ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ವಿಶ್ವಕಪ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ನ್ಯೂಝಿಲ್ಯಾಂಡ್ಗೆ 99 ರನ್ಗಳ ಜಯ ಗಳಿಸಿದೆ.
ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಝಿಲ್ಯಾಂಡ್, ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 322 ರನ್ ಕಲೆಹಾಕಿತ್ತು.
ಬೃಹತ್ ಗುರಿ ಬೆನ್ನತ್ತಲು ಶ್ರಮಿಸಿದ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲ್ಯಾಂಡ್ಸ್, 46.3 ಓವರ್ಗಳಲ್ಲಿ 223 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ವಿಶ್ವಕಪ್ ಟೂರ್ನಿಯ ಎರಡನೇ ಪಂದ್ಯದಲ್ಲೂ ಸೋಲನುಭವಿಸಿದೆ. ನೆದರ್ಲ್ಯಾಂಡ್ಸ್ ಪರ ಕಾಲಿನ್ ಎಕರ್ಮನ್ 69 ರನ್ ಗಳಿಸಿ, ಹೋರಾಟ ನಡೆಸಿದರೂ ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
New Zealand in this World Cup:
– Chased down 283 against England in 36.1 overs.
– Defeated Netherlands by 99 runs.– Dominating start by the Kiwis to their World Cup campaign. The Table Toppers of this edition! pic.twitter.com/67AirdZt8t
— Mufaddal Vohra (@mufaddal_vohra) October 9, 2023
ಕೀವೀಸ್ ಪರ ಪರ 17 ಎಸೆತಗಳಲ್ಲಿ ಅಜೇಯ 37 ರನ್ ಬಾರಿಸಿ ಬ್ಯಾಟಿಂಗ್ನಲ್ಲಿ ಮಿಂಚಿದ್ದಮಿಚೆಲ್ ಸ್ಯಾಂಟರ್ ಬೌಲಿಂಗ್ನಲ್ಲೂ ಸೈ ಎನಿಸಿಕೊಂಡರು.
ತನ್ನ ಪಾಲಿನ 10 ಓವರ್ಗಳನ್ನು ಎಸೆದ ಸ್ಯಾಂಟರ್, 59 ರನ್ ನೀಡಿ 5 ವಿಕೆಟ್ ಕಬಳಿಸಿದರು. ಬೌಲರ್ ಮ್ಯಾಟ್ ಹೆನ್ರಿ ಮೂರು ವಿಕೆಟ್ ಕಿತ್ತರು. ಯುವ ಆಲ್ರೌಂಡ್ ಆಟಗಾರ ರಚಿನ್ ರವೀಂದ್ರ ಒಂದು ವಿಕೆಟ್ ಕಿತ್ತರು.
2/2 to start at the @cricketworldcup! Mitch Santner 5-59 and Matt Henry 3-40 lead the effort to defend with the ball in Hyderabad. Scorecard | https://t.co/yjDWlW2uBm #CWC23 pic.twitter.com/WaOCIVoW0j
— BLACKCAPS (@BLACKCAPS) October 9, 2023
ಗುರುವಾರ ನಡೆದಿದ್ದ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 9 ವಿಕೆಟ್ಗಳಿಂದ ಗೆಲುವು ಸಾಧಿಸಿದ್ದ ನ್ಯೂಝಿಲ್ಯಾಂಡ್, ಸತತ ಎರಡನೇ ಜಯ ಗಳಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿದೆ. ನೆದರ್ಲ್ಯಾಂಡ್ಸ್ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 81 ರನ್ಗಳಿಂದ ಸೋಲನುಭವಿಸಿತ್ತು.