- ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಟ್ಸ್ ನಡುವೆ ಸ್ಪರ್ಧೆ
- ನಾಲ್ಕು ವರ್ಷಗಳ ನಂತರ ಜೈಪುರಕ್ಕೆ ಮರಳಿದ ಐಪಿಎಲ್ ಪಂದ್ಯ
ಐಪಿಎಲ್ 16ನೇ ಆವೃತ್ತಿಯ 26ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಬುಧವಾರ ಲಕ್ನೋ ಸೂಪರ್ ಜೈಂಟ್ಸ್ ಸವಾಲನ್ನು ಎದುರಿಸಲಿದೆ.
ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ನಾಲ್ಕು ವರ್ಷಗಳ ಬಳಿಕ ಜೈಪುರ ಐಪಿಎಲ್ ಪಂದ್ಯಕ್ಕೆ ವೇದಿಕೆಯಾಗುತ್ತಿದೆ.
23 ಸಾವಿರ ಆಸನ ವ್ಯವಸ್ಥೆಯನ್ನು ಹೊಂದಿರುವ ಕ್ರೀಡಾಂಗಣವನ್ನು ಇತ್ತೀಚಿಗೆ ನವೀಕರಿಸಲಾಗಿದೆ.
ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 4ರಲ್ಲೂ ಗೆಲುವು ಕಂಡಿರುವ ಸಂಜು ಸ್ಯಾಮ್ಸನ್ ಸಾರಥ್ಯದ ರಾಯಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಲಕ್ನೋ ಎರಡನೇ ಸ್ಥಾನದಲ್ಲಿದೆ.
ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ತಂಡದ ವಿರುದ್ಧದ ನಾಲ್ಕು ಪಂದ್ಯಗಳಲ್ಲಿ ಮೊದಲ ಗೆಲುವು ದಾಖಲಿಸಿದ ಹುಮ್ಮಸ್ಸಿನಲ್ಲಿರುವ ರಾಯಲ್ಸ್, ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿದೆ.
ಕಳೆದ ಪಂದ್ಯದಲ್ಲಿ 4 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡ ಬಳಿಕವೂ ಸಂಜು ಸ್ಯಾಮ್ಸನ್ ಮತ್ತು ಹೆಟ್ನಾಯರ್ ಭರ್ಜರಿ ಅರ್ಧಶತಕಗಳ ಮೂಲಕ 177 ರನ್ ಚೇಸ್ ಮಾಡಿತ್ತು.
ಎರಡನೇ ತವರು ಮೈದಾನ ಗುವಹಾಟಿಯ ಬರ್ಸಪರಾ ಸ್ಟೇಡಿಯಂನಲ್ಲಿ ಎರಡು ಪಂದ್ಯಗಳನ್ನಾಡಿರುವ ರಾಜಸ್ಥಾನ ರಾಯಲ್ಸ್, ಮಾನ್ಸಿಂಗ್ ಮೈದಾನದಲ್ಲೂ ಗೆಲುವಿನ ಓಟವನ್ನು ಮುಂದುವರಿಸುವ ತವಕದಲ್ಲಿದೆ.
ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ಮುಂಬೈ ತಂಡಕ್ಕೆ ಹ್ಯಾಟ್ರಿಕ್ ಗೆಲುವು
ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ಆಡುವ ಪಂದ್ಯಗಳ ವೇಳಾಪಟ್ಟಿ;
ಏಪ್ರಿಲ್ 19 – vs ಲಕ್ನೋ ಸೂಪರ್ ಜೈಂಟ್ಸ್
ಏಪ್ರಿಲ್ 27 – vs ಚೆನ್ನೈ ಸೂಪರ್ ಕಿಂಗ್ಸ್
ಮೇ 5 – vs ಗುಜರಾತ್ ಟೈಟಾನ್ಸ್
ಮೇ 7 – vs ಸನ್‌ರೈಸರ್ಸ್ ಹೈದರಾಬಾದ್
ಮೇ 14 – vs ರಾಯಲ್ ಚಾಲೆಂಜರ್ಸ್ ಬೆಂಗಳೂರು.