ಗುಜರಾತ್‌ನ ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೂರನೇ ಪಂದ್ಯದ 2ನೇ ದಿನದಾಟದ ಅಂತ್ಯಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿ, ಉತ್ತಮ ಸ್ಥಿತಿಯಲ್ಲಿದ್ದ ಇಂಗ್ಲೆಂಡ್, ಮೂರನ ದಿನ 319 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿದೆ.
ನಿನ್ನೆ ಇಂಗ್ಲೆಂಡ್‌ನ ಆರಂಭಿಕ ಆಟಗಾರ ಬೆನ್ ಡಕೆಟ್ ಅಮೋಘ ಆಟವಾಡಿ, ಭರ್ಜರಿ ಶತಕ ಸಿಡಿಸಿದ್ದರು. ಇಂದು ಟೀಮ್ ಇಂಡಿಯಾದ ಬಿಗು ಬೌಲಿಂಗ್‌ಗೆ ತತ್ತರಿಸಿದ ಪ್ರವಾಸಿಗರು, ನಿನ್ನೆಯ ರನ್‌ಗೆ 112 ರನ್ ಸೇರಿಸುವಷ್ಟರಲ್ಲಿ ಆಲೌಟ್ ಆಯಿತು. ಆ ಮೂಲಕ ಟೀಮ್ ಇಂಡಿಯಾ 126 ರನ್‌ಗಳ ಮುನ್ನಡೆ ಪಡೆಯಿತು.
Innings break!
England are all-out for 319 in the first-innings.
A successful afternoon session for #TeamIndia as @mdsirajofficial finishes with a four-wicket haul 👏👏
Scorecard ▶️ https://t.co/FM0hVG5X8M#INDvENG | @IDFCFIRSTBank pic.twitter.com/gYC0WzQOUm
— BCCI (@BCCI) February 17, 2024
ಇಂಗ್ಲೆಂಡ್ ಪರ ಭರ್ಜರಿ ಶತಕ ಸಿಡಿಸಿ ಮುಂದುವರಿಯುತ್ತಿದ್ದ ಬೆನ್ ಡಕೆಟ್ ಅವರು ಕುಲ್‌ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಪೆವಿಲಿಯನ್‌ಗೆ ಹಿಂದಿರುವುದಕ್ಕೂ ಮುನ್ನ 151 ಎಸೆತಗಳನ್ನು ಎದುರಿಸಿದ್ದ ಡಕೆಟ್, 153 ರನ್ ಗಳಿಸಿ ಔಟಾದರು. ಇದರಲ್ಲಿ 23 ಬೌಂಡರಿ ಹಾಗೂ 2 ಸಿಕ್ಸ್ ಒಳಗೊಂಡಿತ್ತು. ಉಳಿದಂತೆ ನಾಯಕ ಬೆನ್ ಸ್ಟೋಕ್ಸ್ 41 ರನ್, ಓಲಿ ಪೋಪ್ 39 ರನ್ ಗಳಿಸಿದರೆ, ಜೋ ರೂಟ್, ಬೆನ್ ಫೋಕ್ಸ್ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲು ಟೀಮ್ ಇಂಡಿಯಾ ಬೌಲರ್‌ಗಳು ಬಿಡಲಿಲ್ಲ. ಜಾನಿ ಬೈರ್ ಸ್ಟೋ ಶೂನ್ಯ ಸುತ್ತಿದರು.
ಟೀಮ್ ಇಂಡಿಯಾ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಮೊಹಮ್ಮದ್ ಸಿರಾಜ್ 84ಕ್ಕೆ 4 ವಿಕೆಟ್, ಕುಲ್‌ದೀಪ್ ಯಾದವ್ 77ಕ್ಕೆ 2 ಹಾಗೂ ರವೀಂದ್ರ ಜಡೇಜಾ 51ಕ್ಕೆ 2 ವಿಕೆಟ್ ಪಡೆದರು. ಉಳಿದಂತೆ ಅಶ್ವಿನ್ ಹಾಗೂ ಜಸ್‌ಪ್ರೀತ್ ಬುಮ್ರಾ ತಲಾ ಒಂದೊಂದು ವಿಕೆಟ್ ಗಳಿಸಿದರು.
ಎರಡನೇ ಇನ್ನಿಂಗ್ಸ್: ಟೀಮ್ ಇಂಡಿಯಾ 44ಕ್ಕೆ 1
126 ರನ್‌ಗಳ ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ, ಒಂದು ಚಹಾ ವಿರಾಮದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 44 ರನ್ ದಾಖಲಿಸಿದೆ.
ನಾಯಕ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಅವರು ಇನ್ನಿಂಗ್ಸ್ ಆರಂಭಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಆಸರೆಯಾಗಿದ್ದ ನಾಯಕ ರೋಹಿತ್ ಶರ್ಮಾ, ಜೋ ರೂಟ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು, 28 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು.
Tea on Day 3 in Rajkot!#TeamIndia move to 44/1, lead by 170 runs.
Final session of the day coming up 🔜
Scorecard ▶️ https://t.co/FM0hVG5X8M#INDvENG | @IDFCFIRSTBank pic.twitter.com/CKtu2lqbKf
— BCCI (@BCCI) February 17, 2024
ಚಹಾ ವಿರಾಮದ ವೇಳೆಗೆ ಟೀಮ್ ಇಂಡಿಯಾ 44 ರನ್ ದಾಖಲಿಸಿದ್ದು, 19 ರನ್ ಗಳಿಸಿರುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಾಗೂ ಶುಭ್‌ಮನ್ ಗಿಲ್ 5 ರನ್ ಗಳಿಸಿ, ಸದ್ಯ ಕ್ರೀಸ್‌ನಲ್ಲಿದ್ದಾರೆ. ಈವರೆಗೆ ಟೀಮ್ ಇಂಡಿಯಾ 170 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.