ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಭಾರತದ ಸ್ಪಿನ್ನರ್ಗಳ ದಾಳಿಗೆ ಪತರಗುಟ್ಟಿದ ಆಸ್ಟ್ರೇಲಿಯಾ ಬ್ಯಾಟರ್ಗಳು, ಭಾರತಕ್ಕೆ ಸವಾಲಿನ ಗುರಿಯನ್ನು ನೀಡುವಲ್ಲಿ ವಿಫಲರಾಗಿದ್ದಾರೆ. 49.3 ಓವರ್ಗಳಲ್ಲಿ 199 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿದ್ದಾರೆ.
ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟ್ ಮಾಡಲು ಮುಂದಾಯಿತು. ಆದರೆ ಬೃಹತ್ ಗುರಿ ನೀಡುವ ನಿರೀಕ್ಷೆಗೆ ಭಾರತದ ಪ್ರಮುಖ ಸ್ಪಿನ್ನರ್ಗಳು ತಣ್ಣೀರೆರಚಿದರು.
AUSTRALIA BOWLED OUT FOR JUST 199….!!!
Commendable stuff by Indian bowlers led by Jadeja. Demolished the Australian batting at Chepauk. pic.twitter.com/jESVmZq28j
— Mufaddal Vohra (@mufaddal_vohra) October 8, 2023
ಟೀಮ್ ಇಂಡಿಯಾ ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ 28ಕ್ಕೆ 3, ಕುಲ್ದೀಪ್ ಯಾದವ್ 2 ಹಾಗೂ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದುಕೊಂಡರೆ, ಆರ್ ಅಶ್ವಿನ್, ಮೊಹಮ್ಮದ್ ಸಿರಾಜ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದುಕೊಂಡರು.
India spinners shared six wickets among them to restrict Australia to a modest total 🪄#CWC23 | #INDvAUS
Details 👇https://t.co/Zn0PmDdUiJ
— ICC (@ICC) October 8, 2023
ಚುರುಕಿನ ಫೀಲ್ಡಿಂಗ್ ಕೂಡ ಆಸ್ಟ್ರೇಲಿಯಾವನ್ನು ಸಣ್ಣ ಮೊತ್ತಕ್ಕೆ ಕಟ್ಟಿ ಹಾಕಲು ಟೀಮ್ ಇಂಡಿಯಾ ಯಶಸ್ವಿಯಾಯಿತು. ಇನ್ನಿಂಗ್ಸ್ನ ಕೊನೆಯಲ್ಲಿ ಮಿಚೆಲ್ ಸ್ಟಾರ್ಕ್ಸ್, ಆಸೀಸ್ ಖಾತೆಗೆ 28 ರನ್ಗಳ ಅಮೂಲ್ಯ ಕೊಡುಗೆ ಸೇರಿಸಿದರು. ಕೊನೆಯಲ್ಲಿ 49.3 ಓವರ್ಗಳಲ್ಲಿ 199 ರನ್ ಗಳಿಸಲಷ್ಟೇ ಆಸಿಸ್ಗೆ ಸಾಧ್ಯವಾಯಿತು.
ಬ್ಯಾಟಿಂಗ್ನಲ್ಲಿ ಆಸಿಸ್ ಪರ ಡೇವಿಡ್ ವಾರ್ನರ್ 41, ಸ್ಟೀವ್ ಸ್ಮಿತ್ 46, ಲಾಬೂಶೈನ್ 27, ಗ್ಲೆನ್ ಮ್ಯಾಕ್ಸ್ವೆಲ್ 15, ಕ್ಯಾಮರೂನ್ ಗ್ರೀನ್ 8 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ ಹಾಗೂ ಅಲೆಕ್ಸ್ ಕ್ಯಾರಿ ಶೂನ್ಯ ಸುತ್ತಿದರು.
Innings break!
Australia are all out for 199 courtesy of a solid bowling performance from #TeamIndia 👏👏
Ravindra Jadeja the pick of the bowlers with figures of 3/28 👌👌
Scorecard ▶️ https://t.co/ToKaGif9ri#CWC23 | #INDvAUS | #MeninBlue pic.twitter.com/TSf9WN4Bkz
— BCCI (@BCCI) October 8, 2023