- ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಗೆಲುವಿನ ಓಟ ಮುಂದುವರಿಸಿದ ಟೀಮ್ ಇಂಡಿಯಾ
- ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಅರ್ಧಶತಕ
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ವಿಶ್ವಕಪ್ ಕೂಟದ 12ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಟೀಮ್ ಇಂಡಿಯಾ ಏಳು ವಿಕೆಟ್‌ಗಳಿಂದ ಸೋಲಿಸಿದೆ. ಆ ಮೂಲಕ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಟೀಮ್ ಇಂಡಿಯಾ ಗೆಲುವಿನ ಓಟವನ್ನು ಮುಂದುವರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಬಾಬರ್ ಆಝಂ ಪಡೆ, ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡ ಪರಿಣಾಮ ಕೇವಲ 42.5 ಓವರ್‌ಗಳಲ್ಲಿ ಕೇವಲ 191 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿತ್ತು.
ಪಾಕ್ ನೀಡಿದ್ದ ಈ ಸುಲಭ ಗುರಿಯನ್ನು ಬೆನ್ನಟ್ಟಿದ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ, ಕೇವಲ 30.3 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
India continue their unbeaten run against Pakistan in the Men’s @cricketworldcup with an emphatic win in Ahmedabad 👊#CWC23 | #INDvPAK pic.twitter.com/jfjRfvO5k6
— ICC (@ICC) October 14, 2023
ಟೀಮ್ ಇಂಡಿಯಾ ಪರ ನಾಯಕನ ಆಟವಾಡಿದ ರೋಹಿತ್ ಶರ್ಮಾ 62 ಎಸೆತಗಳನ್ನು ಎದುರಿಸಿ ಆರು ಬೌಂಡರಿ ಹಾಗೂ ಆರು ಸಿಕ್ಸ್ ಅನ್ನು ಒಳಗೊಂಡು 86 ರನ್ ಗಳಿಸಿ, ಶಾಹೀನ್ ಶಾ ಅಫ್ರಿದಿ ಬೌಲಿಂಗ್‌ನಲ್ಲಿ ಇಫ್ತಿಕಾರ್‌ಗೆ ಕ್ಯಾಚಿತ್ತು ಔಟಾದರು. ಆ ಮೂಲಕ 14 ರನ್‌ಗಳಿಂದ ಶತಕ ಗಳಿಸುವ ಅವಕಾಶ ಕಳೆದುಕೊಂಡರು.
ಟೀಮ್ ಇಂಡಿಯಾ ಪರ ಮೊದಲ ವಿಶ್ವಕಪ್ ಪಂದ್ಯವನ್ನಾಡಿದ ಆರಂಭಿಕ ಆಟಗಾರ ಶುಭಮನ್ ಗಿಲ್ 11 ಎಸೆತಗಳನ್ನು ಎದುರಿಸಿ 4 ಬೌಂಡರಿಯುಳ್ಳ 16 ರನ್ ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ 18 ಎಸೆತಗಳಲ್ಲಿ 16 ರನ್ ಗಳಿಸಿ ನಿರ್ಗಮಿಸಿದರು.
Make it 3⃣ in a row for #TeamIndia! 👏 👏
Shreyas Iyer sails past FIFTY as India beat Pakistan by 7 wickets! 👍 👍
Scorecard ▶️ https://t.co/H8cOEm3quc#CWC23 | #INDvPAK | #MeninBlue pic.twitter.com/ucoMQf2bmU
— BCCI (@BCCI) October 14, 2023
ಕೊನೆಯಲ್ಲಿ ಶ್ರೇಯಸ್ ಅಯ್ಯರ್ 53*(3 ಬೌಂಡರಿ, 2 ಸಿಕ್ಸ್) ಹಾಗೂ ಕೆ ಎಲ್ ರಾಹುಲ್ 19 ರನ್ ಗಳಿಸಿ, ಔಟಾಗದೆ ಉಳಿದರು.
ಪಾಕ್ ಪರ ಬೌಲಿಂಗ್‌ನಲ್ಲಿ ಶಾಹೀನ್ ಶಾ ಅಫ್ರಿದಿ ಎರಡು ವಿಕೆಟ್ ಪಡೆದರೆ, ಹಸನ್ ಅಲಿ ಒಂದು ವಿಕೆಟ್ ಪಡೆದರು.
Jasprit Bumrah’s exceptional effort with the ball helps him win the @aramco #POTM 👌#CWC23 | #INDvPAK pic.twitter.com/3ab7n0Pl2T
— ICC (@ICC) October 14, 2023
ಟೀಮ್ ಇಂಡಿಯಾ ಬೌಲಿಂಗ್‌ನಲ್ಲಿ ಏಳು ಓವರ್ ಎಸೆದು ಕೇವಲ 19 ರನ್ ನೀಡಿ, ಪ್ರಮುಖ ಎರಡು ವಿಕೆಟ್ ಪಡೆದಿದ್ದ ಜಸ್‌ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗೆಲುವಿನ ಓಟ ಮುಂದುವರಿಸಿದ ಟೀಮ್ ಇಂಡಿಯಾ
ಕಳೆದ 31 ವರ್ಷಗಳಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಈವರೆಗೆ ಒಂದೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಈ ಪಂದ್ಯಕ್ಕೂ ಮೊದಲು ಏಳು ಬಾರಿ ಮುಖಾಮುಖಿಯಾದಾಗಲೂ ಭಾರತವೇ ಗೆದ್ದುಕೊಂಡಿತ್ತು. ಇಂದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಗೆದ್ದ ಪರಿಣಾಮ, ಪಾಕ್ ವಿರುದ್ಧ 8-0 ಅಂತರದೊಂದಿಗೆ ವಿಶ್ವಕಪ್ ಗೆಲುವು ಮುಂದುವರಿಸಿದೆ.
🚨 Milestone Alert 🚨
3⃣0⃣0⃣ ODI Sixes & Going Strong 💪 💪
Rohit Sharma 🤝 Another Landmark
Follow the match ▶️ https://t.co/H8cOEm3quc#CWC23 | #TeamIndia | #INDvPAK | #MeninBlue pic.twitter.com/fjrq0AQFyF
— BCCI (@BCCI) October 14, 2023
300 ಸಿಕ್ಸರ್‌ಗಳ ಸರದಾರ ‘ಹಿಟ್ ಮ್ಯಾನ್’
ಹಿಟ್ ಮ್ಯಾನ್ ಎಂದೇ ಗುರುತಿಸಲ್ಪಡುವ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಪಾಕ್ ವಿರುದ್ಧದ ಇಂದಿನ ಪಂದ್ಯದಲ್ಲಿ ಒಟ್ಟು ಆರು ಸಿಕ್ಸ್ ಬಾರಿಸಿದ್ದಾರೆ. 4ನೇ ಸಿಕ್ಸ್ ಬಾರಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 300 ಸಿಕ್ಸ್ ದಾಟಿರುವ ಆಟಗಾರನಾಗಿ ಹೊಸ ದಾಖಲೆ ಬರೆದುಕೊಂಡಿದ್ದಾರೆ.
351 ಸಿಕ್ಸ್ ಬಾರಿಸಿರುವ ಪಾಕಿಸ್ತಾನದ ನಿವೃತ್ತ ಕ್ರಿಕೆಟಿಗ ಶಾಹೀದ್ ಅಫ್ರೀದಿ ಮೊದಲ ಸ್ಥಾನದಲ್ಲಿದ್ದರೆ, ವೆಸ್ಟ್‌ಇಂಡೀಸ್‌ನ ದೈತ್ಯ ಆಟಗಾರ ಕ್ರಿಸ್ ಗೇಲ್ 331 ಸಿಕ್ಸ್ ಬಾರಿಸಿ ಎರಡನೇ ಸ್ದಾನದಲ್ಲಿದ್ದಾರೆ. ಒಟ್ಟು 302 ಸಿಕ್ಸ್‌ನೊಂದಿಗೆ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ಸನತ್ ಜಯಸೂರ್ಯ (ಶ್ರೀಲಂಕಾ-ಸಿಕ್ಸರ್‌ಗಳು 270) ಹಾಗೂ ಎಂ ಎಸ್ ಧೋನಿ (ಭಾರತ-ಸಿಕ್ಸರ್‌ಗಳು 229) ಕ್ರಮವಾಗಿ ನಾಲ್ಕನೇ ಹಾಗೂ ಐದನೇ ಸ್ಥಾನದಲ್ಲಿದ್ದಾರೆ.