ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಸೋಮವಾರ ನಡೆದ ಐಪಿಎಲ್‌ನ 47ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಾವುದೇ ಅರ್ಧಶತಕಗಳಿಲ್ಲದೆ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್, ಇನ್ನೂ 21 ಎಸೆತ ಬಾಕಿ ಇರುವಂತೆಯೇ 157 ರನ್ ಹೊಡೆದು ಜಯಗಳಿಸಿತು.
What a way to wrap up a solid all-round show 💥
A commanding performance by Kolkata Knight Riders at home 💜
And that win helps them consolidate their position in the points table 🤝
Scorecard ▶️ https://t.co/eTZRkma6UM#TATAIPL | #KKRvDC | @KKRiders pic.twitter.com/FFBYyylTKU
— IndianPremierLeague (@IPL) April 29, 2024
ಕೋಲ್ಕತ್ತಾ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಆರಂಭದಲ್ಲೇ ಅಬ್ಬರಿಸಲು ಆರಂಭಿಸಿದ್ದರು. 68 ರನ್(33 ಎಸೆತ, 7 ಬೌಂಡರಿ, 5 ಸಿಕ್ಸರ್) ಸಿಡಿಸಿ ಔಟಾದರು. ಇದಕ್ಕೂ ಮೊದಲು ಆರಂಭಿಕನಾಗಿ ಬಂದಿದ್ದ ಸುನಿಲ್ ನರೈನ್ 10 ಎಸೆತಗಳಲ್ಲಿ 3 ಬೌಂಡರಿ ಸಮೇತ 15 ರನ್ ಗಳಿಸಿ, ಔಟಾಗಿದ್ದರು.
ಕೊನೆಯಲ್ಲಿ ಕೆಕೆಆರ್ ಪರ ಮುರಿಯದ 4ನೇ ವಿಕೆಟಿಗೆ ನಾಯಕ ಶ್ರೇಯಸ್ ಅಯ್ಯರ್ ಮತ್ತು ವೆಂಕಟೇಶ್ ಅಯ್ಯರ್ 43 ಎಸೆತಗಳಲ್ಲಿ 57 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಶ್ರೇಯಸ್ ಅಯ್ಯರ್ ಔಟಾಗದೆ 33 ರನ್(23 ಎಸೆತ, 3 ಬೌಂಡರಿ, 1 ಸಿಕ್ಸ್) ವೆಂಕಟೇಶ್ ಅಯ್ಯರ್ ಔಟಾಗದೆ 26 ರನ್(23 ಎಸೆತ, 2 ಬೌಂಡರಿ,1 ಸಿಕ್ಸ್) ಹೊಡೆದರು.
ಡೆಲ್ಲಿ ಪರ ನಾಯಕ ರಿಷಭ್ ಪಂತ್ 27 ರನ್ ಹೊಡೆದರೆ ಕೊನೆಯಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಔಟಾಗದೆ 35 ರನ್ (26 ಎಸೆತ, 5 ಬೌಂಡರಿ, 1 ಸಿಕ್ಸರ್) ಸಿಡಿಸಿದ ಪರಿಣಾಮ ತಂಡ 150 ರನ್‌ಗಳ ಗಡಿಯನ್ನು ದಾಟಿತ್ತು.
ಕೋಲ್ಕತ್ತಾ ಪರ ಬೌಲಿಂಗ್‌ನಲ್ಲಿ ವರುಣ್ ಚಕ್ರವರ್ತಿ 16 ರನ್ ನೀಡಿ 3 ವಿಕೆಟ್ ಕಿತ್ತರೆ, ವೈಭವ್ ಅರೋರಾ ಮತ್ತು ಹರ್ಷಿತ್ ರಾಣಾ ತಲಾ 2 ವಿಕೆಟ್ ಪಡೆದರು.
ಇದನ್ನು ಓದಿದ್ದೀರಾ? ನೂರಾರು ಮಹಿಳೆಯರ ಅತ್ಯಾಚಾರವೆಸಗಿ ವಿದೇಶಕ್ಕೆ ಓಡಿ ಹೋದವನನ್ನು ಕರೆತಂದು ಮಂಗಳಸೂತ್ರದ ಬಗ್ಗೆ ಮಾತನಾಡಿ: ಪ್ರಿಯಾಂಕಾ ಗಾಂಧಿ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಈವರೆಗೆ ಆಡಿದ 9 ಪಂದ್ಯಗಳಲ್ಲಿ 6 ಗೆಲುವು ಮತ್ತು 3 ಸೋಲುಗಳ ಮೂಲಕ 12 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮುಂದುವರೆದಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿದ 11 ಪಂದ್ಯಗಳಲ್ಲಿ 5 ಗೆಲುವು ಮತ್ತು 6 ಸೋಲುಗಳ ಮೂಲಕ 10 ಅಂಕಗಳನ್ನು ಕಲೆಹಾಕಿ 6ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಹಂತಕ್ಕೆ ತಲುಪುವ ತಂಡಗಳು ಯಾವುವು ಎಂಬುದನ್ನು ಕಾದುನೋಡಬೇಕಿದೆ.
