ಗುಜರಾತ್‌ನ ವಡೋದರಾದಲ್ಲಿ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ನಡೆಯುತ್ತಿದೆ. ಫೈನಲ್ ಗೆದ್ದು, ಟ್ರೋಫಿ ತಮ್ಮದಾಗಿಸಿಕೊಳ್ಳಲು ಕರ್ನಾಟಕ ಮತ್ತು ವಿದರ್ಭ ತಂಡಗಳು ಹಣಾಹಣಿ ನಡೆಸುತ್ತಿವೆ. ಮೊದಲ ಬ್ಯಾಟಿಂಗ್ ಮಾಡಿರುವ ಕರ್ನಾಟಕ 349 ರನ್‌ಗಳನ್ನು ಪೇರಿಸಿದ್ದು, ವಿದರ್ಭಗೆ ಭಾರೀ ಮೊತ್ತದೆ ರನ್‌ಗಳ ಗುರಿ ನೀಡಿದೆ.
ಕರ್ನಾಟಕ ತಂಡವು 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದೊಂದಿಗೆ, 348 ರನ್‌ಗಳ ಬೃಹತ್ ಮೊತ್ತ ದಾಖಲಿಸಿದೆ.ಕರ್ನಾಟಕ ತಂಡದ ಸಮರನ್ ರವಿಚಂದ್ರನ್ ಭರ್ಜರಿ ಶತಕ (101) ಸಿಡಿಸಿದ್ದು, ತಂಡವು ಹೆಚ್ಚು ರನ್‌ಗಳನ್ನು ಗಳಿಸಲು ನೆರವಾಗಿದ್ದಾರೆ. ಜೊತೆಗೆ ಶ್ರೀಜಿತ್ 78, ಅಭಿನವ್ ಮನೋಹರ್ 79 ರನ್ ಬಾರಿದ್ದಾರೆ.
ಈ ವರದಿ ಓದಿದ್ದೀರಾ?: 7 ಇನ್ನಿಂಗ್ಸ್‌ನಲ್ಲಿ 752 ರನ್, 6 ಬಾರಿ ನಾಟ್‌ಔಟ್; ಹೊಸ ದಾಖಲೆಯ ಅಂಚಿನಲ್ಲಿ ಕರುಣ್ ನಾಯರ್
ವಿದರ್ಭ ತಂಡ ಟ್ರೋಪಿ ಗೆಲ್ಲಲು ಕನಿಷ್ಠ 349 ರನ್ ದಾಖಲಿಸಬೇಕಿದೆ. ವಿದರ್ಭ ತಂಡ ನಾಯಕ ಕರುಣ್ ನಾಯರ್ ಉತ್ತಮ ಫಾರ್ಮ್‌ನಲ್ಲಿದ್ದು, ಭಾರೀ ಪ್ರದರ್ಶನ ನೀಡುತ್ತಿದ್ದಾರೆ. ಟೂರ್ನಿಯಲ್ಲಿ ಏಳು ಪಂದ್ಯಗಳನ್ನು ಆಡಿರುವ ನಾಯರ್ 5 ಶತಕಗಳೊಂದಿಗೆ 752 ರನ್ ಗಳಿಸಿದ್ದಾರೆ. ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಪ್ರೇಕ್ಷಕರು ಅವರ ಬ್ಯಾಟಿಂಗ್ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.