ರಣಜಿ ಮೂಲಕ ಅನುಭವ ಪಡೆದುಕೊಳ್ಳಲಿ ಎಂದು ಟೀಂ ಇಂಡಿಯಾ ಸ್ಟಾರ್ ಆಟಗಾರರನ್ನು ದೇಶೀಯ ಕ್ರಿಕೆಟ್‌ನಲ್ಲಿ ಆಡಿಸಲಾಗುತ್ತಿದೆ. ಆದರೆ ಇಂದಿನಿಂದ ಶುರುವಾದ ರಣಜಿ ಪಂದ್ಯದಲ್ಲಿ ಆಡಿದ ಬಹುತೇಕರು ವೈಫಲ್ಯ ಕಂಡಿದ್ದಾರೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಬರೋಬ್ಬರಿ 9 ವರ್ಷಗಳ ಬಳಿಕ ರಣಜಿ ಕ್ರಿಕೆಟ್‌ಗೆ ಮರಳಿದ್ದಾರೆ. ಜಮ್ಮು ಕಾಶ್ಮೀರ ವಿರುದ್ದದ ರಣಜಿ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡುತ್ತಿದ್ದಾರೆ. ಅಲ್ಲದೆ ಟೀಂ ಇಂಡಿಯಾ ಓಪನರ್ ಯಶಸ್ವಿ ಜೈಸ್ವಾಲ್ ಕೂಡಾ ಇದೇ ಪಂದ್ಯದಲ್ಲಿ ರಣಜಿಗೆ ಮರಳಿದ್ದಾರೆ. ಆದರೆ ಇಬ್ಬರೂ ಕೂಡಾ ವೈಫಲ್ಯ ಅನುಭವಿಸಿದರು.
ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ಪಂದ್ಯದಲ್ಲಿ ರೋಹಿತ್ ಕೇವಲ ಮೂರು ರನ್‌ಗೆ ಔಟಾದರು. ಜಮ್ಮು ಕಾಶ್ಮೀರ ಬೌಲರ್ ಉಮರ್ ನಜೀರ್ ಮಿರ್ ಎಸೆತದಲ್ಲಿ ಪರಾಸ್ ಡೋಗ್ರಾಗೆ ಕ್ಯಾಚ್ ನೀಡುವ ಮೂಲಕ ಔಟಾದರು.
ಒಂಬತ್ತು ವರ್ಷಗಳ ಭಾರತದ ಪ್ರಮುಖ ದೇಶೀಯ ಪ್ರಥಮ ದರ್ಜೆ ಸ್ಪರ್ಧೆಗೆ ಮರಳಿದ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.ನಾಲ್ಕು ರನ್ ಗಳಿಸಿದ್ದ ಜೈಸ್ವಾಲ್ ಎಲ್‌ಬಿಗೆ ಪೆವಿಲಿಯನ್‌ಗೆ ತೆರಳಿದರು.
ಈ ಸುದ್ದಿ ಓದಿದ್ದೀರಾ? ಕ್ರಿಕೆಟ್ | ಬಿಸಿಸಿಐನ ಕೆಟ್ಟ ರಾಜಕಾರಣದಿಂದ ಮರೆಯಾದ ಮಿಂಚಿನ ಆಟಗಾರರು
ಸ್ಟಾರ್ ಆಟಗಾರರಾದ ಶ್ರೇ ಯಸ್ ಅಯ್ಯರ್, ಅಜಿಂಕ್ಯ ರಹಾನೆ ಮತ್ತು ಶುಭಂ ದುಬೆ ಕೂಡಾ ವೈಫಲ್ಯ ಅನುಭವಿಸಿದರು. ಮತ್ತೊಂದೆಡೆ ಪಂಜಾಬ್ ತಂಡದ ನಾಯಕತ್ವ ವಹಿಸಿರುವ ಶುಭಮನ್ ಗಿಲ್ ಕೂಡಾ ನಿರಾಸೆ ಅನುಭವಿಸಿದರು.
ಕರ್ನಾಟಕ ವಿರುದ್ದದ ಪಂದ್ಯದಲ್ಲಿ ಗಿಲ್ ನಾಲ್ಕು ರನ್ ಗೆ ಔಟಾದರು. 26 ಓವರ್ ಅಂತ್ಯಕ್ಕೆ ಪಂಜಾಬ್ 47 ರನ್ ಗೆ ಏಳು ವಿಕೆಟ್ ಕಳೆದುಕೊಂಡಿದೆ.
ಡೆಲ್ಲಿ ತಂಡದ ಪರ ಕಣಕ್ಕಿಳಿದ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ತಮ್ಮ ಪುನರಾಗಮನವನ್ನು ಬಳಸಿಕೊಳ್ಳಲು ವಿಫಲರಾಗಿದ್ದಾರೆ. ಸೌರಾಷ್ಟ್ರ ವಿರುದ್ದದ ಪಂದ್ಯದಲ್ಲಿ ಪಂತ್ ಹತ್ತು ಎಸೆದ ಎದುರಿಸಿ ಕೇವಲ ಒಂದು ರನ್‌ಗೆ ಔಟಾದರು.
