ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಟೈಟನ್ಸ್ ಕಮಾಲ್ ಪ್ರದರ್ಶನ ನೀಡುತ್ತಿದೆ. ಈ ತಂಡದಲ್ಲಿ ಭರವಸೆಯ ಆಟಗಾರರ ದಂಡೇ ಇದೆ. ಈ ತಂಡದಲ್ಲಿರುವ ಆಟಗಾರರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ತಂಡದ ಗೆಲುವಿನಲ್ಲಿ ಮಿಂಚು ಹರಿಸುತ್ತಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ಆರಂಭ ಸೊಗಸಾಗಿತ್ತು. ಈ ವೇಳೆ ಸಾಯಿ ಸುದರ್ಶನ್ ಹಾಗೂ ನಾಯಕ ಶೂಭಮನ್ ಗಿಲ್ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತಂಡಕ್ಕೆ ಶತಕದ ಜೊತೆಯಾಟವನ್ನು ನೀಡಿತು. ಈ ವೇಳೆ ಸಾಯಿ ಸುದರ್ಶನ್ ತಮ್ಮ ಅಮೋಘ ಫಾರ್ಮ್ ಮುಂದುವರೆಸಿದರು. ಇವರಿಗೆ ನಾಯಕ ಶುಭ್‌ಮನ್ ಗಿಲ್ ಉತ್ತಮ ಜೊತೆ ನೀಡಿದರು.
ಪ್ರಸಕ್ತ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಶುಭಮನ್ ಗಿಲ್ ತಮ್ಮ ಅಮೋಘ ಬ್ಯಾಟಿಂಗ್ ಕೆಕೆಆರ್ ವಿರುದ್ಧವೂ ಮುಂದುವರೆಸಿದರು. ಆರಂಭದಲ್ಲಿ ಕೊಂಚ ತಾಳ್ಮೆಯಿಂದ ಆಡಿದ ಶುಭಮನ್ ಗಿಲ್ ನಂತರ ಬಿರುಸಿನ ಆಟವಾಡಿದರು. 10 ರನ್‌ಗಳಿಂದ ಶತಕ ವಂಚಿತರಾದರೂ ಉತ್ತಮ ಇನಿಂಗ್ಸ್ ಕಟ್ಟಿದರು. ಶುಭಮನ್ ಗಿಲ್ 55 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಾಯದಿಂದ 90 ರನ್ ಸಿಡಿಸಿ ಔಟ್ ಆದರು.
ಐಪಿಎಲ್‌ನಲ್ಲಿ 90 ರನ್ ಗಳಿಸಿ ಶುಭಮನ್ ಔಟಾಗುತ್ತಿರುವುದು ಇದು ಎರಡನೇ ಬಾರಿ. ಈ ಔಟಿನೊಂದಿಗೆ, ಗಿಲ್ ಐಪಿಎಲ್ ಇತಿಹಾಸದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಔಟಾದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಪಟ್ಟಿಯಲ್ಲಿರುವ ಇತರರೆಂದರೆ ರುತುರಾಜ್ ಗಾಯಕ್ವಾಡ್ (3), ವಿರಾಟ್ ಕೊಹ್ಲಿ (2), ಮತ್ತು ಕೆಎಲ್ ರಾಹುಲ್ (2).ಇದಕ್ಕೂ ಮೊದಲು, 2022 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗಿಲ್ 96 ರನ್ ಗಳಿಸಿ ಔಟಾಗಿದ್ದರು.
ಹಾಗೆಯೆ ಶುಭಮನ್ ಗಿಲ್ 2025ರ ಆವೃತ್ತಿಯ ಐಪಿಎಲ್‌ನಲ್ಲೂ 300 ರನ್‌ಗಳ ಗುರಿಯನ್ನು ಮುಟ್ಟಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಶುಭ್‌ಮನ್ 3500 ರನ್‌ಗಳನ್ನು ತಲುಪಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೊದಲು 26 ವರ್ಷ ಆಗುವವರೆಗೆ ಯಾವುದೇ ಆಟಗಾರ ಐಪಿಎಲ್‌ನಲ್ಲಿ 3000 ರನ್ ಗುರಿ ಮುಟ್ಟಿರಲಿಲ್ಲ. ಗಿಲ್ 108 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಕೆ ಎಲ್ ರಾಹುಲ್ (91 ಇನಿಂಗ್ಸ್) ಬಳಿಕ ಈ ದಾಖಲೆಯನ್ನು ವೇಗವಾಗಿ ತಲುಪಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರರಾದರು.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ಅಪರೂಪದ ಸಚಿನ್ ದಾಖಲೆ ಮುರಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್
199 ರನ್ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ತಂಡದ ಬ್ಯಾಟರ್‌ಗಳು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ರಹಮುತ್ತಲಾ ಗುರ್ಬಾಜ್ ಹಾಗೂ ಸುನಿಲ್ ನರೈನ್ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಪವರ್ ಪ್ಲೇ ಅಂತ್ಯವಾದಾಗ ಕೆಕೆಆರ್ 2 ವಿಕೆಟ್ ನಷ್ಟಕ್ಕೆ 45 ರನ್ ಸೇರಿಸಿತ್ತು. ಆದರೆ 7 ರಿಂದ 14 ಓವರ್‌ಗಳ ವರೆಗೆ ಅಗತ್ಯ ರನ್ ಕಲೆ ಹಾಕುವಲ್ಲಿ ವಿಫಲವಾಯಿತು. ಅಲ್ಲದೆ ಈ ಅವಧಿಯಲ್ಲಿ 63 ರನ್ ಸಿಡಿಸಿ 2 ವಿಕೆಟ್ ಕಳೆದುಕೊಂಡಿತು.
ಆದರೆ ನಿಜಕ್ಕೂ ಪಂದ್ಯಕ್ಕೆ ತಿರುವ ಸಿಕ್ಕಿದ್ದು ಅಜಿಂಕ್ಯ ರಹಾನೆ ಹಾಗೂ ದುಬಾರಿ ಆಟಗಾರ ವೆಂಕಟೇಶ್ ಅಯ್ಯರ್ ಬ್ಯಾಟಿಂಗ್ ಮಾಡುವಾಗ, ಈ ಜೋಡಿ 36 ಎಸೆತಗಳಲ್ಲಿ 41 ರನ್ ಸೇರಿಸಿ ತಂಡಕ್ಕೆ ಇನ್ನು ಒತ್ತಡಕ್ಕೆ ಸಿಲಿಕಿಸಿತು. ಅಜಿಂಕ್ಯ ಅರ್ಧಶತಕ ಬಾರಿಸಿದರೂ ಸಹ ತಂಡವನ್ನು ಗೆಲುವಿನ ದಡಕ್ಕೆ ತೆಗೆದುಕೊಂಡು ಹೋಗಲು ವಿಫಲರಾದರು.