- ಆರ್‌ಸಿಬಿ ಐಪಿಎಲ್ ಗೆಲ್ಲುವಿಗಾಗಿ ಹಿಡಿದ ಪುಟಾಣಿ ಪೋಸ್ಟರ್ ವೈರಲ್
- ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಪಂದ್ಯ
ಐಪಿಎಲ್ ಪಂದ್ಯಗಳು ನಡೆಯುವ ವೇಳೆ ಮೈದಾನದಲ್ಲಿ ಅಭಿಮಾನಿಗಳು ತರಹಾವೇರಿ ಪೋಸ್ಟರ್‌ಗಳನ್ನು ಪ್ರದರ್ಶಿಸುವುದು ಸಾಮಾನ್ಯ. ಅಂತಹುದೇ ಬೆಂಗಳೂರಿನ ಪುಟಾಣಿ ಪೋಸ್ಟರ್ ಈಗ ವೈರಲ್ ಆಗಿದೆ.
ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆರ್‌ಸಿಬಿ ಮತ್ತು ಕೆಕೆಆರ್ ಪಂದ್ಯದ ವೇಳೆ ಆರ್‌ಸಿಬಿ ಅಭಿಮಾನಿಯಾದ ಪುಟಾಣಿ ಪೋಸ್ಟರ್ ಒಂದು ಇದೀಗ ವೈರಲ್ ಆಗಿದೆ.
ಆರ್‌ಸಿಬಿ ಜೆರ್ಸಿ ಧರಿಸಿದ್ದ ಪುಟಾಣಿಯೊಬ್ಬಳು, ʻಆರ್‌ಸಿಬಿ ಐಪಿಎಲ್ ಗೆಲ್ಲುವವರೆಗೂ ಶಾಲೆಗೆ ಸೇರುವುದಿಲ್ಲʼ ಎಂದು ಬರೆದಿದ್ದ ಪ್ಲೆಕಾರ್ಡ್ ಹಿಡಿದು ಅಂಬೆಗಾಲಿಡುತ್ತಾ ಓಡಾಡುತ್ತಿದ್ದಳು. ಪಂದ್ಯದ ವೇಳೆ ಇದು ಎಲ್ಲರ ಗಮನ ಸೆಳೆದಿದೆ. ಪುಟಾಣಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಆರ್‌ಸಿಬಿ ಟ್ರೋಫಿ ಗೆಲ್ಲುವವರೆಗೂ ಮದುವೆಯಾಗುವುದಿಲ್ಲಎಂದಿದ್ದ ಯುವತಿ
ಪುಟಾಣಿ ಪೋಸ್ಟರ್ ಮಾತ್ರವಲ್ಲ, ಆರ್‌ಸಿಬಿ ಕಪ್ ಗೆಲ್ಲದ ಬಗ್ಗೆ ಇಂತಹ ಹಲವು ಪೋಸ್ಟರ್‌ಗಳು ವೈರಲ್ ಆಗಿವೆ. ಕಳೆದ ಆವೃತ್ತಿಯಲ್ಲಿ ಮುಂಬೈನಲ್ಲಿ ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬಂದಿದ್ದ ಯುವತಿಯೊಬ್ಬಳು, ತನ್ನ ನೆಚ್ಚಿನ ತಂಡ ಆರ್‌ಸಿಬಿ, ಐಪಿಎಲ್ ಟ್ರೋಫಿ ಗೆಲ್ಲುವವರೆಗೂ ತಾನು ಮದುವೆಯಾಗುವುದಿಲ್ಲ ಎಂದು ಬರೆದಿರುವ ಪೋಸ್ಟರ್ ಪ್ರದರ್ಶಿಸಿದ್ದಳು. ಇದು ಸಹ ಸಾಕಷ್ಟು ವೈರಲ್ ಅಗುವುದರ ಜೊತೆಗೆ ಯುವತಿ ಟ್ರೋಲ್‌ಗೆ ಒಳಗಾಗಿದ್ದಳು.
ಈ ಸುದ್ದಿ ಓದಿದ್ದೀರಾ?: ಐಪಿಎಲ್ ಪಂದ್ಯ ವೀಕ್ಷಿಸಲು ತೆರಳಿದ್ದ ಐಆರ್‌ಎಸ್ ಅಧಿಕಾರಿಯ ದುಬಾರಿ ಮೊಬೈಲ್ ಕಳ್ಳತನ
2008ರಲ್ಲಿ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇದುವರೆಗಿನ 15 ಆವೃತ್ತಿಗಳಲ್ಲಿ ಆಡಿರುವ ಆರ್‌ಸಿಬಿ ಚಾಂಪಿಯನ್ ಪಟ್ಟವನ್ನೇರಿಲ್ಲ. 2009, 2011 ಹಾಗೂ 2016ರಲ್ಲಿ ಫೈನಲ್ ಪ್ರವೇಶಿಸಿದ್ದೇ ಆರ್‌ಸಿಬಿಯ ಇದುವರೆಗಿನ ಶ್ರೇಷ್ಠ ಸಾಧನೆ.
ಪ್ರಸಕ್ತ 16ನೇ ಆವೃತ್ತಿಯಲ್ಲಿ ಇದುವರೆಗೂ 8 ಪಂದ್ಯಗಳನ್ನಾಡಿರುವ ಆರ್‌ಸಿಬಿ, 4 ಪಂದ್ಯಗಳಲ್ಲಿ ಗೆಲುವಿನ ಸವಿಯುಂಡಿದ್ದು ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.