ನೆದರ್‌ಲ್ಯಾಂಡ್ಸ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ನೆದರ್‌ಲ್ಯಾಂಡ್ಸ್ ತಂಡದ ಸ್ಕಾಟ್ ಎಡ್ವರ್ಡ್ಸ್ ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾದ ‘ಪಾರ್ಟ್ ಟೈಂ ಬೌಲರ್’ ವಿರಾಟ್ ಕೊಹ್ಲಿ ವಿಶ್ವಕಪ್‌ನಲ್ಲಿ ಮೊದಲ ವಿಕೆಟ್ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿ ಎಸೆದ 25ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ ಹಿಡಿದ ಅತ್ಯುತ್ತಮ ಕ್ಯಾಚ್ಗೆ ನೆದರ್‌ಲ್ಯಾಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ ಬಲಿಯಾಗುವ ಮೂಲಕ ನೆದರ್‌ಲ್ಯಾಂಡ್ಸ್ ನಾಲ್ಕನೇ ವಿಕೆಟ್ ಕಳೆದುಕೊಂಡಿತು.
That wicket feeling! 😃#TeamIndia | #CWC23 | #MenInBlue | #INDvNED pic.twitter.com/CRP3d2tdRA
— BCCI (@BCCI) November 12, 2023
30 ಎಸೆತಗಳಲ್ಲಿ 17 ರನ್ ಬಾರಿಸಿದ್ದ ಸ್ಕಾಟ್ ಎಡ್ವರ್ಡ್ಸ್ ವಿರಾಟ್ ಕೊಹ್ಲಿಯವರಿಗೆ ಬಲಿಯಾದರು. ಇದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿಗೆ ಐದನೇ ವಿಕೆಟ್ ಆಗಿತ್ತು. ಈ ಹಿಂದೆ ಅಲೈಸ್ಟರ್ ಕುಕ್, ಕ್ರೇಗ್ ಕೀಸ್ವೆಟರ್, ಬ್ರೆಂಡನ್ ಮೆಕಲಮ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ವಿಕೆಟ್ ಪಡೆದಿದ್ದರು. ಇಂದು ಸ್ಕಾಟ್ ಎಡ್ವರ್ಡ್ಸ್ ವಿಕೆಟ್ ಪಡೆಯುವ ಮೂಲಕ 9 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ವಿಕೆಟ್ ಪಡೆದಿದ್ದಾರೆ.
Wicket Celebration 😂❤️#viratkohli #anushkasharma pic.twitter.com/GjNSDO56Kp
— 𝙒𝙧𝙤𝙜𝙣🥂 (@wrogn_edits) November 12, 2023
ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಬೌಲ್ ಮಾಡುವ ವೇಳೆ ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪಾದದ ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಪಂದ್ಯದಲ್ಲಿ ಅವರು ಒಂದೇ ಒಂದು ಓವರ್ ಅನ್ನು ಪೂರ್ಣಗೊಳಿಸದೆ ಮೈದಾನ ತೊರೆದಿದ್ದರು. ಮತ್ತೆ ಅವರು ಮೈದಾನಕ್ಕೆ ಮರಳಿರಲಿಲ್ಲ. ಹಾರ್ದಿಕ್ ಪಾಂಡ್ಯ ಅವರ ಓವರ್ ಅನ್ನು ವಿರಾಟ್ ಕೊಹ್ಲಿ ಮುಗಿಸಿದ್ದರು.
ನಗು ತಡೆದುಕೊಳ್ಳದ ಪತ್ನಿ ಅನುಷ್ಕಾ ಶರ್ಮಾ!
Anushka Sharma couldn’t stop herself after Virat Kohli took the wicket. pic.twitter.com/5V6SlVuvji
— Mufaddal Vohra (@mufaddal_vohra) November 12, 2023
ವಿರಾಟ್ ಕೊಹ್ಲಿ ವಿಕೆಟ್ ಪಡೆಯುತ್ತಿದ್ದಂತೆಯೇ ಪೆವಿಲಿಯನ್‌ನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ನಗು ತಡೆಯಲಾಗಲಿಲ್ಲ. ಬಳಿಕ ಚಪ್ಪಾಳೆ ತಟ್ಟಿ ತನ್ನದೇ ಶೈಲಿಯಲ್ಲಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ವಿರಾಟ್ ಕೂಡ ಅವರಿಗೆ ಮೈದಾನದಿಂದಲೇ ಸಾಥ್ ನೀಡುವ ಮೂಲಕ ಸಂಭ್ರಮ ಹಂಚಿಕೊಂಡರು. ಅವರ ವಿಡಿಯೋ ವೈರಲಾಗಿದೆ.
The celebration of Virat Kohli and Anushka Sharma. pic.twitter.com/blgPB9ciql
— Mufaddal Vohra (@mufaddal_vohra) November 12, 2023
It’s happening 🤩
The wrong footed in-swinging menace has broken the partnership! 😉🎳#PlayBold #INDvNED #ViratKohli #CWC23 @imVkohli pic.twitter.com/GuX95Xsour
— Royal Challengers Bangalore (@RCBTweets) November 12, 2023