ಜೂನ್ 2ರಿಂದ ಅಮೇರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ 9ನೇ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಕ್ರೀಡಾಕೂಟ ಆರಂಭವಾಗಲಿದೆ. ಈ ಟೂರ್ನಿಗೆ ನೇಪಾಳ ತಂಡದ ಆಡುವ ಬಳಗಕ್ಕೆ ಆಯ್ಕೆಯಾಗಿದ್ದ ಹಾಗೂ ಅತ್ಯಾಚಾರ ಆರೋಪ ಹೊತ್ತಿದ್ದ ಸಂದೀಪ್ ಲಮಿಛಾನೆಗೆ ವೀಸಾ ನೀಡಲು ಅಮೇರಿಕ ನಿರಾಕರಿಸಿದೆ.
ನೇಪಾಳ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಹಾಗೂ ಮಾಜಿ ನಾಯಕನಾಗಿರುವ ಸಂದೀಪ್ ಲಮಿಛಾನೆಯನ್ನು ನ್ಯಾಯಾಲಯವೊಂದು ಇತ್ತೀಚೆಗೆ ಅತ್ಯಾಚಾರ ಪ್ರಕರಣದಿಂದ ದೋಷಮುಕ್ತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ವೀಸಾ ನೀಡಲು ಅಮೇರಿಕ ರಾಯಭಾರ ಕಚೇರಿ ನಿರಾಕರಿಸಿದೆ.
ಈ ಬಗ್ಗೆ ಖುದ್ದು ಮಾಹಿತಿ ಹಂಚಿಕೊಂಡಿರುವ ಸಂದೀಪ್ ಲಮಿಛಾನೆ, “”ನೇಪಾಳದಲ್ಲಿರುವ ಅಮೇರಿಕ ರಾಯಭಾರ ಕಚೇರಿಯು 2019ರಲ್ಲಿ ಮಾಡಿದ್ದನ್ನು ಮತ್ತೆ ಮಾಡಿದ್ದಾರೆ. ಅವರು ಅಮೇರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ಗೆ ನನಗೆ ವೀಸಾ ನೀಡಲು ನಿರಾಕರಿಸಿದೆ. ಇದು ದುರದೃಷ್ಟಕರ. ನೇಪಾಳ ಕ್ರಿಕೆಟ್‌ನ ಎಲ್ಲಾ ಹಿತೈಷಿಗಳಿಗೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ತಿಳಿಸಿದ್ದಾರೆ.
And the @USEmbassyNepal did it again what they did back in 2019, they denied my Visa for the T-20 World Cup happening in USA and West Indies. Unfortunate. I am sorry to all the well wishers of Nepal Cricket. @USAmbNepal @CricketNep. https://t.co/xdBhaY6G91
— Sandeep Lamichhane (@Sandeep25) May 22, 2024
18 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಕೆಳ ನ್ಯಾಯಾಲಯವೊಂದು ಜನವರಿಯಲ್ಲಿ ಲಾಮಿಛಾನೆಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಕೆಳ ನ್ಯಾಯಾಲಯ ಕೆಳ ನ್ಯಾಯಾಲಯದ ಆದೇಶವನ್ನು ಅವರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. 23 ವರ್ಷದ ಲಾಮಿಛಾನೆ ನೇಪಾಳದ ಪ್ರಮುಖ ಕ್ರಿಕೆಟಿಗನಾಗಿದ್ದು, ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಗಳಲ್ಲಿ ನಡೆಯುತ್ತಿರುವ ಪ್ರಮುಖ ಟಿ20 ಲೀಗ್‌ಗಳಲ್ಲಿ ಆಡುತ್ತಿದ್ದಾರೆ.
ಇದನ್ನು ಓದಿದ್ದೀರಾ? ಬೆಳ್ತಂಗಡಿ | ದಿನವಿಡೀ ಹೈಡ್ರಾಮಾದ ಬಳಿಕ ಪೊಲೀಸರಿಗೆ ಶರಣಾದ ಬಿಜೆಪಿ ಶಾಸಕ ಹರೀಶ್ ಪೂಂಜಾ
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಲೆಗ್ ಸ್ಪಿನ್ನರ್ ಲಾಮಿಛಾನೆಯನ್ನು ನೇಪಾಳ ಕ್ರಿಕೆಟ್‌ನಿಂದ 2022ರಲ್ಲಿ ಅಮಾನತುಗೊಳಿಸಲಾಗಿತ್ತು. ಪೊಲೀಸರು ಅವರನ್ನು ಬಂಧಿಸಿ ಬಳಿಕ, ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ಕಠ್ಮಂಡು ಜಿಲ್ಲಾ ನ್ಯಾಯಾಲಯವು ಜನವರಿಯಲ್ಲಿ ಅವರಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅವರು ಸಂತ್ರಸ್ತೆಗೆ 3,770 ಡಾಲರ್ ಪರಿಹಾರ ನೀಡಬೇಕೆಂದು ಆದೇಶಿಸಿತ್ತು. ಪಟನ್ ಹೈಕೋರ್ಟ್ ಕ್ರಿಕೆಟಿಗನ ಮೇಲ್ಮನವಿಯನ್ನು ಪರಿಗಣಿಸಿ ಅವರನ್ನು ದೋಷಮುಕ್ತಗೊಳಿಸಿತ್ತು.
The US Embassy in Nepal has denied Sandeep Lamichhane the USA Visa. pic.twitter.com/QuGKVhvUEh
— Mufaddal Vohra (@mufaddal_vohra) May 22, 2024
