ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ ಸತತ ಆರು ಗೆಲುವಿನೊಂದಿಗೆ ಉತ್ತಮ ಸಾಧನೆ ತೋರಿರುವ ಭಾರತ ತಂಡ ಇಂದು ಶ್ರೀಲಂಕಾ ವಿರುದ್ಧ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ 7ನೇ ಪಂದ್ಯವಾಡಲಿದೆ.
ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡು ಭಾರತವನ್ನು ಬ್ಯಾಟಿಂಗ್ ಆಹ್ವಾನಿಸಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಈ ಪಂದ್ಯದಲ್ಲಿ ವಿಜಯ ಸಾಧಿಸಿದರೆ ಬಹುತೇಕ ಸೆಮಿಫೈನಲ್‌ಗೆ ಸ್ಥಾನ ಗಟ್ಟಿ ಮಾಡಿಕೊಳ್ಳುತ್ತದೆ. ಕೇವಲ 2 ಪಂದ್ಯಗಳಲ್ಲಿ ಜಯಗಳಿಸಿರುವ ಕುಸಾಲ್ ಮೆಂಡಿಸ್ ನೇತೃತ್ವದ ಲಂಕಾ ಪಡೆ ಈ ಪಂದ್ಯದೊಂದಿಗೆ ಇನ್ನುಳಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆಯುವುದು ಕಷ್ಟಸಾಧ್ಯವಾಗಿದೆ. ಒಂದು ವೇಳೆ ಭಾರತವನ್ನು ಸೋಲಿಸಿದರೆ ಉಪಾಂತ್ಯ ಪ್ರವೇಶಕ್ಕೆ ಏರುವ ಟೀಂ ಇಂಡಿಯಾಕ್ಕೆ ಒಂಚೂರು ತಡೆಯೊಡ್ಡಬಹುದು.
ಉಭಯ ತಂಡಗಳು ಒಟ್ಟಾರೆಯಾಗಿ ಏಕದಿನ ಕ್ರಿಕೆಟ್‌ನಲ್ಲಿ 167 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 98 ಬಾರಿ ಜಯಗಳಿಸಿದರೆ, 57 ಬಾರಿ ಶ್ರೀಲಂಕಾ ಟೀಂ ಇಂಡಿಯಾವನ್ನು ಮಣಿಸಿದೆ. 11 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ.
ವಿಶ್ವಕಪ್ ಪಂದ್ಯಾವಳಿಯಲ್ಲೂ ಕೂಡ ಎರಡೂ ತಂಡಗಳು ತಲಾ 4 ಬಾರಿ ಗೆಲುವು ಸಾಧಿಸಿದ್ದರೆ ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಹೀಗಾಗಿ ವಿಶ್ವಕಪ್‌ನಲ್ಲಿ ಭಾರತ-ಶ್ರೀಲಂಕಾ ತಂಡಗಳು ಸಮಾನವಾಗಿ ಬಲಿಷ್ಠವಾಗಿದೆ.
ಈ ಸುದ್ದಿ ಓದಿದ್ದೀರಾ? ವಿಶ್ವಕಪ್ 2023 | ನ್ಯೂಜಿಲೆಂಡ್‌ಗೆ ಹ್ಯಾಟ್ರಿಕ್ ಸೋಲಿನ ಆಘಾತ; ಸೆಮಿಫೈನಲ್‌ನತ್ತ ದಕ್ಷಿಣ ಆಫ್ರಿಕಾ
ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ 3 ಪಂದ್ಯಗಳಲ್ಲಿ ಭಾರತ 2 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ 1ರಲ್ಲಿ ಗೆದ್ದಿದೆ.
Hello from the Wankhede Stadium, Mumbai! 🏟️
Ready for another cracking contest 👌
🆚 Sri Lanka
⏰ 2 PM IST
🖥️ https://t.co/Z3MPyeL1t7#TeamIndia | #CWC23 | #MenInBlue | #INDvSL pic.twitter.com/OhVFMamKFg— BCCI (@BCCI) November 2, 2023
ಭಾರತ ತಂಡದ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ ಒಳಗೊಂಡು ಹಿರಿಯ ಆಟಗಾರರು ಉತ್ತಮ ಲಯದಲ್ಲಿದ್ದಾರೆ.
ಇತ್ತ ಶ್ರೀಲಂಕಾದಲ್ಲಿ ತಂಡಕ್ಕೆ ಮರಳಿರುವ ಅನುಭವಿ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್, ಭಾರತದ ವಿರುದ್ಧ ಉತ್ತಮ ದಾಖಲೆ ನಿರ್ಮಿಸಿದ್ದಾರೆ. ಅವರು ಏಕದಿನ ಮಾದರಿಯಲ್ಲಿ ಸಿಡಿಸಿರುವ ಎಲ್ಲ ಮೂರು ಶತಕಗಳು ಭಾರತದ ವಿರುದ್ಧವೇ ಬಂದಿವೆ. ಭಾರತದ ವಿರುದ್ಧ 53.57ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಅವರು, 84.93 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದಲ್ಲದೆ ಮ್ಯಾಥ್ಯೂಸ್ ಏಕದಿನ ಪಂದ್ಯಗಳಲ್ಲಿ ಏಳು ಭಾರಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಕಬಳಿಸಿರುವುದು ವಿಶೇಷ.
ಉಭಯ ತಂಡಗಳಲ್ಲಿ ಆಡುವ 11ರ ಬಳಗ
ಭಾರತ:
ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್.
ಶ್ರೀಲಂಕಾ:
ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್ (ನಾಯಕ ಮತ್ತು ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೇಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.
ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ