ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಇಂದು ನಡೆದ ವಿಶ್ವಕಪ್ ಕ್ರಿಕೆಟ್ ಕೂಟದ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಝಿಲ್ಯಾಂಡ್ ವಿರುದ್ಧ ಟೀಮ್ ಇಂಡಿಯಾ ನಾಲ್ಕು ವಿಕೆಟ್‌ಗಳ ಗೆಲುವು ದಾಖಲಿಸಿದೆ.
ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ ಅವರ ಐದು ವಿಕೆಟ್ ಹಾಗೂ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿಯವರ 95 ರನ್‌ಗಳ ನೆರವಿನಿಂದ ನ್ಯೂಝಿಲ್ಯಾಂಡ್ ವಿರುದ್ಧ ಟೀಮ್ ಇಂಡಿಯಾ ನಾಲ್ಕು ವಿಕೆಟ್‌ಗಳ ಗೆಲುವು ದಾಖಲಿಸಿದೆ.
ಈ ಗೆಲುವಿನ ಮೂಲಕ ವಿಶ್ವಕಪ್ ಕೂಟದಲ್ಲಿ ಈವರೆಗೆ ಆಡಿದ ಎಲ್ಲ ಐದು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದುಕೊಂಡು, ಅಂಕಪಟ್ಟಿಯಲ್ಲಿ 10 ಅಂಕಗಳನ್ನು ಗಳಿಸಿಕೊಂಡು ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ವಿಶ್ವಕಪ್ ಕೂಟದಲ್ಲಿ ನ್ಯೂಝಿಲ್ಯಾಂಡ್‌ಗೆ ಮೊದಲ ಸೋಲು ಅನುಭವಿಸಿದೆ.
Huge congratulations to #TeamIndia on their stunning 5th consecutive win in #CWC2023! 🇮🇳 @MdShami11‘s 5-wicket haul, @imVkohli‘s and @imjadeja’s brilliant batting anchored the victory. Let’s maintain this winning momentum and march ahead! @BCCI pic.twitter.com/xwYGiFneAG
— Jay Shah (@JayShah) October 22, 2023
ಗೆಲ್ಲಲು ನ್ಯೂಝಿಲ್ಯಾಂಡ್ ನೀಡಿದ್ದ 274 ರನ್‌ಗಳ ಗುರಿ ನೀಡಿಯನ್ನು ಟೀಮ್ ಇಂಡಿಯಾ 48 ಓವರ್‌ಗಳಲ್ಲಿ ತಲುಪಿತು. ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾರ ಪರ ಬೌಲಿಂಗ್‌ನಲ್ಲಿ ಮಿಂಚಿ, ಐದು ವಿಕೆಟ್ ಗಳಿಸಿದ್ದ ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶತಕ ವಂಚಿತ ವಿರಾಟ್ ಕೊಹ್ಲಿ
274 ರನ್‌ಗಳ ಗುರಿ ಪಡೆದ ಟೀಮ್ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 71 ರನ್ ಕಲೆ ಹಾಕುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು.
ರೋಹಿತ್ ಶರ್ಮಾ 46 (40) ರನ್ ಗಳಿಸಿದ್ದಾಗ ಔಟಾಗುವ ಮೂಲಕ 4 ರನ್‌ನಿಂದ ಅರ್ಧಶತಕದಿಂದ ವಂಚಿತರಾದರೆ, ಶುಭಮನ್ ಗಿಲ್ 26 (31) ರನ್ ಗಳಿಸಿ, ಔಟಾದರು.
ಆ ಬಳಿಕ ಬಂದ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್ ರಾಹುಲ್ ಕ್ರಮವಾಗಿ 33 ಹಾಗೂ 27 ರನ್ ಗಳಿಸಿ, ತಮ್ಮಿಂದಾದ ಕೊಡುಗೆ ನೀಡಿದರು. ವಿಶ್ವಕಪ್‌ನಲ್ಲಿ ಮೊದಲ ಅವಕಾಶ ಪಡೆದಿದ್ದ ಬಲಗೈ ಬ್ಯಾಟರ್ ಸೂರ್ಯಕುಮಾರ್ ಯಾದವ್, ರನ್ ತೆಗೆಯುವ ಭರದಲ್ಲಿ 2 ರನ್‌ಗೆ ರನೌಟ್ ಆಗಿ ನಿರ್ಗಮಿಸಿದರು.
ಟೀಮ್ ಇಂಡಿಯಾದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಶತಕ ಬಾರಿಸುವ ಅಂಚಿನಲ್ಲಿ ಸಿಕ್ಸ್ ಹೊಡೆಯುವ ಪ್ರಯತ್ನಕ್ಕೆ ಕೈ ಹಾಕಿ, ಕ್ಯಾಚ್ ನೀಡಿ ಕೇವಲ 5 ರನ್‌ಗಳಿಂದ ಶತಕದ ಹೊಸ್ತಿಲಲ್ಲಿ ಎಡವಿದರು. 104 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ, 8 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳ ನೆರವಿನೊಂದಿಗೆ 95 ರನ್ ಗಳಿಸಿ, ಹೆನ್ರಿ ಎಸೆತದಲ್ಲಿ ಫಿಲಿಫ್ಸ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
First game of the tournament for him and Mohd. Shami receives the Player of the Match award for his outstanding five-wicket haul in Dharamsala 🏆👏
Scorecard ▶️ https://t.co/Ua4oDBM9rn#TeamIndia | #CWC23 | #MenInBlue | #INDvNZ pic.twitter.com/21kegb4VB0
— BCCI (@BCCI) October 22, 2023
ತಂಡದ ಗೆಲುವಿಗೆ ವಿರಾಟ್ ಕೊಹ್ಲಿ ಜೊತೆ ಕೈ ಜೋಡಿಸಿದ ಎಡಗೈ ಬ್ಯಾಟರ್ ರವೀಂದ್ರ ಜಡೇಜಾ, ತಾನು ಎದುರಿಸಿದ 43 ಎಸೆತಗಳಲ್ಲಿ 35 ರನ್ ಗಳಿಸಿದರು. ಇದರಲ್ಲಿ ಒಂದು ಸಿಕ್ಸ್ ಹಾಗೂ ಮೂರು ಬೌಂಡರಿ ಸೇರಿತ್ತು. ಕೊನೆಯಲ್ಲಿ ಟೀಮ್ ಇಂಡಿಯಾ ನ್ಯೂಝಿಲ್ಯಾಂಡ್ ನೀಡಿದ್ದ 274 ರನ್‌ಗಳ ಗುರಿಯನ್ನು 48 ಓವರ್‌ಗಳಲ್ಲಿ ತಲುಪಿತು.
ನ್ಯೂಝಿಲ್ಯಾಂಡ್ ಪರ ಲೂಕಿ ಫರ್ಗೂಸನ್ ಎರಡು ವಿಕೆಟ್ ಪಡೆದರೆ, ಟ್ರೆಂಟ್ ಬೋಲ್ಟ್, ಮ್ಯಾಟ್ ಹೆನ್ರಿ ಹಾಗೂ ಮಿಚೆಲ್ ಸ್ಯಾಂಟನರ್ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.