ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಎಡಗೈ ಬ್ಯಾಟರ್ ಉಸ್ಮಾನ್ ಖ್ವಾಜಾ ಚೊಚ್ಚಲ ಶತಕ ದಾಖಲಿಸಿದ್ದಾರೆ.
ನಾಲ್ಕು ರನ್‌ಗಳಿಂದ ಶನಿವಾರ ಬ್ಯಾಟಿಂಗ್ ಆರಂಭಿಸಿದ್ದ ಖ್ವಾಜಾ, 199 ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ, ವೃತ್ತಿ ಜೀವನದ 15ನೇ ಟೆಸ್ಟ್ ಶತಕವನ್ನು ಪೂರ್ತಿಗೊಳಿಸಿದರು. ಆಂಗ್ಲನ್ನರ ನೆಲದಲ್ಲಿ ಉಸ್ಮಾನ್ ಪಾಲಿಗಿದು ಚೊಚ್ಚಲ ಶತಕವಾಗಿದೆ. ಈ ಸಾಧನೆ ಬಳಿಕ ಖ್ವಾಜಾ, ಬ್ಯಾಟನ್ನು ʻಮೇಲಕ್ಕೆ ಎಸೆದುʼ ಸಂಭ್ರಮಿಸಿದರು.
ಆಸಿಸ್ ದಿಟ್ಟ ಹೋರಾಟ
ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನ ಎರಡನೇ ಪ್ರವಾಸಿ ಆಸಿಸ್ ದಿಟ್ಟ ಪ್ರತಿ ಹೋರಾಟ ನಡೆಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಗಳಿಸಿದ್ದ 393 ರನ್‌ಗಳಿಗೆ ಪ್ರತ್ಯುತ್ತವರಾಗಿ ಆಸ್ಟ್ರೇಲಿಯಾ, ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟದಲ್ಲಿ 311 ರನ್ ಗಳಿಸಿದ್ದು, ಇನ್ನೂ 82 ರನ್ಗಳ ಹಿನ್ನಡೆಯಲ್ಲಿದೆ.
126 ರನ್‌ಗಳಿಸಿರುವ ಉಸ್ಮಾನ್ ಖ್ವಾಜಾ ಮತ್ತು ಅರ್ಧ ಶತಕ ದಾಖಲಿಸಿರುವ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಭಾನುವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.
15ನೇ ಬಾರಿ ವಾರ್ನರ್ ವಿಕೆಟ್ ಪಡೆದ ಬ್ರಾಡ್
ಇಂಗ್ಲೆಂಡ್‌ನ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸುವ ʻಪರಂಪರೆʼಯನ್ನು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಆ್ಯಶಸ್ ಸರಣಿಯಲ್ಲೂ ಮುಂದುವರಿಸಿದ್ದಾರೆ.
9 ರನ್‌ಗಳಿಸಿದ್ದ ವೇಳೆ, ಬ್ರಾಡ್ ಬೌಲಿಂಗ್‌ನಲ್ಲಿ ವೈಡ್ ಲೈನ್‌ನಲ್ಲಿ ಸಾಗುತ್ತಿದ್ದ ಚೆಂಡನ್ನು ಕೆಣಕಲು ಯತ್ನಿಸಿದ ವಾರ್ನರ್, ಇನ್‌ಸೈಡ್ ಎಡ್ಜದ್ ಆಗುವ ಮೂಲಕ ವಿಕೆಟ್ ಒಪ್ಪಿಸಿ ನಿರಾಸೆಯಿಂದಲೇ ಪೆವಿಲಿಯನ್‌ಗೆ ಮರಳಿಸಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ರಾಡ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ವಿಕೆಟ್ ಪಡೆಯುತ್ತಿರುವುದು ಇದು 15ನೇ ಬಾರಿಯಾಗಿದೆ.