ಗುಜರಾತ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟ ಸಂತ್ರಸ್ತರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲ್ಯೂಟಿಸಿ) ಫೈನಲ್ ಪಂದ್ಯ ಆಡುತ್ತಿರುವ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಆಟಗಾರರು ಮೌನಾಚರಣೆ ಹಾಗೂ ಕಪ್ಪು ಪಟ್ಟಿ ಧರಿಸುವ ಮೂಲಕ ಗೌರವ ಸಲ್ಲಿಸಿದರು.
ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಡಬ್ಲ್ಯೂಟಿಸಿ ಫೈನಲ್‌ನ ಮೂರನೇ ದಿನದಾಟಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಆಟಗಾರರು ಒಂದು ನಿಮಿಷ ಮೌನ ಆಚರಿಸಿದರು. ಅಲ್ಲದೆ ತೋಳಿಗೆ ಕಪ್ಪು ಪಟ್ಟಿ ಮೈದಾನಕ್ಕಿಳಿದರು.
ಗುರುವಾರ ಮಧ್ಯಾಹ್ನ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು.
ಈ ದುರಂತದಲ್ಲಿ ವಿಮಾನದಲ್ಲಿದ್ದ ವಿಮಾನದಲ್ಲಿದ್ದ 241 ಜನರು ಸಾವನ್ನಪ್ಪಿ, ಒಬ್ಬರು ಮಾತ್ರ ಬದುಕುಳಿದರು. ವಿಮಾನವು ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿದ ಕಾರಣ ಸಾವಿನ ಸಂಖ್ಯೆ 265 ಕ್ಕೆ ಏರಿದೆ.
ಇದನ್ನು ಓದಿದ್ದೀರಾ? ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ | ರಬಾಡ ಮಾರಕ ದಾಳಿ; 212 ರನ್‌ಗಳಿಗೆ ಆಸೀಸ್ ಆಲೌಟ್
ವಿಮಾನಯಾನ ಸಂಸ್ಥೆಯ ಪ್ರಕಾರ, 230 ಪ್ರಯಾಣಿಕರಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, ಏಳು ಪೋರ್ಚುಗೀಸರು ಮತ್ತು ಒಬ್ಬ ಕೆನಡಾದವರು ಹಾಗೂ 12 ವಿಮಾನಯಾನ ಸಿಬ್ಬಂದಿ ವಿಮಾನದಲ್ಲಿದ್ದರು.
144/8 ರನ್‌ನೊಂದಿಗೆ ಮೂರನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡ ಪಾನೀಯ ವಿರಾಮದ ವೇಳೆಗೆ 65 ಓವರ್‌ಗಳಲ್ಲಿ 207 ರನ್ ಗಳಿಸಿ ಆಲೌಟ್ ಆಗುವುದರೊಂದಿಗೆ 281 ರನ್ ಮುನ್ನಡೆ ಗಳಿಸಿದೆ. ಕೊನೆಯವರೆಗೂ ಉತ್ತಮ ಆಟವಾಡಿದ ಮಿಷಲ್ ಸ್ಟಾರ್ಕ್ 5 ಬೌಂಡರಿಗಳೊಂದಿಗೆ ಅಜೇಯ 58 ರನ್ ಗಳಿಸಿದರು.
2023 ರಲ್ಲಿ ಭಾರತವನ್ನು ಫೈನಲ್‌ನಲ್ಲಿ ಸೋಲಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ತನ್ನ ಡಬ್ಲ್ಯೂಟಿಸಿ ಪ್ರಶಸ್ತಿಯನ್ನು ಉಳಿಸಿಕೊಳ್ಳಬೇಕಾದರೆ 281 ರನ್‌ಗಳೊಳಗೆ ಹರಿಣಗಳ ತಂಡವನ್ನು ಕಟ್ಟಿಹಾಕಬೇಕು. ದಕ್ಷಿಣ ಆಫ್ರಿಕಾ ಮೊದಲ ಐಸಿಸಿ ಗೆಲ್ಲಬೇಕಾದರೆ ಆಸೀಸ್ ನೀಡಿರುವ 281 ರನ್ ಗುರಿಯನ್ನು ದಾಟಬೇಕಿದೆ. ಪಿಚ್ ಬೌಲರ್‌ಗಳಿಗೆ ಸೂಕ್ತವಾಗಿರುವುದರಿಂದ ಪಂದ್ಯ ಬೇಗನೆ ಮುಗಿಯುವ ಸಾಧ್ಯತೆಯಿದೆ.
Australia add 63 runs to their overnight total – South Africa have a target of 282 to become World Test champions!#SAvAUS #WTCFinal pic.twitter.com/84MDHqOVeF
— ESPNcricinfo (@ESPNcricinfo) June 13, 2025