ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಐಪಿಎಲ್ ಮೇ 17ರಿಂದ ಪುನರಾರಂಭಗೊಳ್ಳಲಿದೆ ಎಂದು ಬಿಸಿಸಿಐ ಸೋಮವಾರ ತಿಳಿಸಿದೆ. ಬದಲಾದ ವೇಳಾಪಟ್ಟಿಯನ್ನು ಇದೇ ವೇಳೆ ಪ್ರಕಟಿಸಿದೆ.
ಉಳಿದ ಪಂದ್ಯಗಳು ಆರು ಕಡೆಗಳಲ್ಲಿ ನಡೆಯಲಿದೆ.ಫೈನಲ್ ಜೂನ್ 3 ಕ್ಕೆ ನಡೆಯಲಿದೆ. ಜೊತೆಗೆ, ಕ್ವಾಲಿಫೈಯ್ಯರ್ ಪಂದ್ಯ ಹಾಗೂ ಫೈನಲ್ ಪಂದ್ಯ ನಡೆಯುವ ಸ್ಥಳಗಳನ್ನು ಬಳಿಕ ಪ್ರಕಟಿಸಲು ಬಿಸಿಸಿಐ ತೀರ್ಮಾನಿಸಿದೆ.
ಆರ್ಸಿಬಿ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಮೇ 17ರಂದು ಪಂದ್ಯ ನಡೆಯಲಿದೆ.
