ನನ್ನ ತಂಟೆಗೆ ಬರದಂತೆ ಹೇಳಿ; ಕೋಚ್‌ಗೆ ಎಚ್ಚರಿಕೆ ನೀಡಿದ್ದ ಸೆಹ್ವಾಗ್‌

Date:

Advertisements

‘ಚೆಂಡು ಇರುವುದೇ ದಂಡಿಸಲಿಕ್ಕೆ’ ಎಂಬಂತೆ ನಿರ್ದಯವಾಗಿ ಬ್ಯಾಟಿಂಗ್ ಮಾಡುತ್ತಾ ಸಾಕಷ್ಟು ಬೌಲರ್‌ಗಳ ನಿದ್ದೆಗೆಡಿಸಿದ್ದ ಭಾರತೀಯ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್, ಬಿರುಸಿನ ಬ್ಯಾಟಿಂಗ್ ಕಾರಣಕ್ಕೆ ‘ಡ್ಯಾಶಿಂಗ್ ಓಪನರ್’ ಎಂದೇ ಖ್ಯಾತರಾಗಿದ್ದರು. 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅವರು, ಇತ್ತೀಚೆಗೆ ‘Life Savers Show with Neha Bedi’ ಯೂಟ್ಯೂಬ್ ಸಂದರ್ಶನದಲ್ಲಿ ಪಾಲ್ಗೊಂಡು, ಆಗಿನ ಕೋಚ್ ಗ್ರೇಗ್ ಚಾಪೆಲ್ ಅವರೊಂದಿಗೆ ನಡೆದ ತೀವ್ರ ಜಟಾಪಟಿಯ ಬಗ್ಗೆ ಮಾತನಾಡಿದ್ದಾರೆ.

ರನ್ ಗಳಿಸಲು ವಿಫಲವಾಗುತ್ತಿದ್ದ ಸಂದರ್ಭದಲ್ಲಿ ಚಾಪೆಲ್ ನೀಡಿದ್ದ ಎಚ್ಚರಿಕೆಯನ್ನು ನೆನಪಿಸಿಕೊಂಡ ಅವರು, ಆ ಸಮಯದಲ್ಲಿ ನಡೆದ ಘಟನೆಗಳನ್ನು ಬಹಿರಂಗಪಡಿಸಿದ್ದಾರೆ.

ಸೆಹ್ವಾಗ್ ಹೇಳುವಂತೆ, ಗ್ರೇಗ್ ಚಾಪೆಲ್ ಅವರ ಮಾತುಗಳು ನೋವುಂಟುಮಾಡಿದ್ದವು. ರನ್ ಗಳಿಸಲು ಕಷ್ಟಪಡುತ್ತಿದ್ದಾಗ ಅವರು ನನ್ನ ಫುಟ್‌ವರ್ಕ್ (ಪಾದ ಚಲನೆ) ಬಗ್ಗೆ ಮಾತನಾಡಿದ್ದರು. ‘ನಿಮ್ಮ ಪಾದಗಳು ಚಲಿಸದಿದ್ದರೆ, ರನ್ ಗಳಿಸಲಾರಿರಿ’ ಎಂದು ಹೇಳಿದ್ದರು. ಆಗ ನಾನು, ‘ಗ್ರೇಗ್, ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ 50ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 6,000ಕ್ಕೂ ಅಧಿಕ ರನ್ ಗಳಿಸಿದ್ದೇನೆ’ ಎಂದು ಉತ್ತರಿಸಿದ್ದೆ. ಆದರೆ, ಅದಕ್ಕೆ ಅವರು ‘ಅದೆಲ್ಲ ಮುಖ್ಯವಾಗುವುದಿಲ್ಲ’ ಎಂದು ಹೇಳಿ, ನಮ್ಮಿಬ್ಬರ ನಡುವೆ ಕೆಟ್ಟ ವಾಗ್ವಾದ ನಡೆಯಿತು ಎಂದು ಸೆಹ್ವಾಗ್ ಬಹಿರಂಗಪಡಿಸಿದ್ದಾರೆ.

Advertisements

ಈ ಘಟನೆ 2005-2007ರ ಅವಧಿಯಲ್ಲಿ ನಡೆದಿದ್ದು, ಚಾಪೆಲ್‌ರ ಕೋಚಿಂಗ್ ಸಮಯದಲ್ಲಿ ಭಾರತೀಯ ತಂಡದಲ್ಲಿ ಹಲವು ವಿವಾದಗಳು ಉಂಟಾಗಿದ್ದವು. ಚಾಪೆಲ್‌ರ ಹೆಚ್ಚೇನು ಫಲಪ್ರದವಾಗಿರಲಿಲ್ಲ ಎಂದು ಸೆಹ್ವಾಗ್ ಹಿಂದೆಯೂ ಹೇಳಿದ್ದರು. ಆ ಸಮಯದಲ್ಲಿ ಸೌರವ್ ಗಂಗೂಲಿ ಅವರೊಂದಿಗೂ ಚಾಪೆಲ್‌ಗೆ ತೀವ್ರ ಭಿನ್ನಾಭಿಪ್ರಾಯಗಳಿದ್ದವು, ಅದು ಗಂಗೂಲಿಯ ನಾಯಕತ್ವ ಕಸಿದುಕೊಳ್ಳುವಂತೆ ಮಾಡಿತ್ತು. ಚಾಪೆಲ್ ತಂಡದಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದರು, ಆದರೆ ಅದು ಆಟಗಾರರ ಮನಸ್ಥಿತಿಯನ್ನು ಕೆಡಿಸಿತ್ತು ಎಂದು ಹಲವು ಆಟಗಾರರು ಆರೋಪಿಸಿದ್ದರು.

ಇದನ್ನು ಓದಿದ್ದೀರಾ? ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಆ ವೇಳೆ ಮಧ್ಯಪ್ರವೇಶಿಸಿದ್ದ ರಾಹುಲ್ ದ್ರಾವಿಡ್, ನಮ್ಮಿಬ್ಬರನ್ನೂ ಪ್ರತ್ಯೇಕಿಸಿದ್ದರು. ಅದಾದ ನಂತರ, ನಾನು ಬ್ಯಾಟಿಂಗ್‌ಗೆ ಹೋಗುವಾಗ ‘ರನ್ ಗಳಿಸಿ, ಇಲ್ಲವೇ ತಂಡದಿಂದ ಕೈಬಿಡುತ್ತೇನೆ’ ಎಂದು ಚಾಪೆಲ್ ಎಚ್ಚರಿಸಿದ್ದರು. ಆ ದಿನದಾಟದ ಎರಡನೇ ಅವಧಿ ಮುಗಿಯುವ ಹೊತ್ತಿಗೆ ನಾನು 184 ರನ್ ಗಳಿಸಿದ್ದೆ. ಬಳಿಕ, ‘ನನ್ನ ಬಳಿಗೆ ಬರದಂತೆ ನಿಮ್ಮ ಕೋಚ್‌ಗೆ ಹೇಳಿ’ ಎಂದು ದ್ರಾವಿಡ್‌ಗೆ ತಿಳಿಸಿದ್ದೆ ಎಂದು ಸೆಹ್ವಾಗ್ ಹೇಳಿದ್ದಾರೆ. ಈ ಘಟನೆಯ ನಂತರ ಸೆಹ್ವಾಗ್ ತಮ್ಮ ಆಟವನ್ನು ಮತ್ತಷ್ಟು ಸುಧಾರಿಸಿದರು, ಆದರೆ ಚಾಪೆಲ್‌ರ ಅವಧಿ ವಿವಾದಾಸ್ಪದವಾಗಿಯೇ ಮುಗಿದಿತ್ತು. 2007ರಲ್ಲಿ ಚಾಪೆಲ್ ರಾಜೀನಾಮೆ ನೀಡಿದ ನಂತರ ಭಾರತೀಯ ತಂಡ ಹೊಸ ದಿಕ್ಕಿನಲ್ಲಿ ಸಾಗಿತು, ಮತ್ತು ಸೆಹ್ವಾಗ್ ಅವರಂತಹ ಆಟಗಾರರು ತಂಡದ ಯಶಸ್ಸಿಗೆ ಕಾರಣರಾದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಸೆಹ್ವಾಗ್ ಗುರುತಿಸಿಕೊಂಡಿದ್ದಾರೆ. ಎರಡು ಬಾರಿ ತ್ರಿಶತಕ ಬಾರಿಸಿದ ಮೊದಲ ಭಾರತೀಯ ಎನಿಸಿರುವ ಅವರು, ಅತಿಹೆಚ್ಚು (2) ಬಾರಿ ಮುನ್ನೂರು ರನ್ ಗಳಿಸಿದ ನಾಲ್ಕೇ ನಾಲ್ಕು ಬ್ಯಾಟರ್‌ಗಳಲ್ಲಿ ಒಬ್ಬರು. 2004ರಲ್ಲಿ ಪಾಕಿಸ್ತಾನ ವಿರುದ್ಧ ಮಲ್ತಾನ್‌ ಟೆಸ್ಟ್‌ನಲ್ಲಿ 309 ರನ್ ಗಳಿಸಿ ತ್ರಿಶತಕ ದಾಖಲಿಸಿದರು, ಅದು ಭಾರತದ ಮೊದಲ ತ್ರಿಶತಕವಾಗಿತ್ತು. ನಂತರ 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 319 ರನ್ ಗಳಿಸಿ ಮತ್ತೊಂದು ತ್ರಿಶತಕ ಸಾಧಿಸಿದರು, ಅದು ಅತಿ ವೇಗದ ತ್ರಿಶತಕದ ದಾಖಲೆಯಾಗಿತ್ತು. ಒಟ್ಟು 104 ಟೆಸ್ಟ್ ಪಂದ್ಯಗಳ 180 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿರುವ ಅವರು, 49.34ರ ಸರಾಸರಿಯಲ್ಲಿ 8,586 ರನ್ ಗಳಿಸಿದ್ದಾರೆ. ಅವರ ಖಾತೆಯಲ್ಲಿ 6 ದ್ವಿಶತಕ, 23 ಶತಕ, 32 ಅರ್ಧ ಶತಕಗಳಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಸ್ಟ್ರೈಕ್ ರೇಟ್ 82.24 ಎಂಬುದು ಅಚ್ಚರಿಯ ಸಂಗತಿ, ಇದು ಟೆಸ್ಟ್ ಆಟದಲ್ಲಿ ಅಪರೂಪದ ಆಕ್ರಮಣಕಾರಿ ಶೈಲಿಯನ್ನು ಪ್ರತಿಬಿಂಬಿಸುತ್ತದೆ.

ಏಕದಿನ ಮಾದರಿಯಲ್ಲಿ 251 ಪಂದ್ಯಗಳಲ್ಲಿ ಆಡಿರುವ ಸೆಹ್ವಾಗ್, 35.06ರ ಸರಾಸರಿ ಮತ್ತು 104.34 ಸ್ಟ್ರೈಕ್ ರೇಟ್‌ನಲ್ಲಿ 8,273 ರನ್ ಕಲೆಹಾಕಿದ್ದಾರೆ. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 219 ರನ್ ಗಳಿಸಿ ಏಕದಿನದಲ್ಲಿ ಮೊದಲ ದ್ವಿಶತಕ ದಾಖಲಿಸಿದ್ದರು, ಅದು ಅಪರೂಪದ ಸಾಧನೆಯಾಗಿತ್ತು. ಅಲ್ಲದೆ, 15 ಶತಕ ಮತ್ತು 38 ಅರ್ಧ ಶತಕಗಳನ್ನು ಬಾರಿಸಿದ್ದಾರೆ. 19 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 2 ಅರ್ಧ ಶತಕ ಸಹಿತ 394 ರನ್ ಗಳಿಸಿದ್ದಾರೆ. ಸೆಹ್ವಾಗ್ ಅವರ ಆಟದ ಶೈಲಿ ಭಾರತೀಯ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿತು, ಅವರು ಸಚಿನ್ ತೆಂಡೂಲ್ಕರ್ ಜೊತೆಗೆ ಆರಂಭಿಕನಾಗಿ ಹಲವು ದಾಖಲೆಗಳನ್ನು ಸೃಷ್ಟಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

RCBಯದ್ದು ಕಳ್ಳ ಒಪ್ಪಂದ; ಆರ್‌ ಅಶ್ವಿನ್ ಬಹಿರಂಗ ಟೀಕೆ

2025ರ ಐಪಿಎಲ್‌ ಟೂರ್ನಿಗಾಗಿ ನಡೆದ ಮೆಗಾ ಹರಾಜಿನ ಸಮಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್...

ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ

"ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ...

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

Download Eedina App Android / iOS

X