“ನಾವೆಲ್ಲರೂ ನಿನ್ನಿಂದಿಗಿದ್ದೇವೆ, ಕೈಯಲ್ಲಿ ಚೆಂಡು ಹಿಡಿದಾಗಲೆಲ್ಲಾ, ಆಕೆಯ ಕುರಿತ ಆಲೋಚನೆಗಳು ನನ್ನ ಮನಸ್ಸನ್ನು ಮುಟ್ಟುತ್ತಿದ್ದವು”. ಇದು ಕ್ಯಾನ್ಸರ್‌ಪೀಡಿತ ಸಹೋದರಿಯನ್ನು ನೆನೆದು, ಎಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 10 ವಿಕೆಟ್ ಕಬಳಿಸಿ ಮೆರೆದ ಭಾರತದ ವೇಗಿ ಆಕಾಶ್ ದೀಪ್ ಅವರ ಭಾವುಕ ನುಡಿಗಳು.
ಆಕಾಶ್ ದೀಪ್ ಅವರು ತಮ್ಮ 10 ವಿಕೆಟ್‌ನ ಅಮೋಘ ಸಾಧನೆಯನ್ನು, ತಮ್ಮ ಕ್ಯಾನ್ಸರ್‌ಪೀಡಿತ ಸಹೋದರಿಗೆ ಅರ್ಪಿಸಿದ್ದಾರೆ. ಎಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ, ಆಕಾಶ್ ದೀಪ್ ಅವರು ಎರಡು ಇನ್ನಿಂಗ್ಸ್‌ನಿಂದ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಆಕಾಶ್ ದೀಪ್, ತಮ್ಮ ಅದ್ಭುತ ಪ್ರದರ್ಶನವನ್ನು ಕಳೆದ ಎರಡು ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತಮ್ಮ ಸಹೋದರಿಗೆ ಅರ್ಪಿಸುವುದಾಗಿ ಹೇಳಿದರು.
ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ 336 ರನ್‌ಗಳ ಸರಣಿ ಸಮಬಲದ ಗೆಲುವಿನಲ್ಲಿ, ಪಶ್ಚಿಮ ಬಂಗಾಳದ ವೇಗಿ 10 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದರು. ಇದು ಆಕಾಶ್ ದೀಪ್ ಅವರ ಇದುವರೆಗಿನ ಅತ್ಯುತ್ತಮ ಟೆಸ್ಟ್ ಪ್ರದರ್ಶನವಾಗಿದೆ.
ಇದನ್ನು ಓದಿದ್ದೀರಾ? IND vs ENG 2ND Test: ಜಯದ ಮೂಲಕ ಇತಿಹಾಸ ನಿರ್ಮಿಸಲು ಟೀಂ ಇಂಡಿಯಾಗೆ ಬೇಕು 7 ವಿಕೆಟ್
“ನಾನು ಇದರ ಬಗ್ಗೆ ಯಾರೊಂದಿಗೂ ಮಾತನಾಡಿಲ್ಲ ಆದರೆ ಎರಡು ತಿಂಗಳ ಹಿಂದೆ, ನನ್ನ ತಂಗಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವಳು ನನ್ನ ಪ್ರದರ್ಶನದಿಂದ ತುಂಬಾ ಸಂತೋಷಪಡುತ್ತಾಳೆ ಮತ್ತು ಭಾರತ ತಂಡದ ಗೆಲುವು ಆಕೆಯ ನಗುವನ್ನು ಮರಳಿ ತರುತ್ತದೆ. ನಾನು ಚೆಂಡನ್ನು ಕೈಗೆತ್ತಿಕೊಂಡಾಗಲೆಲ್ಲ ಅವಳ ಆಲೋಚನೆಗಳು ಮತ್ತು ಆಕೆಯ ಮುಖ ನನ್ನ ಮನಸ್ಸಿನಲ್ಲಿ ಹಾದು ಹೋಗುತ್ತಿತ್ತು. ನನ್ನ ಈ ಪ್ರದರ್ಶನ ಅವಳಿಗೆ ಸಮರ್ಪಿತವಾಗಿದೆ. ನಾವೆಲ್ಲರೂ ನಿನ್ನೊಂದಿಗಿದ್ದೇವೆ ಎಂದು ನಾನು ಅವಳಿಗೆ ಹೇಳಲು ಬಯಸುತ್ತೇನೆ” ಎಂದು ಆಕಾಶ್ ದೀಪ್ ತಮ್ಮ ಭಾವನೆಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಪಂದ್ಯದ ಬಗ್ಗೆ ಮಾತನಾಡಿದ ಅವರು “ನಾವು ಒಂದು ತಂಡವಾಗಿ ಜಾರಿಗೆ ತಂದ ಯೋಜನೆಗಳು ಮತ್ತು ಪ್ರಕ್ರಿಯೆಗಳು ಅದ್ಭುತವಾಗಿ ಕೆಲಸ ಮಾಡಿವೆ. ಹಾರ್ಡ್ ಲೆಂತ್‌ಗಳಲ್ಲಿ ಸೀಮ್‌ನ್ನು ಚುರುಕುಗೊಳಿಸುವುದು ನನ್ನ ಮುಖ್ಯ ಗುರಿಯಾಗಿ. ತಂತ್ರಗಾರಿಕೆಯ ಕ್ರಮಬದ್ಧ ಯೋಜನೆಯಿಂದ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ವಿಕೆಟ್ ಕಬಳಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
Family is everything!
— Sony Sports Network (@SonySportsNetwk) July 6, 2025
Akash Deep dedicates this win to his sister battling cancer. 🙌#SonySportsNetwork #GroundTumharaJeetHamari #ENGvIND #NayaIndia #DhaakadIndia #TeamIndia #ExtraaaInnings pic.twitter.com/teMNeuYLMP