ಟೆನಿಸ್ ತಾರೆ ಜೋಕೋವಿಕ್‌ಗೆ US ಓಪನ್ ಆಘಾತ: ಆರಂಭಿಕ ಸುತ್ತಿನಲ್ಲೇ ಹೊರಕ್ಕೆ

Date:

ದಾಖಲೆಯ 25ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ಸರ್ಬಿಯಾದ ಟೆನಿಸ್ ದಿಗ್ಗಜ ನೊವಾಕ್ ಜೋಕೋವಿಕ್ ಅವರಿಗೆ ವರ್ಷದ ಕಡೆಯ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯಾದ ಅಮೆರಿಕ ಓಪನ್ (ಯುಎಸ್‌ ಓಪನ್‌) ಮೊದಲ ಸುತ್ತಿನಲ್ಲೇ ಭಾರಿ ಆಘಾತ ಎದುರಾಗಿದೆ. ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೇಯಾಂಕ ರಹಿತ ಆಟಗಾರ, ಅರ್ಜೆಂಟೀನಾದ ಮರಿಯಾನೊ ನವೋನ್ ವಿರುದ್ಧ ಜೋಕೋವಿಕ್ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ 2006ರ ಬಳಿಕ ಇದೇ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯೊಂದರಲ್ಲಿ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ ಬೇಸರಕ್ಕೆ ಅವರು ಒಳಗಾಗಿದ್ದಾರೆ.

- Advertisement -

​ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸುದೀರ್ಘ ಹಾಗೂ ರೋಚಕ ಹಣಾಹಣಿಯಲ್ಲಿ 25 ವರ್ಷದ ಯುವ ಆಟಗಾರ ನವೋನ್ ಅವರು 39 ವರ್ಷದ ಅನುಭವಿ ಜೋಕೋವಿಕ್ ಅವರನ್ನು 7-6, 5-7, 4-6, 6-2, 6-1 ಸೆಟ್‌ಗಳ ರೋಚಕ ಅಂತರದಿಂದ ಮಣಿಸಿದರು. ಪಂದ್ಯದ ಮೊದಲ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ನವೋನ್ ಗೆದ್ದುಕೊಂಡರೆ, ಮರುಹೋರಾಟ ನಡೆಸಿದ ಜೋಕೋವಿಕ್ 2 ಮತ್ತು 3ನೇ ಸೆಟ್‌ಗಳನ್ನು (7-5, 6-4) ತಮ್ಮದಾಗಿಸಿಕೊಂಡರು. ಆದರೆ, ದೈಹಿಕವಾಗಿ ತೀವ್ರ ಬಳಲಿದ್ದ ಜೋಕೋವಿಕ್ ವಿರುದ್ಧ ಅಂತಿಮ ಎರಡು ಸೆಟ್‌ಗಳಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ನವೋನ್ ತಮ್ಮ ವೃತ್ತಿಬದುಕಿನ ಅತ್ಯಂತ ದೊಡ್ಡ ಹಾಗೂ ಸ್ಮರಣೀಯ ಗೆಲುವು ದಾಖಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

​ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ವೇಳೆ ನ್ಯೂಯಾರ್ಕ್‌ನ ವಿಪರೀತ ತಾಪಮಾನವು ಜೋಕೋವಿಕ್ ಅವರನ್ನು ಹೈರಾಣಾಗಿಸಿತು. ಬಿಸಿಲಿನ ಬೇಗೆ ತಾಳಲಾರದೆ ಅವರು ಪದೇ ಪದೇ ತಲೆಯ ಮೇಲೆ ಐಸ್ ಪ್ಯಾಕ್ ಇಟ್ಟುಕೊಂಡು ಆಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸೆಖೆ ಹಾಗೂ ನಿರ್ಜಲೀಕರಣದಿಂದ ಬಳಲಿದ ಜೋಕೋವಿಕ್, ಮೂರನೇ ಸೆಟ್‌ನ ಆರನೇ ಗೇಮ್‌ ವೇಳೆ ಕೋರ್ಟ್‌ನಲ್ಲೇ ವಾಂತಿ ಮಾಡಿಕೊಂಡರು. ವೈದ್ಯಕೀಯ ತಂಡ ಹಾಗೂ ಫಿಸಿಯೋ ನೆರವಿನೊಂದಿಗೆ ಚೇತರಿಸಿಕೊಂಡು ಅವರು ಆಟ ಮುಂದುವರಿಸಿದರೂ, ಐದನೇ ಸೆಟ್‌ನಲ್ಲಿ ಅವರ ದೇಹ ಸಂಪೂರ್ಣವಾಗಿ ಕೈಕೊಟ್ಟಿತ್ತು.

​ನಿರ್ಣಾಯಕ ಐದನೇ ಸೆಟ್‌ನಲ್ಲಿ 1-4 ಅಂತರದಿಂದ ಹಿನ್ನಡೆ ಅನುಭವಿಸುತ್ತಿದ್ದ ವೇಳೆ, ಸೋಲು ಖಚಿತವಾಗುತ್ತಿದ್ದಂತೆ ಜೋಕೋವಿಕ್ ಕೋರ್ಟ್‌ನಲ್ಲೇ ಭಾವುಕರಾಗಿ ಕಣ್ಣೀರು ಹಾಕಿದರು. 24 ಗ್ರ್ಯಾಂಡ್ ಸ್ಲ್ಯಾಮ್‌ಗಳ ಒಡೆಯನ ಈ ಸ್ಥಿತಿ ಕ್ರೀಡಾಭಿಮಾನಿಗಳಿಗೂ ನೋವು ತರಿಸಿತು. ಈ ಸೋಲಿನೊಂದಿಗೆ 25ನೇ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಕನಸಿನ ಜೊತೆಗೆ, ಯುಎಸ್ ಓಪನ್‌ನಲ್ಲಿ 98ನೇ ಪಂದ್ಯ ಗೆದ್ದು ಅಮೆರಿಕದ ದಿಗ್ಗಜ ಜಿಮ್ಮಿ ಕಾನರ್ಸ್ ಅವರ ದಾಖಲೆಯನ್ನು ಮುರಿಯುವ ಐತಿಹಾಸಿಕ ಅವಕಾಶವನ್ನೂ ಅವರು ಕೈಚೆಲ್ಲಿದ್ದಾರೆ. ಇತ್ತೀಚೆಗಷ್ಟೇ ಸಿನ್ಸಿನಾಟಿ ಓಪನ್‌ನಲ್ಲೂ ಅವರು ಥಿಯಾಗೊ ಅಗಸ್ಟಿನ್ ಟಿರಾಂಟೆ ವಿರುದ್ಧ ಸೋತು ನಿರ್ಗಮಿಸಿದ್ದರು ಎಂಬುದು ಉಲ್ಲೇಖನೀಯ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀಳಗಿ | ಬೆಳೆ ಉಳಿಸಲು ಘಟಪ್ರಭಾ ಎಡದಂಡೆ ಕಾಲುವೆಯ ಕೊನೆಯವರೆಗೆ ನೀರು ಹರಿಸಿ: ಭಾರತೀಯ ಕಿಸಾನ್‌ ಸಂಘ ಆಗ್ರಹ

ಘಟಪ್ರಭಾ ಮತ್ತು ಕೃಷ್ಣಾ ನದಿಗಳಲ್ಲಿ ಸಾಕಷ್ಟು ನೀರಿದ್ದರೂ ಘಟಪ್ರಭಾ ಎಡದಂಡೆ ಕಾಲುವೆಯ...

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...