆತ), ಕೊನೆಯಲ್ಲಿ ಹಾರ್ದಿಕ್ ಪಾಂಡ್ಯಾ 17 ಎಸೆತಗಳಲ್ಲಿ 27 ರನ್ ಗಳಿಸಿ ತಮ್ಮಿಂದಾದ ಕೊಡುಗೆ ನೀಡಿದರೆ, ರಿಷಭ್ ಪಂತ್ 15 ರನ್ ಗಳಿಸಿದರು.
ಇದನ್ನು ಓದಿದ್ದೀರಾ? ಟಿ20 ಕ್ರಿಕೆಟ್ : 200 ಸಿಕ್ಸರ್ಗಳ ಸರದಾರನಾಗಿ ದಾಖಲೆ ಬರೆದ ‘ಹಿಟ್ಮ್ಯಾನ್’ ರೋಹಿತ್ ಶರ್ಮಾ
ಬೌಲಿಂಗ್ನಲ್ಲಿ ಆಸೀಸ್ ಪರ ಮಿಚೆಲ್ ಸ್ಟಾರ್ಕ್ ಹಾಗೂ ಸ್ಟೋಯ್ನಿಸ್ 2 ವಿಕೆಟ್ ಗಳಿಸಿದರಾದರೂ, ಭರ್ಜರಿ ರನ್ ನೀಡಿ ದುಬಾರಿಯಾದರು. ಸ್ಟಾರ್ಕ್ ಅವರು 45 ರನ್ ನೀಡಿದರೆ, ಸ್ಟೋಯ್ನಿಸ್ 56 ರನ್ ನೀಡಿದರು.
ಉಳಿದ ಬೌಲರ್ಗಳು ರನ್ ನೀಡಿದರೂ ಕೂಡ ಉತ್ತಮ ಬೌಲಿಂಗ್ ನಡೆಸಿದ ಜೋಶ್ ಹ್ಯಾಝಲ್ವುಡ್ ತನ್ನ ಪಾಲಿನ 4 ಓವರ್ ಎಸೆದು ಕೇವಲ 14 ರನ್ ನೀಡಿ, 1 ವಿಕೆಟ್ ಗಳಿಸುವಲ್ಲಿ ಸಫಲರಾದರು. ಆ್ಯಡಮ್ ಝಾಂಪ 40 ಹಾಗೂ ಪ್ಯಾಟ್ ಕಮ್ಮಿನ್ಸ್ 48 ರನ್ ಚಚ್ಚಿಸಿಕೊಂಡರು.
