ಕಝಕಿಸ್ತಾನದ ಬಿಸ್ಕೆಕ್‌ನಲ್ಲಿ ನಡೆದ ಏಷ್ಯನ್ ಒಲಿಂಪಿಕ್ಸ್‌ನ ಏಷ್ಯನ್ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಗೆಲ್ಲುವ ಮೂಲಕ ಭಾರತದ ಮಹಿಳಾ ಕುಸ್ತಿಪಟುಗಳಾದ ರೀತಿಕಾ ಹೂಡಾ, ಅಂಶು ಮಲಿಕ್ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು 57 ಕೆ ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಸೊಬಿರೋವಾ ಅವರನ್ನು ಎದುರಿಸಿದ ಅಂಶು ಮಲಿಕ್, ಪ್ರಬಲ ಪೈಪೋಟಿ ನೀಡಿ ರೋಚಕವಾಗಿ ಸೋಲಿಸಿದರು. ಆ ಮೂಲಕ ಮಹಿಳೆಯರ ಕುಸ್ತಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಎರಡನೇ ಕುಸ್ತಿಪಟುವಾದರು.
Anshu storms to victory at Asian Olympic Qualifiers, securing India’s 2nd 🎟️ Ticket to #Paris2024 at the event!👏✨🥳
🌟 In a thrilling match, #TOPScheme Athlete Anshu triumphs over Sobirova L. (UZB) in the WW 57kg showdown. 🥇✨
Get ready to #Cheer4India as we get ready for… pic.twitter.com/w0mSIBHepJ
— SAI Media (@Media_SAI) April 20, 2024
76 ಕೆ ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಭಾರತದ ಕುಸ್ತಿಪಟು ರೀತಿಕಾ ಹೂಡಾ, ಚೀನಾದ ಹುಯಿ ತ್ಸ್ಜ್ ಚಾಂಗ್ ಅವರನ್ನು 7-0 ಅಂತರಲ್ಲಿ ಸೋಲಿಸಿದರು. ಆ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಂಡರು.
India shines bright as Reetika Hooda secures 3rd #ParisOlympics quota for the country at the event! 🏅🇮🇳
Dominating the event, Reetika defeated Hui Tsz Chang🇹🇼 7-0 in the SF of WW 76kg category, sealing nation’s 4th wrestling spot for #Paris2024. 🎉✨
Our #TOPScheme Athlete… pic.twitter.com/NSA12PwD9a
— SAI Media (@Media_SAI) April 20, 2024
ಇದಕ್ಕೂ ಮೊದಲು ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಸಿದ್ದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ದೇಶದ ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್, ಮುಂದಿನ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿಕೊಂಡಿದ್ದರು.
ಇದನ್ನು ಓದಿದ್ದೀರಾ? ಮಹಿಳೆಯರ ಕುಸ್ತಿ | ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿಕೊಂಡ ವಿನೇಶ್ ಫೋಗಟ್
ಕ್ವಾಲಿಫೈಯರ್‌ನ ಮಹಿಳೆಯರ 50 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಕಝಾಕಿಸ್ತಾನದ ಲಾರಾ ಗ್ಯಾನಿಕಿಜಿ ಅವರನ್ನು 10-0 ಅಂತರದಿಂದ ಸೋಲಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೆ ಅರ್ಹತೆ ಪಡೆಯುವ ಮೂಲಕ, ಮೊದಲ ಟಿಕೆಟ್ ಗಿಟ್ಟಿಸಿಕೊಂಡಿದ್ದರು.
