ಅಹಮದಾಬಾದ್‌ನ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿರುವ 241 ರನ್‌ಗಳ ಸವಾಲನ್ನು ಬೆನ್ನತ್ತಿರುವ ಆಸೀಸ್‌ಗೆ ಬೌಲರ್‌ಗಳು ಆರಂಭದಲ್ಲೇ ಪ್ರಮುಖ ಮೂರು ವಿಕೆಟ್‌ಗಳನ್ನು ಕೀಳುವ ಮೂಲಕ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದಾರೆ.
ಬುಮ್ರಾ ಎಸೆದ ಮೊದಲ ಓವರ್‌ನಲ್ಲೇ ಆಸೀಸ್‌ನ ಆರಂಭಿಕ ಬ್ಯಾಟರ್‌ಗಳು 15 ರನ್‌ಗಳನ್ನು ಬಾಚುವ ಮೂಲಕ ಸ್ಫೋಟಕ ಆರಂಭದ ಮುನ್ಸೂಚನೆ ನೀಡಿದರು. ಆದರೆ ಇದಕ್ಕೆ 2ನೇ ಓವರ್ ಎಸೆದ ಸೆಮಿಫೈನಲ್ ಪಂದ್ಯದ ಮೊಹಮ್ಮದ್ ಶಮಿ ಅವಕಾಶ ನೀಡಲಿಲ್ಲ.
Absolute scenes 🔥#INDvAUS LIVE: https://t.co/uGuYjoOWie #CWC23 #CWC23Final pic.twitter.com/t68TKTnLvz
— ESPNcricinfo (@ESPNcricinfo) November 19, 2023
ಮೊಹಮ್ಮದ್ ಶಮಿ ಎಸೆದ 2ನೇ ಓವರ್ನ 2ನೇ ಎಸೆತದಲ್ಲಿ ಸ್ಲಿಪ್ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡುವ ಮೂಲಕ ಡೇವಿಡ್ ವಾರ್ನರ್ 7 ರನ್ ಬಾರಿಸಿ ಔಟಾದರೆ, ಜಸ್ಪ್ರೀತ್ ಬುಮ್ರಾ ಎಸೆದ 5ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿ 15 ಎಸೆತಗಳಲ್ಲಿ 15 ರನ್ ಬಾರಿಸಿದ್ದ ಮಿಚೆಲ್ ಮಾರ್ಷ್ ಔಟಾದರು.
ಆ ಬಳಿಕ ಜಸ್ಪ್ರೀತ್ ಬುಮ್ರಾ ಎಸೆದ 7ನೇ ಓವರ್ನ 4ನೇ ಎಸೆತದಲ್ಲಿ ಆಕರ್ಷಕ ಸ್ಟ್ರೈಡ್ ಡ್ರೈವ್ ಫೋರ್ ಬಾರಿಸಿದ ಸ್ಟೀವ್ ಸ್ಮಿತ್, ಕೊನೆಯ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದು, 4 ರನ್ ಗಳಿಸಿದ್ದ ಸ್ಟೀವ್ ಸ್ಮಿತ್ ನಿರ್ಗಮಿಸಿದರು. ಆ ಮೂಲಕ ಟೀಮ್ ಇಂಡಿಯಾಗೆ ಜಸ್ಪ್ರೀತ್ ಬುಮ್ರಾ ಮೂರನೇ ಯಶಸ್ಸು ತಂದುಕೊಟ್ಟರು.
It was not out, but Steven Smith didn’t review. pic.twitter.com/pyKbs1BZ5i
— Mufaddal Vohra (@mufaddal_vohra) November 19, 2023
ಸ್ಟೀವ್ ಸ್ಮಿತ್ ಎಲ್‌ಬಿಡಬ್ಲ್ಯೂ ನಿಜವಾಗಿಯೂ ಔಟ್ ಅಲ್ಲ ಎನ್ನಲಾಗಿದೆ. ರೀವ್ಯೂ ತೆಗೆದುಕೊಳ್ಳುವ ಅವಕಾಶವಿದ್ದರೂ ಅದನ್ನು ಬಳಸಿಕೊಳ್ಳದೇ, ನೇರವಾಗಿ ಪೆವಿಲಿಯನ್ ಕಡೆಗೆ ತೆರಳಿದರು.
ಸದ್ಯ 16 ಓವರ್‌ಗಳು ಮುಕ್ತಾಯವಾಗಿದ್ದು, ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 87 ರನ್ ದಾಖಲಿಸಿದೆ. ಟ್ರಾವಿಸ್ ಹೆಡ್ ಹಾಗೂ ಲಾಬೂಶೈನ್ ಕ್ರೀಸ್‌ನಲ್ಲಿದ್ದಾರೆ.
The impact for Steven Smith’s wicket was outside the stump 😮
He did not review the decision…#INDvAUS LIVE: https://t.co/uGuYjoOWie #CWC23 #CWC23Final pic.twitter.com/QeGk06ZPEG
— ESPNcricinfo (@ESPNcricinfo) November 19, 2023