ಎರಡನೇ ಬಾರಿ ಟಿ20 ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ದ್ವೀಪ ರಾಷ್ಟ್ರದಿಂದ ಇಂದು ಬೆಳಿಗ್ಗೆ 6.20ಕ್ಕೆ ಭಾರತಕ್ಕೆ ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲೇ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ದೊರೆತಿದೆ.
ಜೂ.29ರಂದು ಬಾರ್ಬೊಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಮಣಿಸಿ ಚಾಂಪಿಯನ್ ಆಗಿತ್ತು. ದ್ವೀಪ ರಾಷ್ಟ್ರದಲ್ಲಿ ಬೇರಿಲ್ ಚಂಡ ಮಾರುತದಿಂದಾಗಿ ತವರಿಗೆ ಮರಳದೆ 4 ದಿನ ವೆಸ್ಟ್ ಇಂಡೀಸ್‌ನಲ್ಲೆ ಉಳಿದುಕೊಳ್ಳಬೇಕಾಗಿತ್ತು. ಇಂದು ಏರ್ ಇಂಡಿಯಾ ಚಾರ್ಟರ್ಡ್ ವಿಮಾನದಲ್ಲಿ 18 ಗಂಟೆಗಳ ಪ್ರಯಾಣದ ನಂತರ ಆಟಗಾರರು ನವದೆಹಲಿಗೆ ಮರಳಿದರು.
ತಮ್ಮ ನೆಚ್ಚಿನ ವಿಶ್ವ ಚಾಂಪಿಯನ್ ತಂಡದ ಆಟಗಾರರನ್ನು ನೋಡಲು ಅಭಿಮಾನಿಗಳು ರಾತ್ರಿಯಿಂದಲೇ ಕಾತರದಿಂದ ಕಾಯುತ್ತಿದ್ದರು. ವಿಮಾನ ನಿಲ್ದಾಣ ಸಿಬ್ಬಂದಿ ಕೂಡ ತಂಡದ ಆಟಗಾರರಿಗೆ ವಿಶೇಷ ಸ್ವಾಗತ ಸಮಾರಂಭವನ್ನು ಏರ್ಪಡಿಸಿದ್ದರು. ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾ ತಂಡ ಕೇಕ್ ಕತ್ತರಿಸಿ ಸಂಭ್ರಮಿಸಿತು.
ಈ ನಡುವೆ ತಮಟೆ ಬಾರಿಸುತ್ತಾ ಹಾಗೂ ಬಾಂಗ್ರಾ ನೃತ್ಯ ಪ್ರದರ್ಶಿಸಿ ಸ್ವಾಗತ ಕೋರುತ್ತಿದ್ದವರೊಂದಿಗೆ ನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಹೆಜ್ಜೆ ಹಾಕಿದ್ದಾರೆ. ರೋಹಿತ್, ವಿಶೇಷ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ರಿಷಭ್ ಪಂತ್ ಟ್ರೋಫಿ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ.
ತಮಟೆ ಸದ್ದಿಗೆ ಭಾರತೀಯ ಕ್ರಿಕೆಟಿಗರು ಸಖತ್ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೆಲ್ಲದ್ದಕ್ಕೂ ಮುನ್ನ ವಿಮಾನದಲ್ಲೇ ಭಾರತ ಆಟಗಾರರು ಭರ್ಜರಿಯಾಗಿ ಸಂಭ್ರಮಿಸಿದ್ದಾರೆ. ಟ್ರೋಫಿ ಹಿಡಿದು ಫೋಸ್ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ಕಪ್ ಹಿಡಿದು ಭಾವುಕರಾಗಿದ್ದಾರೆ. ಪಂತ್ ಕುಣಿದಿದ್ದಾರೆ. ಇದರ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.
ಟೀಂ ಇಂಡಿಯಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಬೆಳಿಗ್ಗೆ 9.30ಕ್ಕೆ ಉಪಾಹಾರವನ್ನು ಏರ್ಪಡಿಸಿದ್ದರು. ಪ್ರಧಾನಿ ಭೇಟಿಯ ನಂತರ ಭಾರತ ತಂಡದ ಆಟಗಾರರು ಮುಂಬೈಗೆ ತೆರಳಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಒಂದು ಅವಲೋಕನ | ದಕ್ಷಿಣ ಆಫ್ರಿಕಾ ಕ್ರಿಕೆಟ್ ನೆಪದಲ್ಲಿ ಕರಾಳ ಇತಿಹಾಸ ಮತ್ತು ಮಂಡೇಲಾ ಉದಾತ್ತತೆ
ಸಂಜೆ 5 ಗಂಟೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು ನಂತರ ತೆರದ ವಾಹನದಲ್ಲಿ ಒಂದು ಕಿಮೀ ಮೆರವಣಿಗೆ ಮೂಲಕ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣಕ್ಕೆ ತಲುಪಲಿದ್ದಾರೆ. ಮೆರವಣಿಗೆ ಸಂದರ್ಭದಲ್ಲಿ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಪಾಲ್ಗೊಂಡು ಟೀಂ ಇಂಡಿಯಾ ಜೊತೆ ಸಂಭ್ರಮಿಸಲಿದ್ದಾರೆ. ಅನಂತರದಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶ್ವಕಪ್ ಟ್ರೋಫಿಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಹಸ್ತಾಂತರಿಸಲಿದ್ದಾರೆ. ಸಮಾರಂಭ ಪೂರ್ಣಗೊಂಡ ನಂತರ ಆಟಗಾರರು ತಮ್ಮ ತಮ್ಮ ನಿವಾಸಗಳಿಗೆ ತೆರಳಲಿದ್ದಾರೆ.
ಜೂ.29ರಂದು ಬಾರ್ಬೊಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಎರಡನೇ ಬಾರಿ ಟಿ20 ಚಾಂಪಿಯನ್ ಪಟ್ಟಕೇರಿ 17 ವರ್ಷಗಳ ನಂತರ ಟ್ರೋಫಿಯ ಬರವನ್ನು ನೀಗಿಸಿಕೊಂಡಿತ್ತು. ಭಾರತ ನೀಡಿದ 176 ರನ್‌ಗಳ ಸವಾಲನ್ನು ಬೆನ್ನಟ್ಟಿದ ಹರಿಣಗಳ ತಂಡ 169 ರನ್‌ಗಳನಷ್ಟೆ ಗಳಿಸಲು ಶಕ್ತವಾಗಿತ್ತು.
2011ರ ಏಕದಿನ ವಿಶ್ವಕಪ್ ಗೆದ್ದ ನಂತರ ಭಾರತ ಯಾವುದೇ ಐಸಿಸಿ ಟ್ರೋಫಿಯನ್ನು ಜಯಿಸಿರಲಿಲ್ಲ. ಟಿ20 ವಿಶ್ವಕಪ್ ಟ್ರೋಫಿ ಜಯಿಸಿದ ನಂತರ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಅವಧಿ ಕೂಡ ಅಂತ್ಯವಾಗಲಿದೆ.
Jubilation in the air 🥳
The #T20WorldCup Champions have arrived in New Delhi! 🛬
Presenting raw emotions of Captain @ImRo45 -led #TeamIndia's arrival filled with celebrations 👏👏 pic.twitter.com/EYrpJehjzj
— BCCI (@BCCI) July 4, 2024
Travelling with the prestigious 🏆 on the way back home! 😍
🎥 WATCH: #TeamIndia were in excellent company during their memorable travel day ✈️👌 – By @RajalArora #T20WorldCup pic.twitter.com/0ivb9m9Zp1
— BCCI (@BCCI) July 4, 2024
